redBus. in Founder Phanindra Reddy Sama Sudhakar Pasupunuri Charan Padmaraju HQ: Bangalore , India

ನಾವು ನೀವು ಬಸ್ ಟಿಕೆಟ್ ಸಿಗದಿದ್ರೆ ಏನು
ಮಾಡ್ತೀವಿ..? ಹೆಚ್ಚಂದ್ರೆ ಮರುದಿನಕ್ಕೆ ಟಿಕೆಟ್ ಬುಕ್
ಮಾಡ್ತೀವಿ, ಅಥವಾ ಮನೆಗೆ ಬಂದು ಬೆಚ್ಚಗೆ
ಮಲಗ್ತೀವಿ. ಆದ್ರೆ ಬಸ್ ಟಿಕೆಟ್ ಸಿಗದ ಕಾರಣಕ್ಕೆ
ಮಿಲೇನಿಯರ್ ಆದವರೂ ಇದ್ದಾರೆ ಗೊತ್ತಾ..?
ಅದು ಹೇಗೆ ಸಾಧ್ಯ ಅಂತ ಕೇಳೋದಾದ್ರೆ
ಅದಕ್ಕೆ ಉತ್ತರ ಇಲ್ಲಿದೆ.ಅವರು ಮೂರು ಜನ
ಫ್ರೆಂಡ್ಸ್, ಬೆಂಗಳೂರಿನ ಬೇರೆ ಬೇರೆ ಸಾಫ್ಟ್
ವೇರ್ ಕಂಪನಿಗಳಲ್ಲಿ ಒಳ್ಳೇ ಸಂಬಳ ತಗೋತಾ
ಇದ್ದವರು. ಅವರ ಊರು ಆಂಧ್ರಪ್ರದೇಶ.
2007ನೇ ವರ್ಷದ ದೀಪಾವಳಿ ಹಿಂದಿನ ದಿನ ಊರಿಗೆ
ಹೋಗೋಣ ಅಂತ ಮೆಜೆಸ್ಟಿಕ್ ಬಂದ್ರೆ ಎಲ್ಲೆಲ್ಲೂ
ಟಿಕೆಟ್ ಇಲ್ಲ. ಯಾವ ಬಸ್ ನಲ್ಲೂ ಒಂದೇ ಒಂದು
ಸೀಟ್ ಇಲ್ಲ. ಜನ ಟಿಕೆಟ್ ಗೆ ಒದ್ದಾಡ್ತಾ ಇರೋದನ್ನ
ನೋಡಿದ ಆ ಮೂರೂ ಜನ ಟ್ರಿಪ್ ಕ್ಯಾನ್ಸಲ್
ಮಾಡಿ ವಾಪಸ್ ಅವರ ರೂಮಿಗೆ ಬಂದ್ರು.
ಬಂದವರು ಸುಮ್ಮನೇ ಕೂರಲಿಲ್ಲ. ಜನರಿಗೆ
ಸುಲಭವಾಗಿ ಟಿಕೆಟ್ ಸಿಗೋದು ಹೆಂಗೆ ಅಂತ ತಲೆಗೆ
ಹುಳ ಬಿಟ್ಕೊಂಡು ಲ್ಯಾಪ್ ಟಾಪ್ ಮುಂದೆ
ಕೂತ್ರು. ಸಿಕ್ಕಾಪಟ್ಟೆ ಕಷ್ಟಪಟ್ಟು ಅವರು ಇವರ
ಸಜೆಶನ್ ತಗೊಂಡು ಕೊನೆಗೂ ಒಂದು ವೆಬ್ ಸೈಟ್
ರೆಡಿಮಾಡಿದ್ರು.
ಅದು ಇವತ್ತು ಭಾರತದ ಟಾಪ್ ವೆಬ್
ಸೈಟುಗಳಲ್ಲೊಂದು..! ಪ್ರತಿ ಸ್ಮಾರ್ಟ್ ಫೋನ್
ನಲ್ಲೂ ಆ ಅಪ್ಲಿಕೇಶನ್ ಇದೆ. ಅದೇ ರೆಡ್ ಬಸ್.ಇನ್..!
ಅದರ ರೂವಾರಿಗಳೇ ಫಣೀಂದ್ರ ಸಾಮಾ, ಚರಣ್
ಪದ್ಮರಾಜು ಮತ್ತು ಸುಧಾಕರ್
ಪಸುಪುನುರಿ.ಆರಂಭದಲ್ಲಿ ಅವರು ಪಟ್ಟ ಪಾಡು
ಅಷ್ಟಿಷ್ಟಲ್ಲ, ಅದಕ್ಕೆ ಬೇಕಾದ ಇನ್ವೆಸ್ಟ್ ಮೆಂಟ್
ಅವರ ಬಳಿ ಇಲ್ಲ.
ಆದ್ರೆ ಐಡಿಯಾಮಾತ್ರ ಸೂಪರ್
ಅಂತ ಅನ್ನಿಸಿದ್ರೂ ಅಷ್ಟು ಇನ್ವೆಸ್ ಮಾಡೋಕೆ
ಯಾರೂ ರೆಡಿ ಇರಲಿಲ್ಲ. 30 ಲಕ್ಷ ಆಗಬಹುದು
ಅನ್ಕೊಂಡಿದ್ದವರಿಗೆ ಅದರ ಬಜೆಟ್ ಮೂರು ಕೋಟಿ
ದಾಟಿಬಿಡುತ್ತೆ ಅನ್ನಸಿದ್ರೂ ಉತ್ಸಾಹ ಕಮ್ಮಿ
ಆಗಲಿಲ್ಲ. ಬಸ್ ಏಜೆಂಟರು, ಬಸ್ ಮಾಲೀಕರು,
ಟ್ರಾವೆಲ್ಸ್ ಮಾಲೀಕರು, ಹೀಗೆ
ಪ್ರತಿಯೊಬ್ಬರನ್ನೂಮೀಟ್ ಮಾಡಿ ಇದರ ಬಗ್ಗೆ
ಹೇಳಿದ್ರೂ ಯಾರಿಗೂ ನಂಬಿಕೇನೇ ಬರಲಿಲ್ಲ.
