Drop


Tuesday, August 11, 2015

ಆ.15 ರಂದು ಪ್ರಧಾನಿಯಿಂದ 'ಸಾರ್ವತ್ರಿಕ ಆರೋಗ್ಯ ಸುರಕ್ಷಾ' ಯೋಜನೆ ಘೋಷಣೆ

ನವದೆಹಲಿ, ಆ.11-ಇಡೀ ದೇಶದ ಜನತೆಗೆ
ವರದಾನವಾಗಬಲ್ಲ ಹೊಸ ಹೆಲ್ತ್ಕೇರ್
(ಆರೋಗ್ಯಸುರಕ್ಷೆ)
ಯೋಜನೆಯೊಂದನ್ನು ಪ್ರಧಾನಿ
ನರೇಂದ್ರ ಮೋದಿ ಅವರು, ಭಾರತದ 69ನೇ
ಸ್ವಾತಂತ್ರ್ಯ ದಿನೋತ್ಸವದಂದು ಘೋಷಿಸುವ
ಸಾಧ್ಯತೆಯಿದೆ.
ಪ್ರಧಾನಿಯವರ ಈ ಮಹತ್ವಾಕಾಂಕ್ಷೆಯ
ಯೋಜನೆಗೆ ಸಂಬಂಧಿಸಿದಂತೆ ನಾವು
ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದು, ಆ.15ರ
ತಮ್ಮ ಭಾಷಣದಲ್ಲಿ ಮೋದಿಯವರು ಯೋಜನೆ
ಘೋಷಿಸಲಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ
ಸಾಮಾನ್ಯ ವಿಮಾ ಅಧಿಕಾರಿಯೊಬ್ಬರು
ತಿಳಿಸಿದ್ದಾರೆ.