Drop


Sunday, August 9, 2015

5869 ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕಕ್ಕೆ ಸೂಚನೆ-ಉದಯವಾಣಿ

ಬೆಂಗಳೂರು: ರಾಜ್ಯದ ಸರ್ಕಾರಿ
ಪ್ರಾಥಮಿಕ ಶಾಲೆಗಳಿಗೆ ಈಗಾಗಲೇ
9511 ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ
ಹೊರಡಿಸಿದ್ದ ರಾಜ್ಯ ಸರ್ಕಾರ,
ಇದೀಗ ಇನ್ನೂ 5869 ಹೆಚ್ಚುವರಿ ಅತಿಥಿ
ಶಿಕ್ಷಕರನ್ನು ನೇಮಕ
ಮಾಡಿಕೊಳ್ಳಲು ಸೂಚನೆ ನೀಡಿದೆ.
ರಾಜ್ಯದ ಪ್ರಾಥಮಿಕ ಮತ್ತು
ಪ್ರೌಢಶಾಲೆಗಳಲ್ಲಿ 26 ಸಾವಿರಕ್ಕೂ
ಹೆಚ್ಚು ಶಿಕ್ಷಕ ಹುದ್ದೆಗಳು ಖಾಲಿ
ಇದ್ದು, ಇದರಲ್ಲಿ ಪ್ರಸ್ತುತ 9511
ಪ್ರಾಥಮಿಕ ಮತ್ತು 1721 ಪ್ರೌಢಶಾಲಾ
ಶಿಕ್ಷಕರ ಕಾಯಂ ನೇಮಕಾತಿ
ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ನಡುವೆ
ವಿದ್ಯಾರ್ಥಿಗಳ ಶೈಕ್ಷಣಿಕ
ಹಿತದೃಷ್ಟಿಯಿಂದ ನೇಮಕಾತಿ
ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ 9511
ಪ್ರಾಥಮಿಕ ಮತ್ತು 1721 ಪ್ರೌಢಶಾಲಾ
ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು
ನೇಮಕ ಮಾಡಿಕೊಳ್ಳುವಂತೆ
ಆಯಾ ಶಾಲಾ
ಮುಖ್ಯೋಪಾಧ್ಯಾಯರಿಗೆ
ಸಾರ್ವಜನಿಕ ಶಿಕ್ಷಣ ಇಲಾಖೆ
ಆಯುಕ್ತರು ಕಳೆದ ಜುಲೈ
17ರಂದು ಸೂಚನೆ ನೀಡಿದ್ದಾರೆ.
ಇದೀಗ ಸರ್ಕಾರ ಅನುಮತಿ ನೀಡಿರುವ
ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲೆಗಳಿಗೆ
9511 ಅತಿಥಿ ಶಿಕ್ಷಕರ ನೇಮಕಾತಿ
ಜೊತೆಯಲ್ಲೇ ಇನ್ನೂ 5869
ಮಂದಿಯನ್ನು ಹೆಚ್ಚುವರಿಯಾಗಿ
ಅತಿಥಿ ಶಿಕ್ಷಕರಾಗಿ ನೇಮಕ
ಮಾಡಿಕೊಳ್ಳುವಂತೆ ಇಲಾಖೆಯ
ಆಯುಕ್ತ ಕೆ.ಎಸ್.ಸತ್ಯಮೂರ್ತಿ
ಆಜ್ಞಾಪಿಸಿದ್ದಾರೆ. ಹೆಚ್ಚುವರಿ ಅತಿಥಿ
ಶಿಕ್ಷಕರ ಸಂಖ್ಯೆಯನ್ನು
ಜಿಲ್ಲಾವಾರು ಹಂಚಿಕೆ ಮಾಡಿರುವ
ಇಲಾಖೆ, ವಿವಿಧ ಷರತ್ತುಗಳೊಂದಿಗೆ ಆ
ಸ್ಥಾನಗಳನ್ನು ಭರ್ತಿ
ಮಾಡಿಕೊಳ್ಳುವಂತೆ
ಮುಖ್ಯೋಪಧ್ಯಾಯರಿಗೆ
ಸೂಚಿಸಿದೆ.
ಪ್ರಮುಖ ಷರತ್ತುಗಳೇನು?:
ಪ್ರಸ್ತುತ ನಡೆಯುತ್ತಿರುವ ಶಿಕ್ಷಕರ
ನೇಮಕಾತಿ ಪ್ರಕ್ರಿಯೆ ಮುಗಿದು
ಕಾಯಂ ಶಿಕ್ಷಕರು ಕರ್ತವ್ಯಕ್ಕೆ
ಹಾಜರಾದ ಕೂಡಲೇ ಅತಿಥಿ ಶಿಕ್ಷಕರ
ಹುದ್ದೆಗಳು ತಾನಾಗೇ
ರದ್ದಾಗುತ್ತವೆ.
ಅತಿಥಿ ಶಿಕ್ಷಕರನ್ನು ಗ್ರಾಮೀಣ ಭಾಗದ
ಶಾಲೆಗಳಿಗೆ ಮಾತ್ರ ನೇಮಕ
ಮಾಡಿಕೊಳ್ಳಬೇಕು. ಅತಿಥಿ ಶಿಕ್ಷಕರ
ಆಯ್ಕೆಯ ಜವಾಬ್ದಾರಿ ಸಂಬಂಧಪಟ್ಟ
ಸರ್ಕಾರಿ ಶಾಲೆಯ
ಮುಖ್ಯೋಪಾಧ್ಯಾಯರದ್ದಾಗಿ
ದ್ದು, ಮೆರಿಟ್ ಆಧಾರದ ಮೇಲೆ
ನೇಮಕಾತಿ ನಡೆಯಬೇಕು ಎಂದು
ತಿಳಿಸಲಾಗಿದೆ.