Drop


Sunday, July 19, 2015

KABADDI RESTARTED:

ಕಬಡ್ಡಿ ಕ್ರೀಡೆ ಮತ್ತೆ ಪ್ರಾರಂಭ

ಕಬಡ್ಡಿ
ಭಾರತದ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಸುಮಾರು 4000 ವರ್ಷ ಪುರಾತನವಾದದ್ದು. ಭಾರತದ ದೇಸೀ ಕ್ರೀಡೆ ಕಬಡ್ಡಿಯು ದೇಶಕ್ಕೆ ಸಾಕಷ್ಟು ಹೆಗ್ಗಳಿಕೆ ತಂದುಕೊಟ್ಟಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಗ್ರಾಮೀಣ ಜನರಿಗೆ ಇಷ್ಟ.

ಕಬಡ್ಡಿ ಹಲವಾರು ಹೆಸರುಗಳಿಂದ ಪ್ರಚಲಿತ. ಅವುಗಳಲ್ಲಿ , ಕಬಡ್ಡಿ ,ಹುತುತು, ಸಡುಗುಡು, ಗುಡುಗುಡು, ಪಲಿನ್ಜಡುಗಿದು, ಹಾಗೂ ಸಡುಗೂಡತ್ತಿ .

ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಆಡುತ್ತಾರೆ.

ಕಬಡ್ಡಿ ಸಂಸ್ಥೆಗಳು

1.ಇಂಟರ್ ನ್ಯಾಶನಲ್ ಕಬಡ್ಡಿ ಫೆಡರೇಶನ್ (ಐಕೆಫ್)
2.ಕರ್ನಾಟಕ ರಾಜ್ಯ ಕಬಡ್ಡಿ ಸಂಸ್ಥೆ
3.ಕಬಡ್ಡಿ ಅಸೋಸಿಯೇಶನ್ ಕಪ್

17ನೇ ಏಷ್ಯನ್‌ ಕ್ರೀಡಾಕೂಟ 2014-ಕಬಡ್ಡಿ

17ನೇ ಏಷ್ಯನ್‌ ಕ್ರೀಡಾಕೂಟ 2014 ರಲ್ಲಿ ಕರ್ನಾಟಕ

ಮಹಿಳಾ ಕಬಡ್ಡಿ ತಂಡಕ್ಕೆ ಕನ್ನಡತಿ ತೇಜಸ್ವಿನಿ ಬಾಯಿ ನಾಯಕಿ. ರೈಲ್ವೆಯಲ್ಲಿ ಉದ್ಯೋಗಿ­ಯಾಗಿರುವ ಕರ್ನಾಟಕದ ಮಮತಾ ಪೂಜಾರಿ, ಕೆಎಸ್‌ಪಿಯಲ್ಲಿರುವ ಸುಷ್ಮಿತಾ ಪವಾರ್ ಮತ್ತು ಜಯಂತಿ ಅವರು ತಂಡದಲ್ಲಿದ್ದರು.17ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಎರಡು ಸ್ವರ್ಣ ಪದಕಗಳು ಲಭ್ಯವಾಗಿದ್ದು, ಪುರುಷರ ಮತ್ತು ಮಹಿಳೆಯರ ಕಬಡ್ಡಿ ತಂಡಗಳು ಇರಾನ್ ತಂಡಗಳನ್ನು ಸೋಲಿಸಿ ಎರಡೂ ಸ್ವರ್ಣ ಪದಕವನ್ನು ಮುಡಿಗೇರಿಸಿಕೊಂಡಿವೆ.

ಭಾರತದ ಕಬಡ್ಡಿ ತಂಡ

ಪುರುಷರು,

ಥಾಕೂರ್ ರಾಕೇಶ್ ಕುಮಾರ್, ಗುರುಪೀತ್ ಸಿಂಗ್, ನವನೀತ್ ಗೌತಮ್, ಸುರ್ಜೀತ್ ಕುಮಾರ್, ಪರ್ವೀನ್ ಕುಮಾರ್, ನಿತಿನ್ ಮದಾನೆ, ಸುರ್ಜೀತ್ ಸಿಂಣ್, ಅನೂಪ್ , ಗುರುಪೀತ್, ರಾಜಗುರು, ಸುಬ್ರಮಣಿಯನ್.

