2015-16ನೆ ವರ್ಷವನ್ನು ಕನ್ನಡ ವರ್ಷವೆಂದು ಆಚರಿಸಲು ನಿರ್ಧಾರ : ಸಿದ್ದರಾಮಯ್ಯ


ಬೆಂಗಳೂರು,ಆ.15- ಕನ್ನಡ ಸಾಹಿತ್ಯ
ಪರಿಷತ್ತಿನ ಶತಮಾನೋತ್ಸವದ ಅಂಗವಾಗಿ
2015-16ನೆ ವರ್ಷವನ್ನು ಕನ್ನಡ
ವರ್ಷವೆಂದು ಆಚರಿಸಲು ನಿರ್ಧರಿಸಲಾಗಿದೆ
ಎಂದು ಮುಖ್ಯಮಂತ್ರಿ
ಸಿದ್ದರಾಮಯ್ಯ ಹೇಳಿದರು.
69ನೇ ಸ್ವಾತಂತ್ರ್ಯ ದಿನಾಚರಣೆಯ
ಅಂಗವಾಗಿ ನಗರದ ಮಾಣಿಕ್ ಷಾ ಪರೇಡ್
ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ರಾಜ್ಯವನ್ನು
ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ
ಅವರು, ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ
ಉತ್ತಮವಾಗಿದೆ. ಈವರೆಗೂ ಒಂದೂ
ಕೊಮುಗಲಭೆಯೂ ನಡೆದಿಲ್ಲ.
ಭಯೊತ್ಪಾದಕ ಚಟುವಟಿಕೆಗಳನ್ನು
ನಿಯಂತ್ರಿಸಲು ಬೆಂಗಳೂರಿನಲ್ಲಿ
ಕೇಂದ್ರೀಯ ಕಮ್ಯಾಂಡರ್
ಸೆಂಟರ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಈಗಾಗಲೇ
ಹೊಸ 10 ಮಹಿಳಾ
ಪೊಲೀಸ್ ಠಾಣೆಗಳನ್ನು
ಆರಂಭಿಸಲಾಗಿದೆ. 30 ಹೊಸ
ಪೊಲೀಸ್ ಠಾಣೆಗಳನ್ನು
ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು ಅಭಿವೃದ್ಧಿಗೆ ಒತ್ತು:
ಬೆಂಗಳೂರು ವಿಶ್ವದಲ್ಲೇ ಹೆಮ್ಮೆಯ ನಗರ.
ಇತ್ತೀಚೆಗೆ ನಗರ ಮಂಕಾಗಿದೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ
ನಂತರ ಅಭಿವೃದ್ಧಿಯನ್ನು ಸಮನಾಗಿ
ಸ್ವೀಕರಿಸಿ 4635ಕೋಟಿ ರೂ. ನಗರ
ಅಭಿವೃದ್ಧಿಗೆ ಅನುದಾನ
ನೀಡಲಾಗಿದೆ.ರಾಜ್ಕುಮಾರ್ ರಸ್ತೆ, ಹಳೇ ವಿಮಾನ
ನಿಲ್ದಾಣ ರಸ್ತೆಗಳಿಗೆ 18.73
ಕಿ.ಮೀ.ರನ್ನು 180 ಕೋಟಿ ರೂ.ವೆಚ್ವದಲ್ಲಿ
ಸಿಗ್ನಲ್ಮುಕ್ತ ಕಾರಿಡಾರ್ ಮಾಡಲಾಗುತ್ತದೆ.
ರಾಜಾಜಿನಗರದ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ 30
ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸುತ್ತಿದ್ದು,
ಕಾಮಗಾರಿ ಮುಕ್ತಾಯದ ಹಂತದಲ್ಲಿದೆ.
ಬಸವೇಶ್ವರನಗರ ಮುಖ್ಯರಸ್ತೆಯಲ್ಲಿನ
ಗ್ರೇಡ್ಸಫರೇಟರ್ ಕಾಮಗಾರಿ
ಆರಂಭಗೊಂಡಿದೆ.
