Drop


Sunday, July 12, 2015

Serena wins her 21st GRANDSLAM . ಸೆರೆನಾ ವೃತ್ತಿಜೀವನದ 21ನೇ ಗ್ರಾಂಡ್ ಸ್ಲಾಂ

ಲಂಡನ್: ಹಾಲಿ ವರ್ಷ ಸತತ 3ನೇ
ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ
ಅಧಿಪತ್ಯ ಮುಂದುವರಿಸಿರುವ
ಸ್ಟಾರ್ ಆಟಗಾರ್ತಿ ಅಮೆರಿಕದ ಸೆರೇನಾ
ವಿಲಿಯಮ್ಸ್ 6ನೇ ಬಾರಿಗೆ ವಿಂಬಲ್ಡನ್
ಪ್ರಶಸ್ತಿ ಜಯಿಸಿದ್ದಾರೆ. ಶನಿವಾರ ನಡೆದ
ಮಹಿಳಾ ಸಿಂಗಲ್ಸ್ ಫೈನಲ್​ನಲ್ಲಿ ವಿಶ್ವ
ನಂ.1 ಸೆರೇನಾ, ಸ್ಪೇನ್​ನ 21 ವರ್ಷದ
ಗಾರ್ಬಿನ್ ಮುಗುರುಜಾರನ್ನು
ಮಣಿಸಿ ವೃತ್ತಿಜೀವನದ 21ನೇ
ಗ್ರಾಂಡ್ ಸ್ಲಾಂ ಪ್ರಶಸ್ತಿಯ
ಒಡತಿಯಾದರು. ಇದರೊಂದಿಗೆ 20
ವರ್ಷದ ಟೆನಿಸ್ ಜೀವನದಲ್ಲಿ 2ನೇ
ಬಾರಿಗೆ ಸೆರೇನಾ ಸ್ಲಾಂ
(ಏಕಕಾಲದಲ್ಲಿ ನಾಲ್ಕೂ ಗ್ರಾಂಡ್
ಸ್ಲಾಂ ಜಯ) ಸಾಧಿಸಿದ ಹೆಮ್ಮೆ
ಒಲಿಸಿಕೊಂಡರು.
ಸೆಂಟರ್ ಕೋರ್ಟ್​ನಲ್ಲಿ ನಡೆದ 1 ಗಂಟೆ
23 ನಿಮಿಷದ ಪ್ರಶಸ್ತಿ ಸುತ್ತಿನ
ಹೋರಾಟದಲ್ಲಿ ಸೆರೇನಾ 6-4,
6-4 ಸೆಟ್​ಗಳಿಂದ
ಮುಗುರುಜಾರನ್ನು ಮಣಿಸಿದರು.
ಆಕರ್ಷಕ ಸರ್ವ್ ಹಾಗೂ ರಿಟರ್ನ್ಸ್
ಮೂಲಕ ಗಮನ ಸೆಳೆದ ಮುಗುರುಜಾ
ಎರಡೂ ಸೆಟ್​ನ ಅಂತಿಮ ಕ್ಷಣಗಳಲ್ಲಿ
ಅನುಭವಿ ಆಟಗಾರ್ತಿಯ ಬಲಿಷ್ಠ ಶಾಟ್​
ಗಳಿಗೆ ತಲೆಬಾಗಿದರು.
12 ವರ್ಷದ ಹಿಂದೆ ಸತತ ನಾಲ್ಕೂ
ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲ್ಲುವ
ಮೂಲಕ ಮೊದಲ ಬಾರಿಗೆ
'ಸೆರೇನಾ ಸ್ಲಾಂ' ಸಾಧಿಸಿದ್ದ
ಅಮೆರಿಕ ಆಟಗಾರ್ತಿ, 2014ರ ಯುಎಸ್
ಓಪನ್, ಈ ವರ್ಷದ ಆಸ್ಟ್ರೇಲಿಯನ್, ಫ್ರೆಂಚ್
ಹಾಗೂ ವಿಂಬಲ್ಡನ್​ನಲ್ಲೂ
ವಿಜಯಪತಾಕೆ ಹಾರಿಸಿದರು. ಜರ್ಮನಿ
ತಾರೆ ಸ್ಟೆಫಿಗ್ರಾಫ್ ಬಳಿಕ (1988)
ಅಪರೂಪದ 'ಕ್ಯಾಲೆಂಡರ್ ಸ್ಲಾಂ'
ಸಾಧಿಸಿದ ಮೊದಲಿಗರೆನಿಸುವ
ಅವಕಾಶವೂ ಸೆರೇನಾ ಮುಂದಿದೆ.