ಮಹಿಳೆಯರು

ಕವಿತಾ , ಕವಿತಾದೇವಿ, ತೇಜಸ್ವಿನಿ ಬಾಯಿ, ಅಭಿಲಾಷಾ ಮ್ಹಾತ್ರೆ, ಪೂಜಾ ಥಾಕೂರ್, ಪ್ರಿಯಾಂಕಾ, ಅನಿತಾ ಮಾವಿ ಲಕ್ಷ್ಮಣ ಸಿಂಗ್, ಜಯಂತಿ , ಸುಮಿತ್ರಾ ಶರ್ಮಾ, ಮಮತಾ ಪೂಜಾರಿ, ಸುಶ್ಮಿತಾ ಪವಾರ್, ಕಿಶೋರಿ ದಿಲೀಪ್ ಸಿಂಧೆ.

ಪುರುಷ ಮತ್ತು ಮಹಿಳಾ ತಂಡಗಳು.
ಏಷಿಯನ್ ಕ್ರೀಡಾಕೂಟಗಳು

ಭಾರತದ ಕಬಡ್ಡಿ ತಂಡ

ಏಷ್ಯನ್ ಗೇಮ್ಸ್‌ನಲ್ಲಿ ಸತತ ಎರಡನೇ ಬಾರಿಗೆ ಬಂಗಾರ ಗೆದ್ದಿರುವ ಭಾರತ ಮಹಿಳಾ ತಂಡ ಕೂಡ ವಿಶ್ವ ಕಪ್ ಕಬಡ್ಡಿಯಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡು ಪ್ರಭುತ್ವ ಮೆರೆದಿದೆ.
2012ರಲ್ಲಿ ಪಂಜಾಬ್‌ನಲ್ಲಿ ನಡೆದ ಮೊದಲ ವಿಶ್ವಕಪ್‌ನಲ್ಲಿ ಇರಾನ್ ತಂಡವನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡ ಕರ್ನಾಟಕದ ಮಮತಾ ಪೂಜಾರಿ ಸಾರಥ್ಯದ ಭಾರತ ತಂಡ 2013ರಲ್ಲಿ ನಡೆದ ಟೂರ್ನಿ ಯಲ್ಲೂ ನ್ಯೂಜಿಲೆಂಡ್ ತಂಡವನ್ನು ಸದೆಬಡಿದು ದ್ವಿತೀಯ ಬಾರಿಗೆ ಪ್ರಶಸ್ತಿ ತಮ್ಮದಾಗಿಸಿಕೊಂಡಿದೆ.
ಕಬಡ್ಡಿ ಪದಕದ ಪಟ್ಟಿ

ವಿಶ್ವಕಪ್ ಟೂರ್ನಿಯ ಹಿನ್ನೆಲೆ

2004ರಲ್ಲಿ ಆರಂಭವಾದ ವಿಶ್ವಕಪ್ ಕಬಡ್ಡಿ ಟೂರ್ನಿ 2005 ಮತ್ತು 2006ರನ್ನು ಹೊರತುಪಡಿಸಿ ಈವರೆಗೂ ಆರು ಬಾರಿ ನಡೆದಿದೆ. ವಾರ್ಷಿಕ ಟೂರ್ನಿ ಇದಾಗಿದ್ದು, ಭಾರತ ಸತತ ಆರು ಬಾರಿಯು ಚಾಂಪಿ ಯನ್ ಪಟ್ಟ ಅಲಂಕರಿಸಿದೆ.ಅದರಲ್ಲೂ 2010, 2012,2013ರಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಭಾರತ ಹೊರತುಪಡಿಸಿದರೆ, ಪಾಕಿಸ್ತಾನ ಮತ್ತು ಇರಾನ್ ಕ್ರಮುವಾಗಿ ಮೂರು ಹಾಗೂ ಎರಡು ಬಾರಿ ರನ್ನರ್‌ಅಪ್ ಸ್ಥಾನಗಳಿಸಿದ್ದು, ಭಾರತಕ್ಕೆ ಸವಾಲೊಡ್ಡಬಲ್ಲ ತಂಡಗಳಾಗಿವೆ.
2012ರಲ್ಲಿ ಆರಂಭವಾದ ಮಹಿಳಾ ಟೂರ್ನಿ 2013ರಲ್ಲಿ ಎರಡನೇ ಬಾರಿಗೆ ನಡೆದಿದ್ದು, ಭಾರತವೇ ಇಲ್ಲಿಯೂ ಪ್ರಭುತ್ವ ಸಾಧಿಸಿದೆ.

