Drop


Friday, August 14, 2015

ಹೊಸ ಚುನಾವಣಾ ಆಯುಕ್ತ ರಾವತ್.

ಹೊಸ ಚುನಾವಣಾ ಆಯುಕ್ತ ರಾವತ್.‌

ನವದೆಹಲಿ (ಪಿಟಿಐ): ಮಧ್ಯಪ್ರದೇಶ ಕೇಡರ್‌ನ ನಿವೃತ್ತ ಐಎಎಸ್‌ ಅಧಿಕಾರಿ ಓಂ ಪ್ರಕಾಶ್‌ ರಾವತ್‌  ಚುನಾವಣಾ ಆಯುಕ್ತರಾಗಿ ಗುರುವಾರ ನೇಮಕಗೊಂಡಿದ್ದಾರೆ.

ಇತ್ತೀಚಿನವರೆಗೂ ಕೇಂದ್ರದಲ್ಲಿ ಕಾರ್ಯದರ್ಶಿಯಾಗಿದ್ದ ರಾವತ್‌ ಅವರ ನೇಮಕ ಬಿಹಾರ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗುವುದಕ್ಕೂ ಮುನ್ನ ಪ್ರಕಟವಾಗಿದೆ.

ಸರ್ಕಾರಿ ಸೇವೆಯಿಂದ ಕಳೆದ ವರ್ಷ ನಿವೃತ್ತರಾಗಿರುವ 1977ನೇ ತಂಡದ ಐಎಎಸ್‌ ಅಧಿಕಾರಿ ರಾವತ್‌ ಇನ್ನೂ ಮೂರು ವರ್ಷಗಳ ಕಾಲ ಚುನಾವಣಾ ಆಯುಕ್ತರಾಗಿ ಅಧಿಕಾರದಲ್ಲಿರುತ್ತಾರೆ.