ಸೆಮಿಫೈನಲ್​ನಲ್ಲಿ ಸ್ಟಾರ್ ಆಟಗಾರ್ತಿ
ಮರಿಯಾ ಶರಪೋವರನ್ನು
ಸವಾಲೇ ಅಲ್ಲ ಎನ್ನುವಂತೆ
ಸೋಲಿಸಿದ್ದ ಸೆರೇನಾಗೆ ಫೈನಲ್​
ನಲ್ಲಿ ಮುಗುರುಜಾ ಸಾಕಷ್ಟು
ಪ್ರತಿರೋಧ ಒಡ್ಡಿದರು.
ಆಘಾತಕಾರಿ ಆರಂಭ ಕಂಡಿದ್ದ
ಸೆರೇನಾ, ಮೊದಲ ಸೆಟ್​ನ
ಕೊನೇ 2 ಸರ್ವ್ ಬ್ರೇಕ್ ಮಾಡಿ
ಮುನ್ನಡೆ ಸಾಧಿಸಿದರು. 2ನೇ ಸೆಟ್​ನ
4ನೇ ಗೇಮ್​ಬ್ರೇಕ್ ಮಾಡಿ
ಮುನ್ನಡೆ ಪಡೆದಿದ್ದ ಸೆರೇನಾ, ಬಳಿಕ
ಸತತ 11 ಅಂಕ ಕಳೆದುಕೊಂಡರು.
5-1 ಹಿನ್ನಡೆಯಲ್ಲಿದ್ದ ವೇಳೆ
ಮುಗುರುಜಾ ಚಾಂಪಿಯನ್​ಷಿಪ್
ಪಾಯಿಂಟ್ ಅವಕಾಶವನ್ನು
ರಕ್ಷಿಸಿಕೊಂಡು, ಸೆರೇನಾ ಸರ್ವ್
ಬ್ರೇಕ್ ಮಾಡಿದ್ದಲ್ಲದೆ, ಪಂದ್ಯದಲ್ಲಿ
ಉಳಿಯುವ ಯತ್ನ ನಡೆಸಿದ್ದರು.
2ನೇ ಬಾರಿ ಸೆರೇನಾ ಸ್ಲಾಂ
ಸೆರೇನಾ ವಿಲಿಯಮ್್ಸ ಮೊದಲ
ಸೆರೇನಾ ಸ್ಲಾಂ ಸಾಧನೆ
ಮಾಡಿದ್ದು 2002-03ರಲ್ಲಿ. 2002ರ
ಫ್ರೆಂಚ್ ಓಪನ್, ವಿಂಬಲ್ಡನ್, ಯುಎಸ್
ಓಪನ್ ಹಾಗೂ 2003ರ ಆಸ್ಟ್ರೇಲಿಯನ್
ಓಪನ್ ಗೆದ್ದು ಈ ಗೌರವ
ಒಲಿಸಿಕೊಂಡಿದ್ದರು. ಇದೀಗ 2014ರ
ಯುಎಸ್ ಓಪನ್ ಅಲ್ಲದೆ ಈ ವರ್ಷ ಸತತ 3
ಗ್ರಾಂಡ್ ಸ್ಲಾಂ ಜಯಿಸಿ ಸಾಧನೆ
ಪುನರಾವರ್ತಿಸಿದ್ದಾರೆ.
33 - ಮುಕ್ತ ಯುಗದಲ್ಲಿ ಗ್ರಾಂಡ್
ಸ್ಲಾಂ ಪ್ರಶಸ್ತಿ ಗೆದ್ದ ಹಿರಿಯ ಆಟಗಾರ್ತಿ
ಎನ್ನುವ ಸಾಧನೆಯನ್ನು ಸೆರೇನಾ
ವಿಲಿಯಮ್್ಸ (33 ವರ್ಷ 289 ದಿನ)
ಮಾಡಿದರು. ಇದಕ್ಕೂ ಮುನ್ನ
1990ರಲ್ಲಿ ಮಾರ್ಟಿನಾ
ನವ್ರಾಟಿಲೋವಾ 33 ವರ್ಷ 263
ದಿನಕ್ಕೆ ವಿಂಬಲ್ಡನ್ ಗೆದ್ದಿದ್ದು
ದಾಖಲೆಯಾಗಿತ್ತು.
ಸೆರೇನಾ ಗ್ರಾಂಡ್ ಗೆಲುವುಗಳು
* ಆಸ್ಟ್ರೇಲಿಯನ್ ಓಪನ್ - 2003, 2005,
2007, 2009, 2010, 2015
* ಫ್ರೆಂಚ್ ಓಪನ್ - 2002, 2013, 2015
* ವಿಂಬಲ್ಡನ್ - 2002, 2003, 2009, 2010,
2012, 2015
* ಯುಎಸ್ ಓಪನ್ - 1999, 2002, 2008,
2012, 2013, 2014
* ಗಾರ್ಬಿನ್ ಅದ್ಭುತವಾಗಿ ಆಡಿದರು.