ಹೆಣ್ಣು ಮಕ್ಕಳ ವಿಶ್ವ ಕಬಡ್ಡಿ

ತಮಿಳುನಾಡು -ಸಾಡುಗೂಡು ಎಂಬಲ್ಲಿ ನಡೆದ ಹೆಣ್ಣು ಮಕ್ಕಳ ಕಬಡ್ಡಿ ಆಟ (From English site: Women playing Kabaddi/Sadugudu in Tamil Nadu)
ಹೆಣ್ಣು ಮಕ್ಕಳ ವಿಶ್ವ ಕಬಡ್ಡಿ ಮೊದಲ ಬಾರಿ 2012 ರಲ್ಲಿ ಪಂಜಾಬಿನಲ್ಲಿ ಆಡಲಾಯಿತು.ಇಂಡಿಯಾ ನ್ಯಾಶನಲ್ ಕಬಡ್ಡಿ ಟೀಮ್-ಭಾರತ ತಂಡವು,ಪೈನಲ್ ನಲ್ಲಿ ಇರಾನ್[Iran national kabaddi team] ತಂಡವನ್ನು ಸೋಲಿಸಿ ಪಂದ್ಯ ಶ್ರೇಷ್ಟವಾಗಿ ಹೊರಹೊಮ್ಮಿತು.2013ರಲ್ಲಿ ತನ್ನ ಪ್ರಥಮ ಪ್ರಯತ್ನದ ಎದುರಾಳಿ ನ್ಯೂಜಿಲೆಂಡನ್ನು ಅಂತಿಮ ಪಂದ್ಯದಲ್ಲಿ ಸೋಲಿಸಿ ಭಾರತ ತನ್ನ ಪಂದ್ಯ-ಶ್ರೇಷ್ಠತೆಯನ್ನು ಉಳಿಸಿಕೊಂಡಿತು.

ಕಬಡ್ಡಿ ತಂಡವಿರುವ ದೇಶಗಳ ಪಟ್ಟಿ .

ಕ್ರ.ಸಂ. ವರ್ಷ
ಕ್ರ.ಸಂ. ದೇಶ ಏಷ್ಯಾಡ್`ನಲ್ಲಿ
`ಕಬಡ್ಡಿಗೆ `ಸೇರಿದ ವರ್ಷ

1, ಭಾರತ -1990
2, ಟರ್ಕಿ -
3, ಇರಾನ 2006
4,ಅಮೇರಿಕ -
5, ಇಥೋಪಿಯಾ -
6,ಮಲೇಷ್ಯಾ -
7,ರಷ್ಯಾ -
8 ,ಇಂಡೋನೇಷ್ಯಾ -
9 ,ಬ್ರಜಿಲ್ -
10, ಥೈಲ್ಯಾಂಡ 2010
11, ಬ್ರಿಟನ -
12, ವಿಯೆಟ್ನಾಮ್ -
13, ಜರ್ಮನಿ -
14, ಪಾಕಿಸ್ತಾನ -1990
15, ಫಿಲಿಪ್ಪೀನ್ಸ್ -
16, ಬಾಂಗ್ಲಾದೇಶ -
17, ಇಜಿಪ್ತ -
18, ಜಪಾನ್ -1990
19, ನೈಜೀರೆಯ -
20, ಬಾಂಗ್ಲಾ 1990
21, ಶ್ರೀಲಂಕಾ 1998
22, ದಕ್ಷಿಣ ಕೊರಿಯಾ 2014

