Drop


Thursday, August 13, 2015

ಕರ್ನಾಟಕ ರಾಜ್ಯ ಉಪನ್ಯಾಸಕ ಅರ್ಹತಾ ಪರೀಕ್ಷೆಗೆ ಅರ್ಜಿ ಹಾಕಿ ಕೊ.ದಿ.14/8/2015 for more call 9449686641

ಮೈಸೂರು, ಆಗಸ್ಟ್, 12: ಕರ್ನಾಟಕ
ರಾಜ್ಯ ಉಪನ್ಯಾಸಕ ಅರ್ಹತಾ
ಪರೀಕ್ಷೆ (K-SET)ಗೆ ಅರ್ಹ
ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ
ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯ
ವಿಶ್ವವಿದ್ಯಾನಿಲಯಗಳ ಆಯ್ದ 11
ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ
ನಡೆಸಲು ತೀರ್ಮಾನಿಸಲಾಗಿದ್ದು,
ಅರ್ಜಿ ಸಲ್ಲಿಸುವವರು ಎಂ.ಎ, ಎಂ.ಎಸ್ಸಿ
,ಎಂ.ಕಾಂ, ಎಂ.ಬಿ.ಎ, ಎಂಸಿಎ
ಸೇರಿದಂತೆ ಇನ್ನು ಹಲವು
ವಿಷಯಗಳಲ್ಲಿ ಸ್ನಾತಕೋತ್ತರ ಪದವಿ
ಪಡೆದಿರಬೇಕು.
ಸ್ನಾತಕೋತ್ತರ ಪದವಿಯಲ್ಲಿ
ಸಾಮಾನ್ಯ ವರ್ಗದವರು 55% ,
ಪ.ಜಾ/ಪ.ಪಂಗಡ ಅಭ್ಯರ್ಥಿಗಳು 50%
ಅಂಕ ಗಳಿಸಿರಬೇಕು. ಅಂತಿಮ ವರ್ಷದ
ಸ್ನಾತಕೋತ್ತರ ಪದವಿ ವ್ಯಾಸಂಗ
ಮಾಡುತ್ತಿರುವವರೂ ಸಹ ಅರ್ಜಿ
ಸಲ್ಲಿಸಬಹುದು.
ಅರ್ಜಿಯ ಕುರಿತಾದ ಸಂಪೂರ್ಣ
ಮಾಹಿತಿ http://kset.uni-mysore.ac.in
ಈ ವೆಬ್ಸೈಟ್ನಲ್ಲಿ ದೊರೆಯಲಿದ್ದು,
ಅರ್ಜಿ ಸಲ್ಲಿಸುವ ಕೊನೆ ದಿನಾಂಕ
14-08-2015 ಹಾಗೂ 100 ರೂ.ಗಳ
ದಂಡ ಶುಲ್ಕದೊಂದಿಗೆ ದಿನಾಂಕ
25-08-2015 ರವರೆಗೂ ಅರ್ಜಿ
ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಉಪ ಮುಖ್ಯಸ್ಥರು,
ಉದ್ಯೋಗ ಮಾಹಿತಿ ಮತ್ತು
ಮಾರ್ಗದರ್ಶನ ಕೇಂದ್ರ,
ಗ್ರಂಥಾಲಯ ಕಟ್ಟಡ,
ಮಾನಸಗಂಗೋತ್ರಿ, ಮೈಸೂರು
ವಿಶ್ವವಿದ್ಯಾನಿಲಯ, ಮೈಸೂರು
ದೂರವಾಣಿ ಸಂಖ್ಯೆ 0821-2516844,
ಮೊಬೈಲ್ ಸಂಖ್ಯೆ: 9449686641
ಇವರನ್ನು ಸಂಪರ್ಕಿಸುವುದು.