Drop


Tuesday, August 18, 2015

ಪ್ರತಿ ಸಾವಿರ ರೂ.ಗಳಿಗೆ 90 ರೂ. ಲಾಭಾಂಶವನ್ನು ಕರ್ನಾಟಕ ಸರಕಾರಿ ವಿಮಾ ಇಲಾಖೆ (ಕೆಜಿಐಡಿ) ಪ್ರಕಟಿಸಿದೆ

ಬೆಂಗಳೂರು: ಸರಕಾರಿ ನೌಕರರು ಮತ್ತು ನಿವೃತ್ತ
ಸಿಬ್ಬಂದಿ ಕಡ್ಡಾಯ ಜೀವ ವಿಮಾ
ಯೋಜನೆಯಡಿ ಮಾಡಿಸಿರುವ ವಿಮಾ
ಮೊತ್ತದ ಮೇಲೆ ಪ್ರತಿ ಸಾವಿರ
ರೂ.ಗಳಿಗೆ 90 ರೂ. ಲಾಭಾಂಶವನ್ನು ಕರ್ನಾಟಕ
ಸರಕಾರಿ ವಿಮಾ ಇಲಾಖೆ (ಕೆಜಿಐಡಿ) ಪ್ರಕಟಿಸಿದೆ.
ವಿಮಾ ಗಣಕರು ಮಾಡಿರುವ ಶಿಫಾರಸಿನಂತೆ
ಲಾಭಾಂಶ ಪ್ರಕಟಿಸಿ ಇಲಾಖೆ ಅಧಿಸೂಚನೆ
ಹೊರಡಿಸಿದೆ. ಇದು 2010ರಿಂದ
2012ರವರೆಗಿನ ವಿಮಾ ಮೊತ್ತಕ್ಕೆ
ಅನ್ವಯವಾಗಲಿದೆ. 2012ರ ಏ.1ರಿಂದ
2014ರ ಮಾ.31ರ ಅವಧಿಯಲ್ಲಿ
ಮೆಚ್ಯೂರಿಟಿಯಾಗಿರುವ ವಿಮಾ ಪಾಲಿಸಿಗಳಿಗೆ ಪ್ರತಿ
ಸಾವಿರಕ್ಕೆ 90 ರೂ. ಮಧ್ಯಾಂತರ
ಲಾಭಾಂಶವನ್ನೂ ಘೋಷಿಸಲಾಗಿದೆ.