ಕೆಎಸ್'ಓಯು ಓಪನ್ ಯೂನಿವರ್ಸಿಟಿಯ ಮಾರ್ಕ್ಸ್'ಕಾರ್ಡ್ ಆಟಕ್ಕುಂಟು ಲೆಕ್ಕಕ್ಕಿಲ್ಲ; ದಿಕ್ಕೆಟ್ಟ ವಿದ್ಯಾರ್ಥಿಗಳು.:


ಬೆಂಗಳೂರು(ಆ. 03): ಓದುವ ಆಸೆ.. ಶಿಕ್ಷಣ,
ಪದವಿ ಪಡೆಯುವ ಕನಸಲ್ಲಿ ಕೆಎಸ್'​ಓಯು
ಎಂಬ ವಿದ್ಯಾಸಂಸ್ಥೆಯಲ್ಲಿ ಪದವಿ
ಗಿಟ್ಟಿಸಿಕೊಂಡು ಖುಷಿಯಾಗಿದ್ದ
ವಿದ್ಯಾರ್ಥಿಗಳೀಗ ದುಃಖತಪ್ತರಾಗಿದ್ದಾರೆ.
ಕಷ್ಟಪಟ್ಟು ಓದಿ ಪಡೆದ ಸರ್ಟಿಫಿಕೇಟ್'​​ಗೆ
ಮಾನ್ಯತೆಯೇ ಇಲ್ಲದಂತಾಗಿದೆ. ಕೆಎಸ್'​ಒಯು
ಮಾರ್ಕ್ಸ್'​ಕಾರ್ಡ್​ ಈಗ ಆಟಕ್ಕುಂಟು ಲೆಕ್ಕಕ್ಕಿಲ್ಲ.
ಮಾನ್ಯತೆ ರದ್ಧತಿಯಿಂದ ಲಕ್ಷಾಂತರ
ವಿದ್ಯಾರ್ಥಿಗಳನ್ನ ಸಂಕಷ್ಟಕ್ಕೆ ದೂಡಿದೆ.
ಇದನ್ನ ಪ್ರಶ್ನಿಸಿದ್ರೆ, ಕುಲಪತಿಗಳು ಬೇಜವಾಬ್ದಾರಿಯ
ಉತ್ತರ ನೀಡುತ್ತಾರೆ. ಒಂದು
ಕಾಲದಲ್ಲಿ ಇಡೀ ದೇಶದ ಹೆಮ್ಮೆ
ಎನಿಸಿದ್ದ ಕರ್ನಾಟಕ ರಾಜ್ಯ ಮುಕ್ತ ವಿವಿ ಈಗ
ಇಂಥ ದುರ್ಗತಿಗೆ ಬಂದಿರುವುದು ನಿಜಕ್ಕೂ
ಖೇದಕರ.
ಏನು ಕಾರಣ..?
ಕೆಪಿಎಸ್​ಸಿ ಕಳೆದ ವರ್ಷ ಮೊರಾರ್ಜಿ
ದೇಸಾಯಿ ವಸತಿ ಶಾಲೆಯ ಶಿಕ್ಷಕರು ಹಾಗೂ ವಾರ್ಡನ್
ನೇಮಕಕ್ಕೆ ಆದೇಶ ಹೊರಡಿಸಿತ್ತು. ಈ
ಹುದ್ದೆಗೆ ಅಭ್ಯರ್ಥಿಗಳು ಕೆಎಸ್'​ಓಯು ಬಿಎಡ್
ಅಂಕಪಟ್ಟಿ ಹಿಡಿದುಕೊಂಡೇ
ಲಿಖಿತ ಪರೀಕ್ಷೆ ಎದುರಿಸಿ ಪಾಸಾಗಿದ್ದಾರೆ.
ಆದರೆ, ಈಗ ಆ ಅಂಕಪಟ್ಟಿಗೆ ಬೆಲೆ ಇಲ್ಲ.
ಹೀಗಾಗಿ ಕೆಪಿಎಸ್​ಸಿ ಸಂದರ್ಶನಕ್ಕೆ
ಅವಕಾಶ ನೀಡಿಲ್ಲ. ಹೀಗಾಗಿ
ವಿದ್ಯಾರ್ಥಿಗಳ ಸ್ಥಿತಿ ದೇವರಿಗೆ ಪ್ರೀತಿ
ಎಂಬಂತಾಗಿದೆ.
ಈ ಬಗ್ಗೆ ಕುಲಪತಿಗಳಿಗೆ ತಿಳಿಸಿದ್ರೆ.. ಒಂದು
ವಾರದಲ್ಲಿ ಸಮಸ್ಯೆ ಬಗೆಹರಿಯುತ್ತೆ.
ನೀವು ಕೆಪಿಎಸ್​'ಸಿ ವಿರುದ್ಧ
ನ್ಯಾಯಾಲಯದಲ್ಲಿ ತಡೆ ಕೋರಿ ಅಂತ
ಕುಲಪತಿಗಳು ಉತ್ತರಿಸುತ್ತಾರೆ. ಒಟ್ಟಿನಲ್ಲಿ,
ಭವಿಷ್ಯದ ಕನಸು ಹೊತ್ತ ಸಾವಿರಾರು
ವಿದ್ಯಾರ್ಥಿಗಳ ಸಮಯ, ಶ್ರಮ ಎಲ್ಲಾ
ವ್ಯರ್ಥವಾದಂತಿದೆ. ಉದ್ಯೋಗವಂತೂ
ಮರೀಚಿಕೆಯೇ ಆಗಿದೆ. ಆದ್ರೂ ವಿವಿ
ಮಾನ್ಯತೆ ಸಿಕ್ಕೇ ಬಿಡುತ್ತೇ ಅಂತ ಕುಂಟು
ನೆಪ ಹೇಳುತ್ತಲೇ ವಿದ್ಯಾರ್ಥಿಗಳ ಬದುಕಲ್ಲಿ ಚೆಲ್ಲಾಟ
ಆಡಲಾಗುತ್ತಿದೆ.
- ರವಿ ಪಾಂಡವಪುರ, ಸುವರ್ಣನ್ಯೂಸ್, ಮೈಸೂರು

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023