100 ಸ್ಮಾರ್ಟ್ ಸಿಟಿಗಳಲ್ಲಿ ಶಿವಮೊಗ್ಗಕ್ಕೆ ಸ್ಥಾನ (Shivmogga in 100 smart cities list)

ದೇಶದ 100 ನಗರಗಳ ಪಟ್ಟಿಯಲ್ಲಿ ರಾಜ್ಯದ
ಏಕೈಕ ನಗರ/ಕೇಂದ್ರದ ನಡೆಯಿಂದ ನಿರಾಸೆ
ಬೆಂಗಳೂರು/ಹೊಸದಿಲ್ಲಿ:
ಪ್ರಧಾನಿ ನರೇಂದ್ರ ಮೋದಿ ಅವರ
ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ
ಯೋಜನೆಯಲ್ಲಿ ರಾಜ್ಯದ ಮೂಗಿಗೆ ತುಪ್ಪ ಸವರಿರುವ
ಕೇಂದ್ರ ಸರಕಾರ, ಈ ಉದ್ದೇಶಕ್ಕೆ
ರಾಜ್ಯದಿಂದ ಶಿವಮೊಗ್ಗ
ನಗರವನ್ನು ಮಾತ್ರ ಆಯ್ಕೆ ಮಾಡಿದೆ.
ಭಾರಿ ಪ್ರಚಾರ ಪಡೆದುಕೊಂಡಿದ್ದ
ಈ ಯೋಜನೆಗೆ ಹುಬ್ಬಳ್ಳಿ-ಧಾರವಾಡ ಸೇರಿದಂತೆ
ರಾಜ್ಯದಿಂದ ಕನಿಷ್ಠ 6 ನಗರಗಳು
ಆಯ್ಕೆಯಾಗಬಹುದು ಎಂಬ ಭರವಸೆ
ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ರಾಜ್ಯ
ಸರಕಾರದಿಂದ ಕೇಂದ್ರಕ್ಕೆ ನಿಗದಿತ
ಸಮಯದೊಳಗೆ ಪ್ರಸ್ತಾವನೆಯನ್ನೂ
ಕಳುಹಿಸಲಾಗಿತ್ತು.
ಆದರೆ, ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ
ಸರಕಾರ ಆಯ್ಕೆ ಮಾಡಿರುವ ದೇಶದ ಪ್ರಮುಖ 100
ನಗರಗಳ ಪಟ್ಟಿ ಈಗ
ಹೊರಬಿದ್ದಿದ್ದು, ರಾಜ್ಯದಿಂದ
ಮಾಜಿ ಸಿಎಂ ಹಾಗೂ ಹಾಲಿ ಸಂಸದ
ಬಿ.ಎಸ್.ಯಡಿಯೂರಪ್ಪ ಪ್ರತಿನಿಧಿಸುವ
ಶಿವಮೊಗ್ಗದ ಅದೃಷ್ಟ ಮಾತ್ರ
ಖುಲಾಯಿಸಿದೆ.
ಶಿವಮೊಗ್ಗ
ಒಳಗೊಂಡಂತೆ ತುಮಕೂರು,
ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ,
ಮಂಗಳೂರು ನಗರಗಳನ್ನು ಸ್ಮಾರ್ಟ್ ಸಿಟಿಗೆ
ಪರಿಗಣಿಸಲು ಕೋರಿ ರಾಜ್ಯ ಸರಕಾರದಿಂದ
ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿ
ಕೊಡಲಾಗಿತ್ತು. ಕೇಂದ್ರ ಸರಕಾರ
ಸ್ಮಾರ್ಟ್ ಸಿಟಿಗೆ ಆಯ್ಕೆ ಮಾಡುವ
ಮಾನದಂಡಗಳೆಲ್ಲ ಈ ನಗರಗಳಿಗಿವೆ
ಎಂದೇ ಈ ನಗರಗಳನ್ನು ಆಯ್ಕೆ
ಮಾಡುವಂತೆ ಪ್ರಸ್ತಾವನೆ ಕಳಿಸಲಾಗಿತ್ತು.
