Drop


Saturday, July 25, 2015

NEXT YEAR ONWARDS RTE SEATS ONLY FOR BPL CARDHOLDERS - KIMMANE RATNAKAR

ಬಿಪಿಎಲ್ ಕಾರ್ಡ್ ಹೊಂದಿರುವ
ಕುಟುಂಬದ ಮಕ್ಕಳಿಗೆ ಮಾತ್ರ ಆರ್ಟಿಇ
ಸೀಟು
ಬೆಂಗಳೂರು,ಜು.25-ಮುಂದಿನ
ವರ್ಷದಿಂದ ಸರ್ಕಾರಿ ಶಾಲೆಗಳಲ್ಲೇ
ಯುಕೆಜಿ ಶಿಕ್ಷಣ ಆರಂಭಿಸುವ ಮತ್ತು
ಬಿಪಿಎಲ್ ಕಾರ್ಡ್ ಹೊಂದಿರುವ
ಕುಟುಂಬದ ಮಕ್ಕಳಿಗೆ ಮಾತ್ರ ಆರ್ಟಿಇ
ಅಡಿ ಖಾಸಗಿ ಶಾಲೆಗಳಲ್ಲಿ ಸೀಟು
ಕೊಡಿಸುವ ಮಹತ್ವದ ಚಿಂತನೆಯನ್ನು
ರಾಜ್ಯ ಸರ್ಕಾರ ನಡೆಸಿದೆ ಎಂದು
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
ಕಿಮ್ಮನೆ ರತ್ನಾಕರ್ ತಿಳಿಸಿದರು.
ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ
ಅವರು, ಕಾಂಗ್ರೆಸ್ ಕಾರ್ಯಕರ್ತರ ಜತೆ
ಸಮಾಲೋಚನೆ ನಡೆಸಿದ ನಂತರ
ಸುದ್ದಿಗಾರರೊಂದಿಗೆ
ಮಾತನಾಡಿದರು.
ಆರ್ಟಿಇ ಅಡಿ ಖಾಸಗಿ ಶಾಲೆಗಳಲ್ಲಿ
ಸೀಟು ಪಡೆಯಲು ಆದಾಯ
ಪ್ರಮಾಣಪತ್ರವನ್ನು
ಆಧಾರವಾಗಿಟ್ಟುಕೊಳ್ಳಲಾಗಿದೆ.
ಇದು ಬಹಳಷ್ಟು
ದುರುಪಯೋಗವಾಗುತ್ತಿದೆ. 10
ಲಕ್ಷ ಆದಾಯ ಇರುವವರು
ಸುಲಭವಾಗಿ 35 ಸಾವಿರ ರೂ.ಆದಾಯ
ಪ್ರಮಾಣ ಪತ್ರ ಪಡೆಯುತ್ತಿದ್ದಾರೆ.
ಇದರಿಂದ ಆರ್ಹರಿಗೆ ಅವಕಾಶಗಳು
ಸಿಗುತ್ತಿಲ್ಲ. ನಾವು ಎಲ್ಲಾ
ಸೀಟುಗಳನ್ನು ಭರ್ತಿ
ಮಾಡುವುದಕ್ಕಿಂತಲೂ ಎಷ್ಟು
ಮಂದಿ ಅರ್ಹರಿಗೆ ಸೀಟು
ಕೊಡಿಸಿದ್ದೇವೆ ಎಂಬುದು ಬಹಳ
ಮುಖ್ಯವಾಗುತ್ತದೆ. ಜತೆಗೆ
ಸರ್ಕಾರವೇ ಹಣ ಕೊಟ್ಟು ಖಾಸಗಿ
ಶಾಲೆಗಳಿಗೆ ಮಕ್ಕಳನ್ನು
ಕಳುಹಿಸುವಂತಾಗಿದೆ. ಇದರಿಂದ
ಸರ್ಕಾರಿ ಶಾಲೆಗಳಿಗೆ ಮಕ್ಕಳ ಕೊರತೆ
ಉಂಟಾಗಿದೆ. ಹೀಗಾಗಿ
ನಿಯಮಾವಳಿಗಳನ್ನು ಬದಲಾವಣೆ
ಮಾಡಿ ಬಿಪಿಎಲ್ ಕಾರ್ಡ್ ಇರುವ
ಕುಟುಂಬಗಳಿಗೆ ಮಾತ್ರ ಆರ್ಟಿಇ
ಸೀಟು ಕೊಡಿಸುವ ಚಿಂತನೆ ನಡೆದಿದೆ.
ಆದರೆ, ಇನ್ನೂ ನಿರ್ಧಾರವಾಗಿಲ್ಲ
ಎಂದರು. ಬಿಪಿಎಲ್ ಕಾರ್ಡ್ ನೀಡುವ
ಮುನ್ನ ಹತ್ತಾರು ಪರಿಶೀಲನೆ
ನಡೆದಿರುತ್ತದೆ. ಶ್ರೀಮಂತರು ಕಾರ್ಡ್
ಪಡೆದಿದ್ದರೂ ನೆರೆಹೊರೆಯವರು
ದೂರು ನೀಡಿರಿರುತ್ತಾರೆ.
