Saturday, July 11, 2015

Serena Williams wins sixth Wimbledon title

ಸೆರೆನಾಗೆ ವಿಂಬಲ್ಡನ್ ಪ್ರಶಸ್ತಿ
ಲಂಡನ್: ವಿಶ್ವ ನಂ.1 ಅಮೆರಿಕದ ಸೆರೆನಾ
ವಿಲಿಯಮ್್ಸ 6-4, 6-4ರಿಂದ ಸ್ಪೇನ್​ನ
ಗಾರ್ಬೆನ್ ಮುಗುರುಜಾ ಅವರನ್ನು
ಸೋಲಿಸಿ ವಿಂಬಲ್ಡನ್ ಟೆನಿಸ್
ಟೂರ್ನಿಯ ಮಹಿಳೆಯ ಸಿಂಗಲ್ಸ್ ಪ್ರಶಸ್ತಿ
ಗೆದ್ದುಕೊಂಡಿದ್ದಾರೆ. ಶನಿವಾರ
ನಡೆದ ಫೈನಲ್​ನಲ್ಲಿ ಸ್ಪೇನ್​ನ ಅನನುಭವಿ
ಆಟಗಾರ್ತಿಯನ್ನು ಮಣಿಸಲು ಹೆಚ್ಚು
ಶ್ರಮ ಪಡಲಿಲ್ಲ. ಸೆರೆನಾಗೆ ಇದು 6ನೇ
ವಿಂಬಲ್ಡನ್ ಟೆನಿಸ್ ಪ್ರಶಸ್ತಿಯಾಗಿದೆ.
ಕಳೆದ ವರ್ಷ ಯುಎಸ್ ಓಪನ್ ಟೆನಿಸ್
ಟೂರ್ನಿಯಲ್ಲಿ ಪ್ರಶಸ್ತಿ ಸಾಧನೆ
ಮಾಡಿದ್ದ ಸೆರೆನಾ ಈ ವರ್ಷದಲ್ಲಿ
ಇದುವರೆಗೆ ನಡೆದ ಎಲ್ಲಾ ಗ್ರಾಂಡ್​
ಸ್ಲಾಂ ಟೂರ್ನಿಯ ಪ್ರಶಸ್ತಿಗಳನ್ನು
ತಮ್ಮದಾಗಿಸಿಕೊಂಡಿದ್ದಾರೆ.
ತನ್ಮೂಲಕ ಅವರು ಸೆರೆನಾ ಸ್ಲಾಂ
ಸಾಧನೆ ಮಾಡಿದಂತಾಗಿದೆ.