ಆಕೆ ಈ ಸೋಲಿಗೆ ನಿಲ್ಲುವವರಲ್ಲ
ಎಂದುಕೊಳ್ಳುತ್ತೇನೆ.
ಪಂದ್ಯದ ಅಂತ್ಯದಲ್ಲಿ ಸಾಕಷ್ಟು
ಪ್ರತಿರೋಧ ನೀಡಿದರು. ಬೇಸರ
ಮಾಡಿಕೊಳ್ಳಬೇಡಿ.
ಅತಿಶೀಘ್ರದಲ್ಲೇ ನೀವು ಈ
ಟ್ರೋಫಿ ಗೆಲ್ಲುತ್ತೀರಿ. ಆ ನಂಬಿಕೆ
ನನಗಿದೆ.
| ಸೆರೇನಾ ವಿಲಿಯಮ್್ಸ
***
ಜೋಕೋ-ಫೆಡ್ ಫೈಟ್
ಪುರುಷರ ವಿಭಾಗದ
ಹೈವೋಲ್ಟೇಜ್ ಫೈನಲ್
ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ.
2014ರ ಟೂರ್ನಿಯ ಫೈನಲ್​ನಲ್ಲಿ
ಎದುರಾಗಿದ್ದ ನೋವಾಕ್
ಜೋಕೊವಿಕ್ ಹಾಗೂ
ರೋಜರ್ ಫೆಡರರ್ ಈ ಬಾರಿಯೂ
ಪ್ರಶಸ್ತಿ ಹಂತದಲ್ಲಿ
ಎದುರಾಗುತ್ತಿದ್ದಾರೆ.
8ನೇ ಬಾರಿಗೆ ವಿಂಬಲ್ಡನ್ ಗೆದ್ದು
ಇತಿಹಾಸ ನಿರ್ವಿುಸುವ
ವಿಶ್ವಾಸದಲ್ಲಿರುವ 33 ವರ್ಷದ
ರೋಜರ್ ಫೆಡರರ್, ಫೈನಲ್​ವರೆಗಿನ
ಹಾದಿಯಲ್ಲಿ ಅತ್ಯುತ್ತಮ ನಿರ್ವಹಣೆ
ನೀಡಿದ್ದಾರೆ. ಸ್ಥಳೀಯ ಆಟಗಾರ
ಆಂಡಿ ಮರ್ರೆ ವಿರುದ್ಧದ ಸೆಮಿಫೈನಲ್
ಪಂದ್ಯದಲ್ಲಿ ಯುವ ಆಟಗಾರರನ್ನು
ನಾಚಿಸುವಂತೆ ಆಡಿ ಗೆಲುವು
ಸಾಧಿಸಿರುವ ಫೆಡರರ್, ಗರಿಷ್ಠ ಬಾರಿ
ವಿಂಬಲ್ಡನ್ ಗೆದ್ದ ದಾಖಲೆ ನಿರ್ವಿುಸುವ
ಹಾದಿಯಲ್ಲಿದ್ದಾರೆ.
ಫೆಡರರ್ ಹಾಗೂ ಜೋಕೊವಿಕ್
ಈವರೆಗೂ 39 ಬಾರಿ
ಮುಖಾಮುಖಿಯಾಗಿದ್ದು,
ಜಯಾಪಜಯದ ದಾಖಲೆಯಲ್ಲಿ ಫೆಡರರ್
20-19ರಿಂದ ಮುನ್ನಡೆಯಲ್ಲಿದ್ದಾರೆ.
ಇನ್ನೊಂದಡೆ ಈ ವರ್ಷ
ಮಹೋನ್ನತ ಫಾಮರ್್​ನಲ್ಲಿರುವ
ಜೋಕೊವಿಕ್, ಆಸ್ಟ್ರೇಲಿಯನ್
ಓಪನ್​ನಲ್ಲಿ ಚಾಂಪಿಯನ್ ಆದರೆ, ಫ್ರೆಂಚ್
ಓಪನ್​ನಲ್ಲಿ ರನ್ನರ್​ಅಪ್ ಆಗಿದ್ದರು. ಅಲ್ಲದೆ,
ಟೆನಿಸ್ ಜೀವನದ 9ನೇ ಗ್ರಾಂಡ್
ಸ್ಲಾಂ ಗೆಲ್ಲುವ ಗುರಿ
ಹೊಂದಿದ್ದಾರೆ.
