Drop


Monday, August 10, 2015

ಭಾರತೀಯ ಮೂಲದ ಪತ್ರಕರ್ತೆ ಅಡ್ರಿಯಾನ್ ಬಾತ್ರಾಗೆ ‘ಶ್ರೇಷ್ಠ ಪತ್ರಕರ್ತೆ’ ಪ್ರಶಸ್ತಿ

ಟೊರೊಂಟೊ (ಪಿಟಿಐ): ಭಾರತೀಯ
ಮೂಲದ ಪತ್ರಕರ್ತೆ ಅಡ್ರಿಯಾನ್ ಬಾತ್ರಾ 'ಶ್ರೇಷ್ಠ
ಪತ್ರಕರ್ತೆ' ಪ್ರಶಸ್ತಿ ಪಡೆದಿದ್ದಾರೆ. ಇಲ್ಲಿನ
ಭಾರತೀಯ ಸಮುದಾಯದ ಸದಸ್ಯರು
ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ
ಸಲ್ಲಿಸಿದವರನ್ನು ಗುರುತಿಸಿ ಪ್ರತಿ ವರ್ಷ ಪ್ರಶಸ್ತಿ
ನೀಡಿ ಗೌರವಿಸುತ್ತದೆ.
ಪತ್ರಿಕೋದ್ಯಮ ಕ್ಷೇತ್ರಕ್ಕೆ ನೀಡಿದ
ಕೊಡುಗೆಯನ್ನು ಪರಿಗಣಿಸಿ 41ರ
ಹರೆಯದ ಬಾತ್ರಾ ಅವರನ್ನು ಪ್ರಶಸ್ತಿಗೆ ಆಯ್ಕೆ
ಮಾಡಿದೆ. '
ಟೊರೊಂಟೊ ಸನ್' ಪತ್ರಿಕೆಯ
ಸಂಪಾದಕರಾಗಿರುವ ಬಾತ್ರಾ ಕೆನಡಾ ಸೇನೆಯಲ್ಲಿ
ಲೆಫ್ಟಿನೆಂಟ್ ಆಗಿಯೂ ಕೆಲಸ ಮಾಡಿದ್ದರು.