Drop


Thursday, August 13, 2015

ಫೋರ್ಬ್ಸ್ ಬಿಡುಗಡೆ ಮಾಡಿದ 20 ವಿಶ್ವ ಶ್ರೀಮಂತರ ಪಟ್ಟಿ (೨೦೧೫)ಯಲ್ಲಿ ಭಾರತದ ಅಜೀಂ ಪ್ರೇಂಜಿ, ಶಿವ ನಡಾರ್

ನ್ಯೂಯಾರ್ಕ್, ಜು.30-ಫೋರ್ಬ್ಸ್
ನ ವಿಶ್ವದ ಅತ್ಯಂತ ಶ್ರೀಮಂತರ
2015ರ ಪಟ್ಟಿ ಬಿಡುಗಡೆಯಾಗಿದ್ದು,
ಮೈಕ್ರೋ ಸಾಫ್ಟ್ ಸಂಸ್ಥಾಪಕ ಬಿಲ್
ಗೇಟ್ಸ್ ಈ ಬಾರಿಯೂ ತಮ್ಮ
ಮೊದಲ ಸ್ಥಾನ ಯಾರಿಗೂ
ಬಿಟ್ಟುಕೊಟ್ಟಿಲ್ಲ.
ವಿಶ್ವದ ಶ್ರೀಮಂತರ ಈ ಪಟ್ಟಿಯಲ್ಲಿ
ಭಾರತೀಯರು ಗಣನೀಯ
ಸಂಖ್ಯೆಯಲ್ಲಿದ್ದು, 20 ಜನ ಸ್ಥಾನ
ಪಡೆದಿದ್ದಾರೆ. ಮೊದಲೆರೆಡು
ಸ್ಥಾನಗಳಲ್ಲಿ ವಿಪ್ರೋ ಅಧ್ಯಕ್ಷ
ಅಜೀಂ ಪ್ರೇಮ್ ಜೀ ಹಾಗೂ
ಹೆಚ್ಸಿಎಲ್ ನ ಸಂಸ್ಥಾಪಕ ಶಿವ
ನಾಡಾರ್ಇದ್ದಾರೆ. ಪ್ರಪಂಚದ
ಶ್ರೀಮಂತರ ಪಟ್ಟಿಯಲ್ಲಿ ಅಜೀಂ
ಪ್ರೇಮ್ ಜೀ ಅವರು 13ನೇ
ಸ್ಥಾನದಲ್ಲಿದ್ದರೆ, ಶಿವ ನಾಡಾರ್
14ನೇ ಸ್ಥಾನ ಪಡೆದಿದ್ದಾರೆ.
ಫೋರ್ಬ್ಸ್ ಬಿಡುಗಡೆ ಮಾಡಿರುವ
ಪಟ್ಟಿಯಲ್ಲಿರುವ 20 ಜನ ಭಾರತೀಯರ
ಸಾಲಿನಲ್ಲಿ ಭಾರತ ಮೂಲದ
ತಂತ್ರಜ್ಞಾನ ಕ್ಷೇತ್ರದ
ದೈತ್ಯರಾದ ರೋಮೇಶ್
ನಾದ್ವಾನಿ ಹಾಗೂ ಭರತ್
ದೇಸಾಯಿ ಅವರೂ
ಸಾನಪಡೆದಿದ್ದಾರೆ. ಏಷ್ಯಾದ ಅತಿ
ಶ್ರೀಮಂತರಲ್ಲಿ ಒಬ್ಬರಾಗಿರುವ 70
ವರ್ಷದ ಅಜೀಂ ಪ್ರೇಮ್ ಜೀ ಅವರ
ಒಟು ಆಸ್ತಿ ಮೊತ್ತ 17.4 ಶತಕೋಟಿ
ಡಾಲರ್ಗಳು .ಶಿವನಾಡಾರ್ ಆಸ್ತಿ 14.4
ಶತಕೋಟಿ ಡಾಲರ್ ಎಂದು ವರದಿ
ಹೇಳಿದೆ.