ಹಿಂದೊಮ್ಮೆ ರಾಜ್ಯಕ್ಕೆ ಭೇಟಿ
ನೀಡಿದಾಗ ಕೇಂದ್ರ ನಗರಾಭಿವೃದ್ಧಿ
ಸಚಿವ ವೆಂಕಯ್ಯ ನಾಯ್ಡು ಅವರು
ತುಮಕೂರನ್ನು ಸ್ಮಾರ್ಟ್ ಸಿಟಿ ಮಾಡಲಾಗುವುದು
ಎಂಬ ಹೇಳಿಕೆಯನ್ನೂ ನೀಡಿದ್ದರು.
ಕೇಂದ್ರಕ್ಕೆ ಸೆಡ್ಡು
ಬೆಂಗಳೂರು, ಮೈಸೂರು ಮತ್ತು ಗುಲ್ಬರ್ಗ
ನಗರಗಳನ್ನು ರಾಜ್ಯದ ಅನುದಾನದಿಂದಲೇ
ಅಭಿವೃದ್ಧಿ ಪಡಿಸಲು ಸರಕಾರ ತೀರ್ಮಾನ
ಕೈಗೊಂಡಿದೆ. ಆದರೆ, ಇಲ್ಲಿಯೂ
ಸ್ಮಾರ್ಟ್ ಸಿಟಿ ಸಂಬಂಧ ಕೇಂದ್ರ
ಸರಕಾರ ರೂಪಿಸಿರುವ ಮಾರ್ಗಸೂಚಿಯನ್ನು
ಅನುಸರಿಸಲಾಗುತ್ತದೆ ಎಂದು ರಾಜ್ಯದ
ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಪ್ರಸ್ತಾವನೆಯಲ್ಲಿದ್ದ ನಗರಗಳು
* ತುಮಕೂರು
* ಶಿವಮೊಗ್ಗ
* ದಾವಣಗೆರೆ
* ಹುಬ್ಬಳ್ಳಿ-ಧಾರವಾಡ
* ಬೆಳಗಾವಿ
* ಮಂಗಳೂರು
ರಾಜಧಾನಿಗಳಿಗೆ ಅದೃಷ್ಟ
ರಾಜಧಾನಿ ನಗರಗಳಾದ ಲಖನೌ, ಮುಂಬಯಿ,
ಗಾಂಧಿನಗರ, ಜೈಪುರ, ವಿಜಯವಾಡ,
ಭುವನೇಶ್ವರ, ರಾಯಪುರ್ ಮತ್ತು ಗುವಾಹಟಿ ನಗರಗಳು
ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸ್ಥಾನ ಪಡೆದರೆ,
ಪಟನಾ, ಕೋಲ್ಕತಾ ಮತ್ತು ಬೆಂಗಳೂರು
ಮಹಾನಗರಗಳು ವಂಚಿತವಾಗಿವೆ. ದೇಶದ ಎಲ್ಲಾ
ಕೇಂದ್ರಾಡಳಿತ ಪ್ರದೇಶಗಳು ಸ್ಮಾರ್ಟ್ ಸಿಟಿ
ಅಭಿವೃದ್ಧಿಗೆ ಆಯ್ಕೆಯಾಗಿವೆ. ಅಷ್ಟೇನೂ
ಪರಿಚಿತವಲ್ಲದ ಹಾಗೂ ಪೌರಾಡಳಿತವಿರುವ ಬಿಹಾರ್
ಷರೀಫ್, ಮೊರದಾಬಾದ್,
ಸಹಾರಣ್ಪುರ್, ಧರ್ಮಶಾಲಾ ಮತ್ತು ರಾಜ್ಯದ
ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿ
ಅಭಿವೃದ್ಧಿಗೆ ಆಯ್ಕೆಯಾಗಿವೆ.