ಮುಂಬೈ (ಪಿಟಿಐ): ಹಲವು ತಿಂಗಳುಗಳಿಂದ ಕುತೂಹಲದಿಂದ ಕಾಯುತ್ತಿದ್ದ  ಪ್ರೊಫೆಷನಲ್‌ ಕಬಡ್ಡಿ ಲೀಗ್‌ ಎರಡನೇ ಆವೃತ್ತಿ ಶನಿವಾರ ಆರಂಭವಾಗಿದೆ. ಒಂದು ತಿಂಗಳು ನಡೆಯುವ ಟೂರ್ನಿಯಲ್ಲಿ ಎಂಟು ತಂಡಗಳು ಚಾಂಪಿಯನ್‌ ಪಟ್ಟಕ್ಕಾಗಿ ಪೈಪೋಟಿ ನಡೆಸಲಿವೆ.

ಇಲ್ಲಿನ ರಾಷ್ಟ್ರೀಯ ಸ್ಪೋರ್ಟ್ಸ್ ಕ್ಲಬ್‌ ಆಫ್‌ ಇಂಡಿಯಾದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಮತ್ತು ರನ್ನರ್ಸ್‌ ಅಪ್‌ ಯು ಮುಂಬಾ ಪೈಪೋಟಿ ನಡೆಸಲಿವೆ. ದಿನದ ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಬಂಗಾಳ ವಾರಿಯರ್ಸ್ ಸೆಣಸಾಡಲಿವೆ.

ಕಬಡ್ಡಿ ಲೀಗ್ ಟೂರ್ನಿಗಾಗಿ ಸಾಕಷ್ಟು ಅಭಿಮಾನಿಗಳು ಕಾಯುತ್ತಿದ್ದಾರೆ. ಹೋದ ವರ್ಷ ಆರಂಭವಾದ ಗ್ರಾಮೀಣ ಕ್ರೀಡೆಗೆ ಸಾಕಷ್ಟು ಪ್ರಚಾರ ಲಭಿಸಿತ್ತು. ಎಲ್ಲಾ ಏಷ್ಯನ್‌ ಕ್ರೀಡಾಕೂಟಗಳಲ್ಲಿ  ಭಾರತ  ಚಿನ್ನದ ಪದಕವನ್ನೇ ಜಯಿಸಿದೆ. ಆದ್ದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕಬಡ್ಡಿ ಆಟಗಾರರ ಶಕ್ತಿ ಏನೆಂಬುದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ದೇಶಿ ಆಟದ ಸೊಬಗನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳ ಕಾತರ ಹೆಚ್ಚಾಗಿದೆ.

