Drop


Monday, August 10, 2015

ಶೀಘ್ರದಲ್ಲೇ ಮಾರುಕಟ್ಟೆಗೆ ಗೂಗಲ್ ನಿಂದ 3 ಸಾವಿರ ರೂ. ಸ್ಮಾರ್ಟ್ ಫೋನ್


ಉದಯವಾಣಿ, Aug 10, 2015, 1:35 PM
IST
ನವದೆಹಲಿ: ಭಾರತದಲ್ಲಿ ಆಂಡ್ರಾಯ್ಡ್
ಒನ್ ಪ್ರೊಜೆಕ್ಟ್ ಮೂಲಕ
ಮಾರುಕಟ್ಟೆಗೆ ಲಗ್ಗೆ ಇಡಲು ಗೂಗಲ್
ಚಿಂತಿಸುತ್ತಿದೆ. ಪ್ರಸಿದ್ಧ ಆಂಡ್ರಾಯ್ಡ್
ಮೇಕರ್ ಸಂಸ್ಥೆಯಾಗಿರುವ ಗೂಗಲ್
ಕಳೆದ ಸೆಪ್ಟೆಂಬರ್ ನಲ್ಲಿ 6,500
ರೂಪಾಯಿಗಳ ಹ್ಯಾಂಡ್ ಸೆಟ್ ನ್ನು
ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.
ಇದೀಗ ಗ್ರಾಹಕರನ್ನು ಹೆಚ್ಚಿನ
ರೀತಿಯಲ್ಲಿ ಸೆಳೆದುಕೊಳ್ಳಲು 3
ಸಾವಿರ ರೂಪಾಯಿಗೆ ಅತೀ ಕಡಿಮೆ
ಬೆಲೆಯ ಆಂಡ್ರಾಯ್ಡ್ ಸೆಟ್ ಅನ್ನು
ಬಿಡುಗಡೆ ಮಾಡುವ ಮುಖೇನ
ದೇಶದಲ್ಲಿ ದೊಡ್ಡ ಪ್ರಮಾಣದ
ಹೂಡಿಕೆಗೆ ಮುಂದಾಗಿದೆ ಎಂದು
ವರದಿಯೊಂದು ತಿಳಿಸಿದೆ.
ಈ ಯೋಜನೆಯನ್ನು
ಜಾರಿಗೊಳಿಸಲು ಸಂಸ್ಥೆ
ಬದ್ಧವಾಗಿದೆ. ಹಾಗಾಗಿ ತುಂಬಾ
ಉತ್ತಮವಾದ ಸೆಟ್ ಅನ್ನು ಕಡಿಮೆ ಬೆಲೆಗೆ
ದೊರೆಯುವಂತೆ ಮಾಡುವ ಗುರಿ
ತಮ್ಮದು ಎಂದು ಭಾರತ ಮತ್ತು
ದಕ್ಷಿಣ ಏಷ್ಯಾದ ಗೂಗಲ್
ಮ್ಯಾನೇಜಿಂಗ್ ಡೈರೆಕ್ಟರ್ ರಾಜನ್
ಆನಂದನ್ ಪತ್ರಿಕೆಯೊಂದಕ್ಕೆ
ನೀಡಿರುವ ಸಂದರ್ಶನದಲ್ಲಿ
ತಿಳಿಸಿದ್ದಾರೆ.
ಭಾರತದ ಮಾರುಕಟ್ಟೆಗೆ 2 ಸಾವಿರ
ರೂ. ಮತ್ತು 3 ಸಾವಿರ ರೂಪಾಯಿ
ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ
ಮಾಡಲು ನಿರ್ಧರಿಸಿರುವುದಾಗಿ
ಹೇಳಿದರು. ಕಳೆದ ವರ್ಷ ಗೂಗಲ್
ಆಂಡ್ರಾಯ್ಡ್ ಒನ್ ಪ್ರಾಜೆಕ್ಟ್ ಅನ್ನು
ಮೂಲಕ ಸ್ಮಾರ್ಟ್ ಫೋನ್ ಅನ್ನು
ಮಾರುಕಟ್ಟೆಗೆ ಬಿಟ್ಟಿತ್ತು. ಗೂಗಲ್
ಭಾರತಲ್ಲಿ ಕಾರ್ಬೋನ್, ಸ್ಪೈಸ್,
ಮೈಕ್ರೋಮ್ಯಾಕ್ಸ್ ಹಾಗೂ
ಲಾವಾ ಕಂಪನಿಗಳ ಜೊತೆ ಪಾರ್ಟನರ್
ಆಗಿದ್ದು, ಈಗಾಗಲೇ ಕಡಿಮೆ ಬೆಲೆಗೆ
ಆಂಡ್ರಾಯ್ಡ್ ಹ್ಯಾಂಡ್ ಸೆಟ್
ಗಳನ್ನು ಮಾರುಕಟ್ಟೆಗೆ ಬಿಡುಗಡೆ
ಮಾಡಿದ್ದವು. ಆದರೆ ಈಗ ಗೂಗಲ್
ಅತೀ ಕಡಿಮೆ ಬೆಲೆಯ ಆಂಡ್ರಾಯ್ಡ್
ಹ್ಯಾಂಡ್ ಸೆಟ್ ಅನ್ನು ಬಿಡುಗಡೆ
ಮಾಡಲು ನಿರ್ಧರಿಸಿದೆ.