ಮಹಾನಗರಗಳ ಕೈ ಬಿಡಲು ಕಾರಣ?
ಹಲವು ಬಾರಿ ಅವಧಿ ವಿಸ್ತರಣೆಯಾದರೂ ನಿಗದಿತ
ಕಾಲಮಿತಿಯೊಳಗೆ 'ಜವಾಹರ್ಲಾಲ್
ನೆಹರೂ ರಾಷ್ಟ್ರೀಯ ನಗರ ಪುನರುತ್ಥಾನ
ಅಭಿಯಾನ'(ಜೆಎನ್ನರ್ಮ್)ದ ಯೋಜನೆಗಳನ್ನು
ಪೂರ್ಣಗೊಳಿಸದ ಮಹಾನಗರಗಳನ್ನು
ಅಸಮರ್ಥ ಆಡಳಿತದ ಕಾರಣ ನೀಡಿ ಕೈ
ಬಿಡಲಾಗಿದೆ.
ಸ್ಮಾರ್ಟ್ ಸಿಟಿ ಎಂದರೇನು?
ಅತ್ಯಾಧುನಿಕ ತಂತ್ರಜ್ಞಾನ ಆಧರಿತ, ಸಕಲ
ಸೌಕರ್ಯಗಳನ್ನೊಳಗೊ
ಂಡ, ಅತ್ಯುತ್ತಮ ಜೀವನ
ಗುಣಮಟ್ಟ ನೀಡಬಲ್ಲ, ಸ್ವಚ್ಛ ಹಾಗೂ
ಸುಸ್ಥಿರ
ವಾತಾವರಣವನ್ನೊಳಗೊ
ಂಡ ಮಾದರಿ ನಗರ; 24/7 ಗಂಟೆ
ನೀರು, ವಿದ್ಯುತ್, ಜಾಗತಿಕ ಮಟ್ಟದ ಸಾರಿಗೆ
ವ್ಯವಸ್ಥೆ, ಜಾಗತಿಕ ಮಟ್ಟದ ಶಿಕ್ಷಣ ಮತ್ತು
ಮನರಂಜನೆ ಲಭ್ಯ. ಬಹುತೇಕ ಸೇವೆಗಳು
ಆನ್ಲೈನ್, ಶೇ 100ರಷ್ಟು ತ್ಯಾಜ್ಯ ನೀರು
ಸಂಸ್ಕರಣೆ, ನೀರಿನ ಶುದ್ಧತೆ ಕಾಪಾಡಲು
ಪ್ರತ್ಯೇಕ ವ್ಯವಸ್ಥೆ, ತ್ಯಾಜ್ಯದಿಂದ
ವಿದ್ಯುತ್-ಇಂಧನ ಉತ್ಪಾದನೆ,
ನವೀಕರಿಸಬಹುದಾದ ಇಂಧನಗಳ
ಬಳಕೆ, ಪರಿಸರ ಸ್ನೇಹಿ ಕಟ್ಟಡಗಳು,
ತಂತ್ರಜ್ಞಾನ ಆಧರಿತ ಸ್ಮಾರ್ಟ್
ಪಾರ್ಕಿಂಗ್ ಮತ್ತು ಟ್ರಾಫಿಕ್ ನಿರ್ವಹಣೆ
5 ವರ್ಷಕ್ಕೆ 500 ಕೋಟಿ
ಒಟ್ಟು 100 ಸ್ಮಾರ್ಟ್ ಸಿಟಿಗಳ ನಿರ್ಮಾಣ ಗುರಿ,
ಮೊದಲ ಹಂತದಲ್ಲಿ 20,
ಮುಂದಿನ ವರ್ಷದಿಂದ ಪ್ರತಿ ವಷ 40
ನಗರಗಳನ್ನು ಸ್ಮಾರ್ಟ್ ಸಿಟಿಗಳನ್ನಾಗಿ
ಅಭಿವೃದ್ಧಿಪಡಿಸಲಾಗುತ್ತದೆ. ಸ್ಮಾರ್ಟ್ ಸಿಟಿಯಾಗಿ
ಆಯ್ಕೆಯಾದ ನಗರಕ್ಕೆ ಕೇಂದ್ರ
ಸರ್ಕಾರದಿಂದ ವರ್ಷಕ್ಕೆ ತಲಾ 100
ಕೋಟಿಯಂತೆ 5 ವರ್ಷದಲ್ಲಿ 500 ಕೋಟಿ ಅನುದಾನ
ಲಭಿಸಲಿದೆ. 5 ವರ್ಷಗಳಿಗೆ 48,000 ಕೋಟಿ ರೂ
ಮೀಸಲಿಡಲಾಗಿದೆ.