ಎರಡನೇ ಆವೃತ್ತಿಯಲ್ಲಿ ಆಟಗಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮೊದಲು ಒಂದು ತಂಡದಲ್ಲಿ 14 ಜನರಿದ್ದರು. ಈ ಸಂಖ್ಯೆ ಈಗ 25ಕ್ಕೆ ಏರಿದೆ. ಪ್ರತಿ ತಂಡಗಳಲ್ಲಿಯೂ ಯುವ ಹಾಗೂ ಸ್ಥಳೀಯ ಆಟಗಾರರು ಇರುವುದು ಆಕರ್ಷಣೆ ಹೆಚ್ಚಿಸಿದೆ. ಮೊದಲ ಲೆಗ್‌ ಮುಂಬೈನಲ್ಲಿ ಆಯೋಜನೆಯಾಗಿದ್ದು, ನಂತರದ ಪಂದ್ಯಗಳು ಕ್ರಮವಾಗಿ ಜೈಪುರ, ತೆಲುಗು ಟೈಟಾನ್ಸ್ ತಂಡದ ತವರಿನ ಅಂಗಳವಾದ ಹೈದರಾಬಾದ್, ದೆಹಲಿ, ಬೆಂಗಳೂರು ಮತ್ತು ಪುಣೆಯಲ್ಲಿ ಪಂದ್ಯಗಳು ಜರುಗಲಿವೆ. ಟೈಟಾನ್ಸ್ ತಂಡಕ್ಕೆ ಹೋದ ವರ್ಷ ವಿಶಾಖಪಟ್ಟಣ ತವರಿನ ಕ್ರೀಡಾಂಗಣವಾಗಿತ್ತು.
'ಮೊದಲ ಆವೃತ್ತಿಯಲ್ಲಿ ಕಬಡ್ಡಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಆದ್ದರಿಂದ ಈ ವರ್ಷದಿಂದ ಬಹುಮಾನ ಮೊತ್ತದಲ್ಲಿ ಹೆಚ್ಚಳ ಮಾಡಲಾಗಿದೆ. ವಿದೇಶಿ ಆಟಗಾರರಿಗೆ ಎದುರಾಗಿದ್ದ ವೀಸಾ ಸಮಸ್ಯೆಯೂ ಪರಿಹಾರವಾಗಿದೆ' ಎಂದು ವೀಕ್ಷಕ ವಿವರಣೆಗಾರ ಚಾರು ಶರ್ಮಾ ತಿಳಿಸಿದ್ದಾರೆ.
ಒಸ್ತರೊಕ್‌ಗೆ ಹೆಚ್ಚಿನ ಹಣ:   ಭಾರತ ಕಬಡ್ಡಿ ತಂಡದ ಆಟಗಾರ ರಾಕೇಶ್ ಕುಮಾರ್‌ ಚೊಚ್ಚಲ ಆವೃತ್ತಿಯಲ್ಲಿ ಹೆಚ್ಚು ಹಣಕ್ಕೆ ಮಾರಾಟವಾದ ದಾಖಲೆ ಹೊಂದಿದ್ದರು. ರಾಕೇಶ್ ₹ 12.8 ಲಕ್ಷಕ್ಕೆ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡದ ಪಾಲಾಗಿದ್ದರು. ಎರಡನೇ ಆವೃತ್ತಿಗೆ ಇರಾನಿನ ಹಡಿ ಒಸ್ತರೊಕ್‌ ₹ 21.1 ಲಕ್ಷ ಮಾರಾಟವಾಗಿದ್ದು, ಹೆಚ್ಚು ಬೆಲೆಗೆ ಮಾರಾಟವಾದ ಕೀರ್ತಿ ಪಡೆದಿದ್ದಾರೆ.
***
ಪ್ರಾದೇಶಿಕ ಭಾಷೆಗಳಲ್ಲೂ ಪ್ರಸಾರ
