ಹಿರೋಷಿಮಾ ಅಣುಬಾಂಬ್ ದಾಳಿಗೆ 70ನೇ ವರ್ಷದ ಕರಾಳ ನೆನಪು (Aug 6)


ಹಿರೋಷಿಮಾ,ಅ.6- ಹಿರೋಷಿಮಾದ ಮೇಲೆ ವಿನಾಶಕಾರಿ
ಅಣುಬಾಂಬ್ ದಾಳಿ ನಡೆದಿದ್ದ ಘಟನೆಯ 70ನೇ
ವರ್ಷದ ಸ್ಮರಣೆ ಕಾರ್ಯಕ್ರಮ ಇಂದು
ಜಪಾನ್ನಲ್ಲಿ ನಡೆಯಿತು. ವಿಶೇಷವೆಂದರೆ
ಅಮೆರಿಕದ ಅತ್ಯಂತ ಹಿರಿಯ
ಅಧಿಕಾರಿಯೊಬ್ಬರು ಈ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಪ್ರಧಾನಿ
ಶಿಂಜೋ ಅಬೆ ಹಾಗೂ ವಿದೇಶಗಳ ಇತರೆ ಆಹ್ವಾನಿತ
ಗಣ್ಯರು, ದೇಶದ ಹಿರಿಯ ರಾಜಕಾರಣಿಗಳು,
ಅಧಿಕಾರಿಗಳು ಇಂದು ಬೆಳಗ್ಗೆ 8.15ಕ್ಕೆ ಮೌನ
ಆಚರಿಸಿ ಅಂದಿನ ಆ ಕರಾಳ ನೆನಪನ್ನು
ಸ್ಮರಿಸಿದರು.
ದ್ವಿತೀಯ ಮಹಾಯುದ್ಧದ ಆ
ಸಂದರ್ಭದಲ್ಲಿ 1945ರ ಆ.6ರಂದು
ಅಮೆರಿಕದ ಬಿ-29 ಬಾಂಬರ್
(ಎನೊಲಾಗೆ) ಮೂಲಕ ಜಪಾನಿನ
ಸಂಪದ್ಬರಿತ ನಗರ ಹಿರೋಷಿಮಾ ಮೇಲೆ
ಅಣುಬಾಂಬ್ ಹಾಕಿತ್ತು. ಅದು ದ್ವಿತೀಯ
ಮಹಾಯುದ್ಧದ ಕೊನೇ ಭಾಗವಾಗಿತ್ತು.
ಆ ಅಣುಬಾಂಬಿನ ಶಕ್ತಿ ಎಷ್ಟಿತ್ತೆಂದರೆ
ಉಕ್ಕನ್ನೂ ಕರಗಿಸುವಂತೆ 4 ಸಾವಿರ ಡಿಗ್ರಿ
ಸೆಲ್ಪಿಯಸ್ ತಾಪಮಾನ
ಹೊಂದಿದ್ದು, ಎರಡೂ ನಗರಗಳೂ
ಸುಟ್ಟು ಭಸ್ಮವಾಗಿದ್ದವು. ಆ ಕಾಲಕ್ಕೆ 1,40,000 ಜನ
ಬೆಂದು ಹೋಗಿದ್ದರು. ಅಳಿದುಳಿದವರೂ ನಂತರ
ಆ ರೇಡಿಯಂ ಪರಿಣಾಮದಿಂದ
ಸಾವನ್ನಪ್ಪಿದ್ದರು.ನಂತರ ಆ.9ರಂದು
ನಾಗಸಾಕಿ ಎಂಬ ಇನ್ನೊಂದು
ನಗರದ ಮೇಲೂ ಅಮೆರಿಕ ಅಣುಬಾಂಬ್ ಎಸೆಯಿತು.
ನಾಗಸಾಕಿಯಲ್ಲಿ 70 ಸಾವಿರಕ್ಕೂ ಹೆಚ್ಚು ಜನ
ಬಲಿಯಾಗಿದ್ದರು.ಕೊನೆಗೆ ಜಪಾನ್
ಆ.15ರಂದು (1945) ಶರಣಾಯಿತು.
ವಾಷಿಂಗ್ಟನ್ನಿಂದ ಅಮೆರಿಕ ಸರ್ಕಾರ
ಕಳುಹಿಸಿದ್ದ ಹಿರಿಯ ಅಧಿಕಾರಿ ಹಾಗೂ ಅಮೆರಿಕದ ಜಪಾನ್
ರಾಯಭಾರಿ ಕೆರೋಲಿನ್ ಕೆನಡಿ ಅವರು ಪೀಸ್
ಮೆಲೋರಿಯಲ್ ಪಾರ್ಕ್ನಲ್ಲಿ ನಡೆದ
ಮೌನಾಚರಣೆಯಲ್ಲಿ
ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023