ಓಕಳಿಪುರಂ ಜಂಕ್ಷನ್ನಿಂದ
ಪೌಂಟನ್ವೃತ್ತದ ವರೆಗೆ 115 ಕೋಟಿ
ರೂ.ವೆಚ್ಚದಲ್ಲಿ 8 ಪಥದ ಕಾರಿಡಾರ್ ರಸ್ತೆ ನಿರ್ಮಾಣ
ಕಾಮಗಾರಿ
ಪ್ರಾರಂಭಗೊಂಡಿದೆ
ಎಂದು ಹೇಳಿದರು.ಬಿಬಿಎಂಪಿಯಲ್ಲಿ
ಹಿಂದಿನ ಮೂರು ವರ್ಷದಲ್ಲಿ 4473 ಕೋಟಿ ರೂ.
ತೆರಿಗೆ ಸಂಗ್ರಹಿಸಿದ್ದು, ಕಳೆದ ಎರಡು
ವರ್ಷದಲ್ಲಿ ನಮ್ಮ ಸರ್ಕಾರ ಆಸಕ್ತಿ ವಹಿಸಿ
4440ಕೋಟಿ ರೂ. ತೆರಿಗೆ ಸಂಗ್ರಹಿಸಿದೆ ಎಂದು
ಹೇಳುವ ಮೂಲಕ, ಬಿಜೆಪಿ ಆಡಳಿತಕ್ಕಿಂತಲೂ
ನಮ್ಮ ಆಡಳಿತವೇ ಸೂಕ್ತ ಎಂದು ಸಂದೇಶ
ಸಾರುವ ಪರೋಕ್ಷ ಪ್ರಯತ್ನ ನಡೆಸಿದರು.
ರಾಜ್ಯದಲ್ಲಿ ಉದ್ಯಮ ಸ್ನೇಹಿ ವಾತಾವರಣವಿದೆ.
ತುಮಕೂರು ಬಳಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ
ಕೈಗಾರಿಕೆ ವಸಾಹತು ಸ್ಥಾಪಿಸಲಾಗುತ್ತಿದೆ. ವಿದೇಶಿ ನೇರ
ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮೂರನೆ
ಸ್ಥಾನದಲ್ಲಿದೆ. ಕರ್ನಾಟಕವನ್ನು ಏಷ್ಯಾದ ಜ್ಞಾನ
ಕೇಂದ್ರವೆಂದು ಕರೆಯಲಾಗುತ್ತಿದೆ.
ಹೊಸ ಕೈಗಾರಿಕಾ
ನೀತಿಯಿಂದ 15 ಲಕ್ಷ ಉದ್ಯೋಗ
ಸೃಷ್ಟಿಯಾಗಲಿದೆ. ಕಳೆದ ಎರಡು ವರ್ಷದಲ್ಲಿ 362
ಉದ್ಯಮಗಳ ಸ್ಥಾಪನೆಗೆ ಅನುಮೋದನೆ
ನೀಡಲಾಗಿದ್ದು, 95,520 ಬಂಡವಾಳ
ಹೂಡಿಕೆಯಾಗಿ 2,26,995 ಲಕ್ಷ ಉದ್ಯೋಗ ಸಿಗಲಿದೆ
ಎಂದು ವಿವರಿಸಿದರು.ಸ್ವಾತಂತ್ರ್ಯ
ಸಾಮಾಜಿಕ ಸಮಾನತೆಗೆ ಕಾರಣವಾಗಬೇಕು. ನಾನು
ಮುಖ್ಯಮಂತ್ರಿ ಆದಾಗ ಸಂಪತ್ತು,
ಅಧಿಕಾರ ಸಮಾನ ಹಂಚಿಕೆಯಾಗಬೇಕು ಎಂಬ
ಕನಸು ಕಂಡಿದ್ದೆ. ಅದನ್ನು
ಈಡೇರಿಸುವನಿಟ್ಟಿನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ
ಸಮೀಕ್ಷೆ ನಡೆಸಲಾಗುತ್ತಿದೆ. ಕರ್ನಾಟಕ
ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು
ಉಪ ಯೋಜನೆ ಕಾಯ್ದೆ ಜಾರಿಗೆ ತರಲಾಗಿದೆ ಎಂದು
ಅವರು ಹೇಳಿದರು.24 ಪುಟಗಳ ಭಾಷಣದಲ್ಲಿ ರೈತರ
ಸಮಸ್ಯೆಗಳ ಕುರಿತು ಚರ್ಚಿಸಲು ಸಿಎಂ
ಹೆಚ್ಚಿನಕಾಲಾವಕಾಶ ಮೀಸಲಿಟ್ಟರು.
ವಿಷಾದದ ನಡುವೆಯೂ ರಾಜ್ಯದ ಜನರಿಗೆ
ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023