Drop


Tuesday, August 11, 2015

ಬೀಬಿಕಾ ಮಕ್ಬಾರ- ಇದು ಇನ್ನೊಂದು ತಾಜ್ಮಹಲ್ ಷಹಜಹಾನನ ಮೊಮ್ಮಗ ಆಲಂಷಾ ತನ್ನ ತಾಯಿಯ ಪ್ರೀತಿಗಾಗಿ ನಿರ್ಮಿಸಿದ.

n

ಬೀಬಿಕಾ ಮಕ್ಬಾರ- ಇದು
ಇನ್ನೊಂದು ತಾಜ್ಮಹಲ್:
ಮೋಹದ ಮಡದಿಯ ಮೇಲಿನ ಮಮತೆಗೆ ಸಾಕಾರವಾದ
ಪ್ರೇಮದ ಶ್ರೀಮಂತ ಸಾಕ್ಷಿ
ತಾಜ್ಮಹಲ್. ಈ ವಿಶ್ವವೇ ನಿಬ್ಬೆರಗಾಗುವಂಥ
ಸ್ಮಾರಕ. ಮೊಘಲ್
ದೊರೆ ಷಹಜಹಾನ್ ತನ್ನ ಪತ್ನಿ
ಮುಮ್ತಾಜ್ಳ ಮೇಲಿಟ್ಟಿದ್ದ ಅನಂತ
ಪ್ರೀತಿಯ ದ್ಯೋತಕ ತಾಜ್ಮಹಲ್.
ತಾಜ್ಮಹಲ್ ಎಂದೊಡನೆ ಕಣ್ಣ
ಮುಂದೆ ಬರುವುದು ಆ ಅಮರ ಪ್ರೇಮದ ಚಿತ್ರ.
ಹಾಗೆಯೇ ಮೊಘಲ್ ಸಾಮ್ರಾಜ್ಯದ
ಸಿರಿವಂತಿಕೆಯ ಸಾಕ್ಷಿ. ಈ ವಿಶ್ವದಲ್ಲಿ
ತಾಜ್ಮಹಲ್ ಎಂದರೆ
ಅದೊಂದೇ...
ಅಲ್ಲ, ನಿಮಗೆ ಗೊತ್ತಿರಲಿಕ್ಕಿಲ್ಲ.
ಉತ್ತರ ಭಾರತದಲ್ಲಿ ಆ ತಾಜ್ಮಹಲ್ ಇದ್ದರೆ,
ಮಹಾರಾಷ್ಟ್ರದಲ್ಲಿ
ಇನ್ನೊಂದು ತಾಜ್ಮಹಲ್ ಇದೆ.
ಸಾಕ್ಷಾತ್ ಆಗ್ರಾದ ಆ ತಾಜ್ಮಹಲ್ನ ಪ್ರತಿರೂಪವೇ ಇದು.
ಇದರ ನಿರ್ಮಾತೃ ಯಾರು ಗೊತ್ತೇ...
ಷಹಜಹಾನ್ನ ಮೊಮ್ಮಗ
ಅಲಂಷಾ. 1651-61ರ ಮಧ್ಯೆ ಈ
ಅಲಂಷಾ ತನ್ನ ತಾಯಿಯ ಪ್ರೀತಿಗಾಗಿ
ಈ ಎರಡನೇ ತಾಜ್ಮಹಲ್ ನಿರ್ಮಿಸುತ್ತಾನೆ. ಇದರ ಹೆಸರು
ಬೀಬಿಕಾ ಮಕ್ಬಾರ (ಟೋಂಬ್ ಆಫ್ ದ
ಲೇಡಿ).ತನ್ನ ಅಜ್ಜ ಕಟ್ಟಿಸಿದ್ದ ಆಗ್ರಾದ ತಾಜ್ಮಹಲ್
ನೋಡಿ ಅದರಂತೆಯೇ ನಿರ್ಮಿಸಿದ್ದಾನೆ
ಅಲಂಷಾ. ಷಹಜಹಾನ್ ಹೆಂಡತಿಗಾಗಿ
