Drop


Saturday, July 18, 2015

Karnataka State Eligibility Test: K- SET 2015, exam will be held on Dec 6, (download notification )

  ಡಿ.6ಕ್ಕೆ ರಾಜ್ಯ ಉಪನ್ಯಾಸಕ ಅರ್ಹತಾ ಪರೀಕ್ಷೆ.:
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯ ಉಪನ್ಯಾಸಕ ಅರ್ಹತಾ ಪರೀಕ್ಷೆಯನ್ನು (ಕೆ-–ಸೆಟ್) ಡಿಸೆಂಬರ್‌ 6ರಂದು ನಡೆಸಲಿದೆ. ನೋಡೆಲ್ ಕೇಂದ್ರಗಳಾದ ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ತುಮಕೂರಿನಲ್ಲಿ ಪರೀಕ್ಷೆ ನಡೆಯಲಿದೆ.
ಪರೀಕ್ಷಾ ಶುಲ್ಕ:
ಸಾಮಾನ್ಯ ವರ್ಗದವರಿಗೆರೂ1,000,
ಪ್ರವರ್ಗ -2ಎ, 2ಬಿ, 3ಎ, 3ಬಿಗೆ ಸೇರಿದವರಿಗೆರೂ 800, ಪ್ರವರ್ಗ -1, ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಂಗವಿಕಲರಿಗೆರೂ500.
ಆನ್‌ಲೈನ್ ಅರ್ಜಿ ಸಲ್ಲಿಕೆ ಜುಲೈ 20ರಂದು ಶುರುವಾಗಲಿದ್ದು, ಆ. 14ರ ಸಂಜೆ 5 ಗಂಟೆಗೆ ಕೊನೆಗೊಳ್ಳುತ್ತದೆ.
ರೂ100 ದಂಡ ಶುಲ್ಕದೊಂದಿಗೆ ಆ. 25ರ ಸಂಜೆ 5ರವರೆಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ನೋಂದಣಿ ನಂತರ ಬ್ಯಾಂಕ್ ಚಲನ್ ಡೌನ್‌ಲೋಡ್ ಮಾಡಿಕೊಂಡು, ಎಸ್‌ಬಿಎಂನ ಯಾವುದಾದರೂ ಶಾಖೆಯಲ್ಲಿ ಶುಲ್ಕ ಪಾವತಿಸಬೇಕು. ಬ್ಯಾಂಕ್ ಚಲನ್‌ನಲ್ಲಿ ನೀಡಿರುವ ಜರ್ನಲ್ ಸಂಖ್ಯೆಯನ್ನು ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಬೇಕು.  ಭರ್ತಿ ಮಾಡಿ ಡೌನ್‌ಲೋಡ್‌ ಮಾಡಿದ ಅರ್ಜಿಯೊಂದಿಗೆ ಬ್ಯಾಂಕ್ ಚಲನ್ ಹಾಗೂ ಇತರ ದಾಖಲೆಗಳನ್ನು ನೋಡೆಲ್ ಕೇಂದ್ರಕ್ಕೆ ಸಲ್ಲಿಸಲು ಸೆಪ್ಟೆಂಬರ್ 11 ಕೊನೆ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ:- 
http://kset.uni-mysore.ac.in/notification.php