ಆಯ್ಕೆಗೆ ಮಾನದಂಡವೇನು?
ಯೋಜನೆಯನ್ನು ಸಮರ್ಥವಾಗಿ ಜಾರಿ ಮಾಡುವ ಹಾಗೂ
ಸ್ವಂತ ಬಲದಿಂದ ಸಂಪನ್ಮೂಲ
ಕ್ರೋಡೀಕರಿಸುವ ಶಕ್ತಿ
ಹೊಂದಿರುವ ನಗರಗಳನ್ನು
ಮಾತ್ರ ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ ಆಯ್ಕೆ
ಮಾಡಲಾಗಿದೆ. ನಗರದಲ್ಲಿ ಸಮರ್ಪಕ ಇ-ಆಡಳಿತ
ಜಾರಿ ಮಾಡಿರುವುದು, 2011ರಿಂದ ಈಚೆಗೆ
ಶೌಚಾಲಯಗಳ ನಿರ್ಮಾಣ ಕನಿಷ್ಠ 5%ರಷ್ಟು
ಹೆಚ್ಚಳ, ಇ-ನ್ಯೂಸ್ಲೆಟರ್ಗಳ ಪ್ರಕಟಣೆ,
ಸಿಬ್ಬಂದಿ ವೇತನ ಬಟವಾಡೆ ಟ್ರ್ಯಾಕ್ ರೆಕಾರ್ಡ್,
ಎಲ್ಲ ಸರಕಾರಿ ಖರ್ಚುಗಳ ವಿವರ ಆನ್ಲೈನ್ನಲ್ಲಿ
ಪ್ರಕಟಣೆ, ನಗರಾಭಿವೃದ್ಧಿ ಮತ್ತು ಜನರ
ಪಾಲ್ಗೊಳ್ಳುವಿಕೆಯ ಸಾಧನೆ ಆಧರಿಸಿ
ಆಯ್ಕೆ ಮಾಡಲಾಗಿದೆ.
-----
''ಸ್ಮಾರ್ಟ್ ಸಿಟಿ ಯೋಜನೆಗೆ ಪ್ರಸ್ತಾವನೆ ಕಳುಹಿಸಲು
ಶುಕ್ರವಾರ ಕೊನೆಯ ದಿನವಾಗಿತ್ತು. ನಾವು
ಶಿವಮೊಗ್ಗ ಸೇರಿ 6 ನಗರಗಳ
ಪ್ರಸ್ತಾವನೆ ಕಳುಹಿಸಿದ್ದೇವೆ. ಇದರಲ್ಲಿ ಯಾವ
ನಗರಗಳನ್ನು ಕೇಂದ್ರ ಆಯ್ಕೆ ಮಾಡಿದೆ ಎನ್ನುವ
ಅಧಿಕೃತ ಮಾಹಿತಿ ನಮಗೆ ಇನ್ನೂ ಲಭ್ಯವಾಗಿಲ್ಲ,''
- ಟಿ.ಕೆ. ಅನಿಲ್ ಕುಮಾರ್, ನಗರಾಭಿವೃದ್ಧಿ ಇಲಾಖ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023