ಯಾವ ಸೀಟನ್ನೂ ರೆಡ್ ಬಸ್ ಬುಕಿಂಗ್ ಗೆ
ಕೊಡೋಕೆ ರೆಡೀನೇ ಇರಲಿಲ್ಲ. ಕೊನೆಗೆ ಬಸ್ಸಿನ
ಹಿಂದಿನ ಸೀಟು ಕೊಡೋಕೆ ಕೆಲವರು
ಒಪ್ಪಿಕೊಂಡ್ರು..!
ಮೊದಲ ರೆಡ್ ಬಸ್ ಟಿಕೆಟ್
ಬೆಂಗಳೂರಿನಿಂದ ತಿರುಪತಿಗೆಬುಕ್ ಆಯ್ತು.
ಅವತ್ತು ರೆಡ್ ಬಸ್ ಮಾಲೀಕರೇ ಹೋಗಿ ಟಿಕೆಟ್
ಬುಕ್ ಮಾಡಿದವರನ್ನು ಬಸ್ ಹತ್ತಿಸಿ ಬಂದಿದ್ರು.
ಪ್ರಿಂಟೆಡ್ ಟಿಕೆಟ್ ಇಲ್ಲದೇ ಇದ್ರೆ ಬಸ್ ಕಂಡಕ್ಟರ್
ಪ್ಯಾಸೆಂಜರ್ ಗೆ ಬಸ್ ಹತ್ತೋಕೆ ಬಿಡ್ತಾರೋ
ಇಲ್ವೋ ಅನ್ನೋ ಭಯಅವರಲ್ಲಿತ್ತು. ಆದ್ರೆ ಆ
ಫಸ್ಟ್ ಪ್ಯಾಸೆಂಜರ್ ಬಸ್ ಹತ್ತಿಸಿ ಬಂದವರು ತಿರುಗಿ
ನೋಡಲೇ ಇಲ್ಲ. ಅವರು ಮಾಡ್ತಿದ್ದ ಕೆಲಸಗಳಿಗೆ
ರಾಜೀನಾಮೆ ಕೊಟ್ಟು ವೆಬ್ ಸೈಟ್ ಬೆಳೆಸಿದ್ರು.
ಆರಂಭದ ಆರೇಳು ತಿಂಗಳು ಮೂರೂ ಜನ
ದುಡ್ಡಿಲ್ಲದೇ ತುಂಬಾಕಷ್ಟಪಟ್ರು, ಆದ್ರೆ
ಮುಂದೆ ನಡೆದದ್ದೆಲ್ಲಾ ಮ್ಯಾಜಿಕ್. ಇವತ್ತು ರೆಡ್
ಬಸ್.ಇನ್ ಪ್ರತಿ ದಿನ 15 ರಾಜ್ಯಗಳಲ್ಲಿ6 ಲಕ್ಷಕ್ಕೂ
ಹೆಚ್ಚು ಬಸ್ ಟಿಕೆಟ್ ಬುಕ್ ಮಾಡ್ತಿದೆ. ಅವತ್ತು ಸೀಟ್
ಕೊಡಲು ಒಪ್ಪದಿದ್ದ ಟ್ರಾವೆಲ್ ಸಂಸ್ಥೆಗಳು ರೆಡ್
ಬಸ್ ಹೇಳಿದ್ರೆ ಮತ್ತೊಂದು ಬಸ್ ಲೈನಿಗೆ
ಬಿಡೋಕೂ ರೆಡಿ ಇದ್ದಾರೆ. ನಾ ಮುಂದು ತಾ
ಮುಂದು ಅಂತ ರೆಡ್ ಬಸ್ ಜೊತೆ ಟೈ ಅಪ್
ಆಗ್ತಿದ್ದಾರೆ. ಇಂತಹ ಸಕ್ಸಸ್ ಫುಲ್ ರೆಸ್ ಬಸ್ .ಇನ್
ಕಂಪನಿಯನ್ನು ಕಳೆದ ವರ್ಷ ಇಬಿಬೋ.ಕಾಮ್
ಕಂಪನಿ ಕೊಂಡುಕೊಳ್ತು. ಎಷ್ಟು ಮೊತ್ತಕ್ಕೆ
ಗೊತ್ತಾ..?
ಬರೋಬ್ಬರಿ 600 ಕೋಟಿ
ರೂಪಾಯಿಗಳಿಗೆ. 7 ವರ್ಷದ ಹಿಂದೆ ಬಸ್ ಟಿಕೆಟ್ ಸಿಕ್ಕಿಲ್ಲ
ಅಂತ ವಾಪಸ್ ಹೋದವರು, ಇವತ್ತು ಇಡೀ
ದೇಶಕ್ಕೇ ಟಿಕೆಟ್ ಕೊಡ್ತಿದ್ದಾರೆ. ಟಿಕೆಟ್ ಸಿಗದೇ
ಇದ್ದಿದ್ದಕ್ಕೆ ಅವರಿವತ್ತು ಕೋಟ್ಯಾಧಿಪತಿಗಳು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023