ಹೀಗಾಗಿ ಬಿಪಿಎಲ್ ಕಾರ್ಡ್ಅನ್ನು
ಆಧಾರವಾಗಿಟ್ಟುಕೊಲ್ಳುವುದು
ಸೂಕ್ತ ಎಂದು ಅಭಿಪ್ರಾಯಪಟ್ಟರು.
ಮುಂದಿನ ಶೈಕ್ಷಣಿಕ ವರ್ಷದಿಂದ
ಸರ್ಕಾರಿ ಶಾಲೆಗಳಲ್ಲೇ ಎಲ್ಕೆಜಿ ಶಿಕ್ಷಣ
ಆರಂಭಿಸುವ ಚಿಂತನೆಯೂ ನಡೆದಿದೆ.
ನಮ್ಮಲ್ಲಿ ಕಟ್ಟಡ, ಶಿಕ್ಷಕರು
ಸೇರಿದಂತೆ ಎಲ್ಲ ಸೌಲಭ್ಯಗಳಿವೆ.
ಹೆಚ್ಚುವರಿಯಾಗಿ ಶಿಕ್ಷಕರನ್ನು
ಮಾತ್ರ ನೇಮಿಸಿಕೊಳ್ಳಬೇಕು.
ಇದಕ್ಕೆ ಆರ್ಥಿಕ ಇಲಾಖೆಯ ಅನುಮತಿಯ
ಅಗತ್ಯವಿದೆ. ಮುಖ್ಯಮಂತ್ರಿ ಅವರ ಜತೆ
ಚರ್ಚೆ ಮಾಡಿ ಪೂರ್ವ ಪ್ರಾಥಮಿಕ
ತಗರಗತಿಗಳನ್ನು ಪ್ರಾಥಮಿಕ ಶಿಕ್ಷಣ ಜತೆ
ವಿಲೀನಗೊಳಿಸುವ ಚಿಂತನೆ ಇದೆ.
ಸದ್ಯಕ್ಕೆ ಮಹಿಳಾ ಮತ್ತು ಮಕ್ಕಳ
ಕಲ್ಯಾಣ ಇಲಾಖೆ ಪೂರ್ವ ಪ್ರಾಥಮಿಕ
ತರಗತಿಗಳನ್ನ ನಡೆಸುತ್ತಿದೆ. ಆವರ ಜತೆ ಚರ್ಚೆ
ಮಾಡುತ್ತೇವೆ. ಅಂಗನವಾಡಿ
ಕೇಂದ್ರಗಳಿಗೆ ಯಾವುದೇ ಭಂಗ
ಉಂಟು ಮಾಡುವುದಿಲ್ಲ ಎಂದು
ಹೇಳಿದರು. ರಾಜ್ಯ ಸರ್ಕಾರ
2009ರಲ್ಲಿ ರಾಷ್ಟ್ರೀಯ ಶಿಕ್ಷಣ
ನೀತಿಯನ್ನು ಒಪ್ಪಿಕೊಂಡಿದೆ.
6ರಿಂದ 12ನೆ ತರಗತಿವರೆಗೂ ಕೇಂದ್ರ
ಪಠ್ಯ ಕ್ರಮವನ್ನು
ಅಳವಡಿಸಿಕೊಳ್ಳಲು ಹಂತ ಹಂತವಾಗಿ
ಪ್ರಯತ್ನ ನಡೆಸಲಾಗುತ್ತಿದೆ. ಜತೆಗೆ
ಸಿಇಟಿಯಲ್ಲಿ ಸೀಟು ಹಂಚಿಕೆ ವೇಳೆ
ವಿದ್ಯಾರ್ಥಿಗಳು ಪಿಯುಸಿಯಲ್ಲಿ ಪಡೆದ
ಅಂಕ ಮತ್ತು ಸಿಇಟಿಯಲ್ಲಿ ಪಡೆದ ಅಂಕ
ಎರಡನ್ನೂ ತಲಾ ಶೇ.50ರಷ್ಟು
ಆಯ್ಕೆ ಮಾಡಿಕೊಂಡು ಸೀಟು
ಹಂಚಿಕೆ ಮಾಡುವ ಚರ್ಚೆ ನಡೆದಿದೆ.
ಪಿಯುಸಿಯಲ್ಲಿ ಶೇ.96ರಷ್ಟು
ಅಂಕ ಪಡೆದಿದ್ದರೂ ಸಿಇಟಿಯಲ್ಲಿ ಉತ್ತಮ
ಅಂಕ ಬರದೇ ಇದ್ದಾಗ ಪ್ರತಿಭಾನ್ವಿತ
ವಿದ್ಯಾರ್ಥಿಗಳು ವೃತ್ತಿ ಶಿಕ್ಷಣಕ್ಕೆ
ಆಯ್ಕೆಯಾಗದೆ ಅವಕಾಶ
ವಂಚಿತರಾಗುತ್ತಿದ್ದಾರೆ. ಇದನ್ನು
ತಪ್ಪಿಸಲು ಸಿಇಟಿ ಮತ್ತು ಪಿಯುಸಿ
ಅಂಕಗಳನ್ನು ಸಮಪ್ರಮಾಣದಲ್ಲಿ
ಪರಿಗಣಿಸುವಂತೆ ಮುಖ್ಯಮಂತ್ರಿ
ಸೂಚನೆ ನೀಡಿದ್ದಾರೆ ಎಂದು
ಅವರು ಹೇಳಿದರು. ಮಕ್ಕಳಿಂದ
ಶಾಲಾ ಪರಿಸರ ಸ್ವಚ್ಛತೆಗೊಳಿಸುವ
ಬಗ್ಗೆ ಪ್ರಸ್ತಾವನೆ ಬಂದಿದೆ.
