ಕೇಂದ್ರ ಸರಕಾರಿ ನೌಕರರ ವೇತನ:1 ಲಕ್ಷ ಕೋಟಿಗೆ ಹೆಚ್ಚಳ.
ಕೇಂದ್ರ ಸರಕಾರಿ ನೌಕರರ ವೇತನ:1 ಲಕ್ಷ ಕೋಟಿಗೆ ಹೆಚ್ಚಳ.
(PSGadyal Teacher Vijayapur ).
ಏಳನೇ ವೇತನ ಆಯೋಗದ ಶಿಫಾರಸು 2016 ಜನವರಿಗೆ ಜಾರಿ ನಿರೀಕ್ಷೆ
ಹೊಸದಿಲ್ಲಿ: ಕೇಂದ್ರ ಸರಕಾರಿ ನೌಕರರಿಗೆ ವೇತನ ಪಾವತಿಸಲು ಮಾಡುತ್ತಿರುವ ವೆಚ್ಚದ ಪ್ರಮಾಣ ಈ ವರ್ಷ 1 ಲಕ್ಷ ಕೋಟಿ ರೂ. ಮಟ್ಟ ದಾಟಲಿದೆ. 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಿದರೆ, ವೇತನ ವೆಚ್ಚ ಪ್ರಮಾಣ ಮತ್ತಷ್ಟು ಹೆಚ್ಚಳವಾಗಿ, ಇದು ಸಾರ್ವಜನಿಕ ಹಣಕಾಸಿನ ಮೇಲೆ ಗಂಡಾಂತರ ತಂದೊಡ್ಡುವ ಸಾಧ್ಯತೆಗಳಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಲೋಕಸಭೆಯಲ್ಲಿ ಬುಧವಾರ ಮಧ್ಯಮಾವಧಿಯ ವೆಚ್ಚ ಮಾರ್ಗಸೂಚಿ ಪ್ರಕಟಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಕಂದ್ರ ಸರಕಾರಿ ನೌಕರರ ವೇತನ ವೆಚ್ಚ ಈ ವರ್ಷ 1,00,619 ಕೋಟಿ ರೂ. ಏರಿಕೆ ಕಂಡು, ಶೇ 9.56ರಷ್ಟು ಜಾಸ್ತಿಯಾಗಲಿದೆ ಎಂದು ವಿವರ ನೀಡಿದರು.
7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದ ನಂತರ 2016-17ರ ಸಾಲಿನಲ್ಲಿ ನೌಕರರ ವೇತನ ವೆಚ್ಚದಲ್ಲಿ ಶೇ16.79ರಷ್ಟು ಹೆಚ್ಚಳ ಕಂಡು 1.16 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ. 2017-18ನೇ ಸಾಲಿಗೆ ಅದು 1.28 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗಲಿದೆ ಎಂದು ಅವರು ವಿವರ ನೀಡಿದರು.
ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಯ ಪರಿಣಾಮಗಳಿಂದ ಸರಕಾರದ ಸಾರ್ವಜನಿಕ ಹಣಕಾಸಿಗೆ ಗಂಡಾಂತರ ಒಡ್ಡಲಿದೆ. ಜತೆಗೆ, ಪಿಂಚಣಿ ಪಾವತಿಗೆ ಸರಕಾರ ಮಾಡುತ್ತಿರುವ ವೆಚ್ಚ ಈ ವರ್ಷ 88,521 ಕೋಟಿ ರೂ.ಗೆ ಏರಿಕೆ ಕಂಡಿದೆ. 2016-17ನೇ ಸಾಲಿಗೆ ಅದು 1.02 ಲಕ್ಷ ಕೋಟಿ ರೂ. ಹಾಗೂ 2016-17ನೇ ಸಾಲಿಗೆ ಪಿಂಚಣಿ ಪಾವತಿ ಮೊತ್ತ 1.12 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗಲಿದೆ.
ಕೇಂದ್ರ ಸರಕಾರಿ ನೌಕರರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ 2014 ಫೆಬ್ರವರಿಯಲ್ಲಿ ಏಳನೇ ವೇತನ ಆಯೋಗ ರಚಿಸಲಾಗಿದೆ. ಇದು ನೀಡಿರುವ ಶಿಫಾರಸುಗಳನ್ನು ಸರಕಾರ 2016 ಜನವರಿಯಿಂದ ಜಾರಿಯಾಗುವ ನಿರೀಕ್ಷೆಗಳಿವೆ.
Comments
Post a Comment