ಕಬಡ್ಡಿ ಲೀಗ್‌ನ ಪಂದ್ಯಗಳ ಪ್ರಸಾರ ವ್ಯಾಪ್ತಿ ವಿಸ್ತರಿಸಲು ಮುಂದಾಗಿರುವ ಲೀಗ್‌ನ ರೂವಾರಿ ಚಾರು ಶರ್ಮಾ ಈ ವರ್ಷದಿಂದ ಪ್ರಾದೇಶಿಕ ಭಾಷೆಗಳ ವಾಹಿನಿಗಳಲ್ಲೂ ಪಂದ್ಯಗಳನ್ನು ನೇರ ಪ್ರಸಾರ ಮಾಡಲು ವ್ಯವಸ್ಥೆ ಮಾಡಿದ್ದಾರೆ. ಸ್ಟಾರ್‌ ಸ್ಟಾರ್‌ ಸ್ಪೋರ್ಟ್ಸ್–2ರಲ್ಲಿ ಇಂಗ್ಲಿಷ್‌ನಲ್ಲಿ ವೀಕ್ಷಕ ವಿವರಣೆ ಪ್ರಸಾರವಾಗಲಿದೆ.
ಕನ್ನಡ (ಸುವರ್ಣ ಪ್ಲಸ್‌), ಹಿಂದಿ (ಸ್ಟಾರ್‌ ಸ್ಪೋರ್ಟ್ಸ್‌–3 ಹಾಗೂ ಸ್ಟಾರ್‌ ಗೋಲ್ಡ್‌), ತೆಲುಗು (ಮಾ ಮೂವೀಸ್‌), ಮರಾಠಿ (ಸ್ಟಾರ್‌ ಪ್ರವಾಹ್‌, ಭಾನುವಾರ ಮಾತ್ರ) ಪ್ರಸಾರವಾಗಲಿದೆ.
ಬಹುಮಾನ ಮೊತ್ತ ಹೆಚ್ಚಳ
ಟೂರ್ನಿಯ  ಬಹುಮಾನ ಮೊತ್ತದಲ್ಲಿ ಹೆಚ್ಚಳ ಮಾಡಲಾಗಿದೆ. ಹೋದ ವರ್ಷ ಚಾಂಪಿಯನ್‌ ತಂಡಕ್ಕೆ ₹ 50 ಲಕ್ಷ ನೀಡಲಾಗುತ್ತಿತ್ತು. ಎರಡನೇ ಆವೃತ್ತಿಯಿಂದ ಈ ಮೊತ್ತ ₹ 1 ಕೋಟಿಗೆ ಏರಿದೆ. ರನ್ನರ್ಸ್‌ ಅಪ್‌ ತಂಡಕ್ಕೆ ₹ 50 ಲಕ್ಷ ಲಭಿಸಲಿದೆ. ಮೂರನೇ ಸ್ಥಾನ ಪಡೆಯುವ ತಂಡ ₹ 30 ಲಕ್ಷ ಮತ್ತು ನಾಲ್ಕನೇ ಸ್ಥಾನಕ್ಕೆ ₹ 20 ಲಕ್ಷ ಬಹುಮಾನ ಸಿಗಲಿದೆ. ಹೋದ ವರ್ಷ 59 ರಾಷ್ಟ್ರಗಳಲ್ಲಿ ಕಬಡ್ಡಿ ಲೀಗ್‌ ಪಂದ್ಯಗಳು ಪ್ರಸಾರವಾಗಿದ್ದವು. ಈ ಬಾರಿ ನೂರಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಲೀಗ್ ಪ್ರಸಾರವಾಗಲಿದೆ.
***
ಮುಖ್ಯಾಂಶಗಳು
* ಇಂದಿನಿಂದ ಒಂದು ತಿಂಗಳು ಕಬಡ್ಡಿ ಹಬ್ಬ
* HotStar ಆ್ಯಪ್‌ನಲ್ಲಿ ಪಂದ್ಯಗಳ ನೇರ ಪ್ರಸಾರ
* ಇರಾನ್‌ನ ಹಡಿ  ₹ 21.1 ಲಕ್ಷಕ್ಕೆ ಮಾರಾಟ
***
ಇಂದಿನ ಪಂದ್ಯಗಳು
ಯು ಮುಂಬಾ–ಜೈಪುರ ಪಿಂಕ್‌ ಪ್ಯಾಂಥರ್ಸ್‌ (ರಾತ್ರಿ 8ಕ್ಕೆ)
ಬೆಂಗಳೂರು ಬುಲ್ಸ್‌–ಬಂಗಾಳ ವಾರಿಯರ್ಸ್‌ (ರಾತ್ರಿ 9ಕ್ಕೆ)

ಕಬಡ್ಡಿ ಕ್ರೀಡೆ ಪ್ರಿಯರೇ

ನಿಮ್ಮ ಮಾಹಿತಿಗಾಗಿ ನಿಮ್ಮವ,

ಕರ್ನಾಟಕ ರಾಜ್ಯ ನೇಕಾರ ಸಂಘದ

ರಾಜ್ಯಾಧ್ಯಕ್ಷರು

ಎಣ್ಣೆಗೆರೆ ಆರ್. ವೆಂಕಟರಾಮಯ್ಯ
( ವೈ. ವಿ. ರಾಜು )