***
ವಿಂಬಲ್ಡನ್ ಗೆದ್ದ ಸಾನಿಯಾ ಮಿರ್ಜಾ
ಭಾರತದ ಸಾನಿಯಾ ಮಿರ್ಜಾ ಮತ್ತು
ಸ್ವಿಜರ್​ಲೆಂಡ್​ನ ಮಾರ್ಟಿನಾ ಹಿಂಗಿಸ್
ಜೋಡಿ ವಿಂಬಲ್ಡನ್ ಮಹಿಳೆಯ ಡಬಲ್ಸ್
ಟ್ರೋಫಿ ಗೆದ್ದುಕೊಂಡಿದೆ. ಈ
ಮೊಲಕ ವಿಂಬಲ್ಡನ್ ಗೆದ್ದ ಮೊದಲ
ಭಾರತೀಯ ಮಹಿಳೆ
ಎನಿಸಿಕೊಂಡರು. ಶನಿವಾರ ನಡೆದ
ಫೈನಲ್​ನಲ್ಲಿ ಸಾನಿಯಾ - ಹಿಂಗಿಸ್
ಜೋಡಿ ರಷ್ಯಾದ
ಎಕ್ತೆರೇನಿಯಾ ಮಕರೋವಾ
ಮತ್ತು ಲೆನ ವೆಸ್ನಿನಾ ಜೋಡಿ
ವಿರುದ್ಧ 5-7, 7-6(4), 7-5
ಅಂತರದಿಂದ ರೋಚಕ ಜಯ
ಗಳಿಸಿದರು.
ಸಾನಿಯಾ ಮಿರ್ಜಾ 2003ರಲ್ಲಿ
ವಿಂಬಲ್ಡನ್ ಜ್ಯೂನಿಯರ್ ಡಬಲ್ಸ್
ಪ್ರಶಸ್ತಿ ಗೆದ್ದಿದ್ದರು. 2011ರಲ್ಲಿ ಫ್ರೆಂಚ್
ಓಪನ್ ರನ್ನರ್​ಅಪ್ ಆಗಿದ್ದರು. 2009ರಲ್ಲಿ
ಮಹೇಶ್ ಭೂಪತಿ ಅವರೊಂದಿಗೆ
ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್
ಪ್ರಶಸ್ತಿ ಗೆದ್ದಿದ್ದರು ಮತ್ತು 2014ರಲ್ಲಿ
ಅಮೆರಿಕನ್ ಓಪನ್ ಪ್ರಶಸ್ತಿ ಗೆದ್ದಿದ್ದರು.
***
ಆಲ್ ಇಂಗ್ಲೆಂಡ್ ಕ್ಲಬ್​ನಲ್ಲಿ ಟ್ರೋಫಿ
ಸಿಕ್ಸರ್
ಉತ್ತಮ ನಿರ್ವಹಣೆ ತೋರಿದ ಭಾರತದ
ಸುಮಿತ್ ನಗಾಲ್ ಬಾಲಕರ ಡಬಲ್ಸ್
ವಿಭಾಗದಲ್ಲಿ ಪ್ರಶಸ್ತಿ ಸುತ್ತು
ಪ್ರವೇಶಿಸಿದ್ದಾರೆ. ಸೆಮಿಫೈನಲ್​ನಲ್ಲಿ
ದೆಹಲಿಯ 17 ವರ್ಷದ ನಗಾಲ್ ಮತ್ತು
ವಿಯೆಟ್ನಾಂನ ನಾಮ್​ಹಾಂಗ್ ಲೀ
ಜೋಡಿ 7-6, 3-6, 12-10ಸೆಟ್​ಗಳಿಂದ
2ಗಂಟೆ 20 ನಿಮಿಷಗಳ
ಹೋರಾಟದಲ್ಲಿ ಸೆರ್ಬಿಯಾದ
ಮಿಯೊಮಿರ್ ಕೆಕ್ಮಾನೊವಿಕ್
ಮತ್ತು ನಾರ್ವೆಯ ಕಾಸ್ಪೆರ್ ರುಡ್​
ರನ್ನು ಮಣಿಸಿತು. ಫೈನಲ್​ನಲ್ಲಿ
ಇಂಡೋ-ವಿಯೆಟ್ನಾಂ
ಜೋಡಿಯು ಅಮೆರಿಕದ ರೈಲಿ
ಒಪೆಲ್ಕಾ ಮತ್ತು ಜಪಾನ್​ನ ಅಕಿರಾ
ಸಾಂಟಿಲ್ಲನ್ ಜೋಡಿಯನ್ನು
ಎದುರಿಸಲಿದೆ.