ಮೂರ್ನಾ್ಲ್ಕು ಇಲಾಖೆಗಳ ಜತೆ ಚರ್ಚೆ
ಮಾಡಿ ಈ ಕುರಿತು ನಿರ್ಧಾರ
ತೆಗೆದುಕೊಳ್ಳಬೇಕಿದೆ ಎಂದು
ತಿಳಿಸಿದರು. ಶಾಲಾ ವಿದ್ಯಾರ್ಥಿಗಳಿಗೆ
ಈಗಾಗಲೇ ಸಮವಸ್ತ್ರ
ಪೂರೈಸಲಾಗಿದೆ. ಸೈಕಲ್ಗಳನ್ನು
ಜಿಲ್ಲಾ ಕೇಂದ್ರಗಳಿಗೆ
ತಲುಪಿಸಾಲಗಿದ್ದು, ಶೀಘ್ರವೇ
ಹಂಚಿಕೆ ಮಾಡಲಾಗುತ್ತದೆ.
ಇಲಾಖೆಯಲ್ಲಿ 29 ಸಾವಿರ ಶಿಕ್ಷಕರ
ಕೊರತೆ ಇದೆ. ಪ್ರಾಥಮಿಕ
ಶಾಲೆಯೊಂದಕ್ಕೆ 25ಸಾವಿರ
ಶಿಕ್ಷಕರು ಬೇಕು. ಸದ್ಯಕ್ಕೆ 12,300
ಅಥಿತಿ ಶಿಕ್ಷಕರ ನೇಮಕಕ್ಕೆ ಅನುಮತಿ
ದೊರೆತಿದೆ. ಈ ಎಲ್ಲಾ
ನೇಮಕಾತಿಗಳು ಅಕ್ಟೋಬರ್ ಒಳಗೆ
ಪೂರ್ಣಗೊಳ್ಳಲಿವೆ
ಎಂದು ವಿವರಿಸಿದರು. ಪ್ರತಿ
ವಿಧಾನಸಭಾ ಕ್ಷೇತ್ರಕ್ಕೆ ಶಾಲೆಗಳ
ಮೂಲ ಸೌಕರ್ಯಕ್ಕಾಗಿ ನಮ್ಮ ಸರ್ಕಾರ
40 ಲಕ್ಷ ರೂ. ಅನುದಾನ ನೀಡಿದೆ
ಎಂದು ಅವರು ಹೇಳಿದರು. ರೈತರ
ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಪ್ರತಿಕ್ರಿಯೆ
ನೀಡಿದ ಅವರು, ಸರ್ಕಾರ ರೈತರಿಗೆ
ಎಲ್ಲಾ ನೆರವುಗಳನ್ನು ನೀಡುತ್ತಿದೆ.
ಆತ್ಮಹತ್ಯೆ ಮಾಡಿಕೊಳ್ಳದಂತೆ
ಮನೋಸ್ಥೈರ್ಯ
ತುಂಬಲಾಗುತ್ತಿದೆ. ಸಾಲ
ವಸೂಲಾತಿಗೆ ತಡೆ ನೀಡಲಾಗಿದೆ
ಎಂದು ತಿಳಿಸಿದರು. ಇತ್ತೀಚೆಗೆ
ಮಕ್ಕಳಲ್ಲೂ ಆತ್ಮಹತ್ಯೆಯ ಪ್ರವೃತ್ತಿ
ಬೆಳೆಯುತ್ತಿರುವುದು ದುರಂತ.
ರ್ಯಾಂ ಕ್ ಪಡೆದವರೆಲ್ಲ
ಬುದ್ದಿವಂತರಲ್ಲ ಎಂದು ಅವರು ತಿಳಿ
ಹೇಳಿದರು. ರೈತರ ಆತ್ಮಹತ್ಯೆ
ವಿಷಯದಲ್ಲಿ ಕೇಂದ್ರ ಕೃಷಿ ಸಚಿವ
ರಾಧಾಮಹೋನ್ ಅವರ
ಹೇಳಿಕೆಯನ್ನು ತೀವ್ರವಾಗಿ
ಖಂಡಿಸಿದ ಕಿಮ್ಮನೆ ರತ್ನಾಕರ, ಇಂತಹ
ಹೇಳಿಕೆಗಳು ತಪ್ಪು ಸಂದೇಶ
ನೀಡುತ್ತವೆ ಎಂದು ಆಕ್ರೋಶ
ವ್ಯಕ್ತಪಡಿಸಿದರು.