Drop


Wednesday, August 19, 2015

ಮಾಜಿ ಸಚಿವ ಆರ್.ಎಲ್.ಜಾಲಪ್ಪ ಪ್ರಸಕ್ತ ಸಾಲಿನ ದೇವರಾಜ ಅರಸು ಪ್ರಶಸ್ತಿ:*

ಬೆಂಗಳೂರು, ಆ.18: ಮಾಜಿ ಸಚಿವ
ಆರ್.ಎಲ್.ಜಾಲಪ್ಪ ಪ್ರಸಕ್ತ ಸಾಲಿನ ದೇವರಾಜ ಅರಸು
ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ
ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,
ಆ.20ರಂದು ಮಧ್ಯಾಹ್ನ 3 ಗಂಟೆಗೆ
ಮೈಸೂರಿನ ಮಾನಸ ಗಂಗೋತ್ರಿಯ ಬಯಲು
ರಂಗಮಂದಿರದಲ್ಲಿ ನಡೆಯುವ
ಸಮಾರಂಭದಲ್ಲಿ ಮುಖ್ಯಮಂತ್ರಿ
ಸಿದ್ದರಾಮಯ್ಯ ಪ್ರಶಸ್ತಿಯನ್ನು ಪ್ರದಾನ
ಮಾಡಲಿದ್ದಾರೆ ಎಂದರು.
ಅರಸು ಪ್ರಶಸ್ತಿಯು 2 ಲಕ್ಷ ರೂ.ನಗದು, ಪದಕವನ್ನು
ಒಳಗೊಂಡಿರುತ್ತದೆ.
ವಿಶ್ರಾಂತ ಕುಲಪತಿ
ಪ್ರೊ.ಹೋ.ಅನಂತರಾಮಯ್ಯ
ಅಧ್ಯಕ್ಷತೆಯ 7 ಮಂದಿ ಸದಸ್ಯರನ್ನು
ಒಳಗೊಂಡ ಸಮಿತಿಯು
ಆರ್.ಎಲ್.ಜಾಲಪ್ಪ ಹೆಸರನ್ನು ಪ್ರಶಸ್ತಿಗೆ ಆಯ್ಕೆ
ಮಾಡಿದೆ ಎಂದು ಅವರು ವಿವರಣೆ
ನೀಡಿದರು.
ಸಮಿತಿಯು 22 ಮಂದಿಯ ಹೆಸರುಗಳುಳ್ಳ
ಪಟ್ಟಿಯನ್ನು
ಮುಂದಿಟ್ಟುಕೊಂಡು
ಕೂಲಂಕಷವಾಗಿ ಪರಿಶೀಲಿಸಿ, ಚರ್ಚೆ
ನಡೆಸಿ ಅಂತಿಮವಾಗಿ ಜಾಲಪ್ಪರ ಹೆಸರನ್ನು
ಸರಕಾರಕ್ಕೆ ಶಿಫಾರಸ್ಸು ಮಾಡಿತು. ಜಾಲಪ್ಪ ಅರಸು ಅವರ
ನೈಜ ಅನುಯಾಯಿ ಹಾಗೂ ಅವರು ಮಾಡಿರುವ ಸಮಾಜ
ಸೇವೆಯನ್ನು ಗುರುತಿಸಿ ಸರಕಾರ ಅವರ ಹೆಸರನ್ನು
ಆಯ್ಕೆ ಮಾಡಿತು. ಪ್ರಶಸ್ತಿಯ ಆಯ್ಕೆ
ಪ್ರಕ್ರಿಯೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ
ಎಂದು ಆಂಜನೇಯ ತಿಳಿಸಿದರು.
ಆರ್.ಎಲ್.ಜಾಲಪ್ಪ ಒಡೆತನದಲ್ಲಿರುವ ವೃತಿ ಶಿಕ್ಷಣ
ಸಂಸ್ಥೆಗಳಲ್ಲಿ ಎಷ್ಟು ಮಂದಿ
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ
ಪ್ರವೇಶಾವಕಾಶವನ್ನು ಕಲ್ಪಿಸಲಾಗಿದೆ ಎಂಬ
ಪ್ರಶ್ನೆಗೆ ನೇರವಾಗಿ ಉತ್ತರಿಸದ ಅವರು, ಈ ವರ್ಷ
ಜಾಲಪ್ಪ ಹೆಸರನ್ನು ಸರಕಾರ
ಒಪ್ಪಿಕೊಂಡಿದೆ. ಮುಂದಿನ
ವರ್ಷದಿಂದ ಸಾರ್ವಜನಿಕ ಅಭಿಪ್ರಾಯ ಪಡೆದು
ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು ಎಂದರು.
ಡಿ.ದೇವರಾಜ ಅರಸು ಜನ್ಮ ಶತಮಾನೋತ್ಸವದ
ಅಂಗವಾಗಿ ಆ.20ರಂದು ಬೆಳಗ್ಗೆ
9ಗಂಟೆಗೆ ವಿಧಾನಸೌಧದ ಆವರಣದಲ್ಲಿರುವ
ದೇವರಾಜ ಅರಸು ಅವರ ಪ್ರತಿಮೆಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ
ಸೇರಿದಂತೆ ಹಲವು ಗಣ್ಯರು ಮಾಲಾರ್ಪಣೆ
ಮಾಡಲಿದ್ದಾರೆ. ಅದೇ ದಿನ ಬೆಳಗ್ಗೆ 11:15
ಗಂಟೆಗೆ ಮೈಸೂರು ಜಿಲ್ಲೆ ಹುಣಸೂರು
ಪಟ್ಟಣದಲ್ಲಿ ಡಿ.ದೇವರಾಜ ಅರಸು ಅವರ ಪ್ರತಿಮೆಗೆ
ಮಾಲಾರ್ಪಣೆ ಹಾಗೂ ದೇವರಾಜು ಅರಸು ಭವನ ನಿರ್ಮಾಣಕ್ಕೆ
ಮುಖ್ಯಮಂತ್ರಿ ಶಂಕುಸ್ಥಾಪನೆ
ನೆರವೇರಿಸಲಿದ್ದಾರೆ ಎಂದು ಅವರು ಹೇಳಿದರು.