ವಿಕ್ರಮ ಸಿಂಘೆ ಇಂದು ಪ್ರಮಾಣ ಸ್ವೀಕಾರ( ಸತತ 4ನೇ ಬಾರಿ)-

ಕೊಲಂಬೊ: ಲಂಕಾ ಸಂಸತ್
ಚುನಾವಣೆಯಲ್ಲಿ ಯುನೈಟೆಡ್
ನ್ಯಾಷನಲ್ ಪಾರ್ಟಿ (ಯುಎನ್ಪಿ)
ಅತಿದೊಡ್ಡ ಪಕ್ಷವಾಗಿ
ಹೊರಹೊಮ್ಮಿದೆ. ಇದರೊಂದಿಗೆ
ಪಕ್ಷದ ನಾಯಕ ರನಿಲ್ ವಿಕ್ರಮಸಿಂಘೆ
ಅವರು ಸತತ ನಾಲ್ಕನೇ ಬಾರಿಗೆ
ಲಂಕಾದ ಪ್ರಧಾನಿಯಾಗಿ ಅಧಿಕಾರ
ವಹಿಸಿಕೊಳ್ಳುವುದು ಖಚಿತವಾಗಿದೆ.
ವಿಕ್ರಮಸಿಂಘೆ ಅವರ ಪ್ರಮಾಣ ವಚನ
ಸಮಾರಂಭ ಗುರುವಾರ ನಡೆಯಲಿದೆ.
ವಿಕ್ರಮ ಸಿಂಘೆ ನೇತೃತ್ವದ ಯುಎನ್ಪಿ
106 ಸ್ಥಾನಗಳಲ್ಲಿ ಗೆಲುವು
ಸಾಧಿಸಿದ್ದು, ಸರಳ ಬಹುಮತಕ್ಕೆ ಕೇವಲ
ಎಳು ಸ್ಥಾನಗಳ ಕೊರತೆ ಇದೆ.
ವಿಕ್ರಮಸಿಂಘೆ ಅವರಿಗೆ ರಾಜಕೀಯ
ಪ್ರತಿಸ್ಪರ್ಧಿ ಮಾಜಿ ಅಧ್ಯಕ್ಷ ಮಹಿಂದಾ
ರಾಜಪಕ್ಸೆ ಅವರ ಯುನೈಟೆಡ್ ಪೀಪಲ್ಸ್
ಫ್ರೀಡಂ ಅಲೆಯನ್ಸ್ ನಿಂದಲೇ
ಬೆಂಬಲ ಸಿಗಲಿದೆ ಎಂಬ ಮಾತುಗಳು
ಕೇಳಿಬರುತ್ತಿವೆ. ರಾಜಪಕ್ಸೆ
ನೇತೃತ್ವದ ಮೈತ್ರಿಕೂಟ 95
ಸ್ಥಾನಗಳನ್ನು ಪಡೆದುಕೊಂಡಿದೆ.
ತಮಿಳು ಪ್ರಾಬಲ್ಯದ ಕ್ಷೇತ್ರಗಳಲ್ಲಿ
ಅಭೂತಪೂರ್ವ ಯಶಸ್ಸು ಸಾಧಿಸಿರುವ
ತಮಿಳು ನ್ಯಾಷನಲ್ ಅಲೆಯನ್ಸ್ 16
ಸ್ಥಾನಗಳನ್ನು ಗೆದ್ದುಕೊಂಡಿದೆ.
''ಸಿಂಘೆ ಅವರು ಅಧಿಕಾರ ಸ್ವೀಕರಿಸಿದ
ಬೆನ್ನಿಗೇ ಸಚಿವ ಸಂಪುಟ
ರಚಿಸುತ್ತೇವೆ,'' ಎಂದು ಮಾಜಿ ವಿತ್ತ
ಸಚಿವ ರವಿ ಕರುಣಾನಾಯಕೆ
ತಿಳಿಸಿದ್ದಾರೆ.
1993ರಲ್ಲಿ ಸಿಂಘೆ ಅವರು
ಮೊದಲಬಾರಿಗೆ ಪ್ರಧಾನಿಯಾಗಿ
ಆಯ್ಕೆಯಾಗಿದ್ದರು. ಆ ಸಮಯದಲ್ಲಿ
ಅಧ್ಯಕ್ಷರಾಗಿದ್ದ ರಾಣಾ ಸಿಂಘೆ
ಪ್ರೇಮದಾಸ ಅವರು ಆತ್ಮಾಹುತಿ
ಬಾಂಬ್ ದಾಳಿಯಲ್ಲಿ ಹತರಾದ ನಂತರ
2002ರಲ್ಲಿ ಸಿಂಘೆ ಅವರಿಗೆ ಎರಡನೇ
ಬಾರಿಗೆ ಪ್ರಧಾನಿಯಾಗುವ ಅವಕಾಶ
ಒಲಿಯಿತಾದರೂ ಲಂಕಾದ ಆರ್ಥಿಕ ಸ್ಥಿತಿ
ಹಿನ್ನಡೆಗೆ ಸಿಂಘೆ ಅವರನ್ನೇ
ಕಾರಣಕರ್ತರನ್ನಾಗಿ
ಮಾಡಲಾಯಿತು.
''ಸರಕಾರ ರಚಿಸಲು ಜನಾಧೇಶ ಸಿಕ್ಕಿದೆ.
ನಾವು ಒಳ್ಳೆಯ ಆಡಳಿತ
ನೀಡುತ್ತೇವೆ. ಜನರು ನಮ್ಮ
ಮೇಲಿಟ್ಟಿರುವ ನಂಬಿಕೆಗೆ ಎಂದೂ
ದ್ರೋಹ ಬಗೆಯಲಾರೆವು,'' ಎಂದು
ಸಿಂಘೆ ಅವರು ಸಾರ್ವಜನಿಕ
ಸಭೆಯೊಂದರಲ್ಲಿ ಹೇಳಿದ್ದಾರೆ.
''ಸದ್ಯ ಲಂಕಾದ ಏಳಿಗೆಗೆ ಎಲ್ಲಾ
ಪಕ್ಷಗಳ ಸಹಕಾರವೂ
ಬೇಕಾಗುತ್ತದೆ. ಹಾಗಾಗಿ ನಾವು
ಒಗ್ಗಟ್ಟಿನಿಂದ ಕೆಲಸ ಮಾಡೋಣ,''
ಎಂದೂ ಅವರು ತಿಳಿಸಿದ್ದಾರೆ.
225 ಸದಸ್ಯ ಬಲದ ಸಂಸತ್ನಲ್ಲಿ 196
ಸ್ಥಾನಗಳಿಗೆ ನೇರ ಚುನಾವಣೆ
ನಡೆಯುತ್ತದೆ. ಉಳಿದ 29 ಸಂಸದರನ್ನು,
ಪಕ್ಷಗಳು ಗಳಿಸುವ ಮತಗಳ ಪ್ರಮಾಣದ
ಆಧಾರದ ಮೇಲೆ ಆಯ್ಕೆ
ಮಾಡಲಾಗುತ್ತದೆ. ಈ ಕ್ಷೇತ್ರಗಳಿಗೆ
ಸೋಮವಾರ ಚುನಾವಣೆ ನಡೆದಿತ್ತು,

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023