Drop


Thursday, August 20, 2015

11 ಪೇಮೆಂಟ್ ಬ್ಯಾಂಕ್ ಆರಂಭಕ್ಕೆ ಆರ್ಬಿಐ ಅಸ್ತು

The Reserve Bank of India (RBI) paved the way for payment
banks in India, after giving an in
principle approval to as many as 11
entities for the creation of payment
banks. These include the likes of Bharti
Airtel, Tech Mahindra, Reliance
Industries, Dilip Shanghavi, Vodafone

ಮುಂಬೈ, ಆಗಸ್ಟ್. 20:
ಬ್ಯಾಂಕಿಂಗ್ ಕ್ಷೇತ್ರದಲ್ಲಿ
ಬದಲಾವಣೆ ತರಲು ಭಾರತ ೀಯ ರಿಸರ್ವ್
ಬ್ಯಾಂಕ್‌ (ಆರ್ಬಿಐ) ಬುಧವಾರ
ಹೊಸ ನೀತಿಯೊಂದಕ್ಕೆ ಒಪ್ಪಿಗೆ
ನೀಡಿದೆ.
ಅಂಚೆ ಇಲಾಖೆ, ರಿಲಯನ್ಸ್
ಇಂಡಸ್ಟ್ರೀಸ್, ಆದಿತ್ಯ ಬಿರ್ಲಾ
ನುವೊ, ವೊಡಾಫೋನ್
ಮತ್ತು ಏರ್ ಟೆಲ್ ಸೇರಿದಂತೆ ಒಟ್ಟು
11 ಸಂಸ್ಥೆಗಳಿಗೆ ಪೇಮೆಂಟ್
ಬ್ಯಾಂಕ್ ಆರಂಭಿಸಲು ತಾತ್ವಿಕ
ಒಪ್ಪಿಗೆ ನೀಡಿದೆ.
ಆಯ್ಕೆಯಾದ ಕಂಪನಿಗಳಿಗೆ ಬ್ಯಾಂಕ್
ಆರಂಭಿಸಲು 18 ತಿಂಗಳ ಅವಧಿಗೆ ಒಪ್ಪಿಗೆ
ನೀಡಲಾಗುತ್ತದೆ. ಆ ಅವಧಿಯಲ್ಲಿ
ನಿಗದಿಪಡಿಸಲಾಗಿರುವ ಷರತ್ತುಗಳನ್ನು
ಪೂರೈಸಿದರೆ ಅವುಗಳಿಗೆ ಪರವಾನಗಿ
ನೀಡಲಾಗುವುದು ಎಂದು ಆರ್​
ಬಿಐ ತಿಳಿಸಿದೆ.
ಅಲ್ಲದೇ ಚೋಳಮಂಡಲಂ
ಡಿಸ್ಟ್ರಿಬ್ಯೂಷನ್ ಸರ್ವಿಸಸ್, ಟೆಕ್
ಮಹೀಂದ್ರಾ, ನ್ಯಾಷನಲ್
ಸೆಕ್ಯುರಿಟೀಸ್ ಡೆಪಾಸಿಟರಿ ಲಿ.,
(ಎನ್ಎಸ್ಡಿಎಲ್), ಫಿನೊ ಪೇಟೆಕ್, ಸನ್
ಫಾರ್ಮಾಸ್ ದಿಲೀಪ್ ಶಾಂತಿಲಾಲ್
ಶಾಂಘ್ವಿ ಮತ್ತು ಪೇಟಿಎಮ್ಸ್ ವಿಜಯ್
ಶೇಖರ್ ಶರ್ಮಾ ಸಂಸ್ಥೆಗಳು ಸಹ
ಪೇಮೆಂಟ್ ಬ್ಯಾಂಕ್ ತೆರೆಯಲು
ತಾತ್ವಿಕ ಒಪ್ಪಿಗೆ ಪಡೆದುಕೊಂಡಿವೆ.
ಒಟ್ಟು 41 ಕಂಪನಿಗಳು ಪೇಮೆಂಟ್
ಬ್ಯಾಂಕ್ ಸ್ಥಾಪಿಸಲು ಪರವಾನಗಿ
ಕೋರಿ ಅರ್ಜಿ ಸಲ್ಲಿಸಿದ್ದವು. ಇದರಲ್ಲಿ
18 ಕಂಪನಿಗಳಿಗೆ ಒಪ್ಪಿಗೆ ಸಿಕ್ಕಿದೆ.
ಮಾರ್ಗಸೂಚಿ ಮತ್ತು
ಷರತ್ತುಗಳನ್ನು ಒಂದೂವರೆ
ವರ್ಷದವರೆಗೆ ಸರಿಯಾಗಿ ಪಾಲಿಸಬೇಕು.
ಅಲ್ಲದೇ ಗ್ರಾಹಕರಿಗೆ ಪೇಮೆಂಟ್
ಬ್ಯಾಂಕಿಂಗ್ ಕ್ಷೇತ್ರದ ಎಲ್ಲ
ಸೇವೆಗಳನ್ನೂ ತೃಪ್ತಿಕರವಾಗಿ
ಒದಗಿಸಿದರೆ ಮಾತ್ರ ಸ್ಥೆಗಳಿಗೆ ಮುಂದಿನ
ದಿನಗಳಲ್ಲಿ ಪೂರ್ಣ ಪ್ರಮಾಣದ
ಬ್ಯಾಂಕ್ ಆರಂಭಿಸಲು ಅನುಮತಿ
ನೀಡಲಾಗುವುದು ಎಂದು
ಆರ್ಬಿಐ ಸ್ಪಷ್ಟ ನಿರ್ದೇಶನ ನೀಡಿದೆ.