ಅದನ್ನು ಕಟ್ಟಿಸಿದರೆ, ಅಲಂಷಾ ತನ್ನ
ಪ್ರೀತಿಯ ತಾಯಿಗಾಗಿ ಬೀಬಿಕ್
ಮಕ್ಬಾರ್ ಕಟ್ಟಿಸುತ್ತಾನೆ. ಮಹಾರಾಷ್ಟ್ರದ
ಔರಂಗಾಬಾದ್ನಲ್ಲಿ ನಿರ್ಮಾಣವಾದ ಈ
ತಾಜ್ಮಹಲ್ನಲ್ಲಿ ಶ್ರೀಮಂತಿಕೆಯ
ಪ್ರದರ್ಶನ ಇಲ್ಲ. ಬಡತನವಿದ್ದರೂ
ಪ್ರೀತಿ ಮತ್ತು ಶ್ರಮಗಳ
ಸಾಕ್ಷಾತ್ಕಾರವಾಗಿದೆ. ಏಕೆಂದರೆ ಅಲಂಷಾ
ತನ್ನ ಅಜ್ಜನಂತೆ ಚಕ್ರವರ್ತಿಯಾಗಿರಲಿಲ್ಲ.
ಕೇವಲ ಒಬ್ಬ ಸಾಮಾನ್ಯ ಸಾಮಂತನಾಗಿದ್ದ.
ಅವನ ಐಶ್ವರ್ಯಕ್ಕೆ ಮಿತಿಯಿತ್ತು. ದಾಖಲೆಗಳ
ಪ್ರಕಾರ ಷಹಜಹಾನ್ ತನ್ನ ಹೆಂಡತಿಗಾಗಿ
ಅಂದು 32 ದಶಲಕ್ಷ ರೂ. ವ್ಯಯಿಸಿದ್ದರೆ,
ಮೊಮ್ಮಗ ಅಲಂ ತನ್ನ
ತಾಯಿಗಾಗಿ ಕೇವಲ 7 ಲಕ್ಷ ರೂ.ಗಳಲ್ಲಿ ಈ ಉಪ
ತಾಜ್ಮಹಲ್ ನಿರ್ಮಿಸಿದ್ದಾನೆ. ಇಬ್ಬರನ್ನೂ ತುಲನೆ
ಮಾಡಿ ನೋಡುವುದಾದರೆ ಮೊಮ್ಮಗನ
ಶ್ರಮವೇ ಮೇಲುಗೈ ಪಡೆಯುತ್ತದೆ.
ಅಲಂ ತಾಯಿಯ ಭವ್ಯವಾದ ಈ ಸಮಾಧಿ
458x275 ಮೀ ಸ್ಥಳದಲ್ಲಿದ್ದು,
ಕೊಳಗಳು, ಕಾರಂಜಿಗಳು,
ನೀರಿನ ಕಾಲುವೆಗಳು, ವಿಶಾಲ ಕಾಲುದಾರಿಗಳು
ಎಲ್ಲ ಇವೆ. ಅದರ ಗೋಡೆಗಳನ್ನು
ಹೊಂದಿಕೊ
ಂಡು ಉದ್ಯಾನಗಳನ್ನು ನಿರ್ಮಿಸಲಾಗಿದೆ. ಮೂರು
ದಿಕ್ಕಿನಲ್ಲಿರುವ ಮೆಟ್ಟಿಲುಗಳು, ಮಕ್ಬಾರಾದ ಮೇಲಿನ
ಮುಖ್ಯವಾದ ಈರುಳ್ಳಿ ಆಕಾರದ ಗುಮ್ಮಟ
ಇವುಗಳನ್ನೆಲ್ಲ ನೋಡುತ್ತಿದ್ದರೆ ತಾಜ್ಮಹಲ್ನದೇ
ಪಡಿಯಚ್ಚು ಎಂಬುದು ಅರ್ಥವಾಗುತ್ತದೆ. ಅಲ್ಲಿ
ಪ್ರಶಸ್ತವಾದ ದುಬಾರಿಯ ಬಿಳಿ ಅಮೃತ ಶಿಲೆಗಳನ್ನು
ಬಳಸಿದ್ದರೆ ಇಲ್ಲಿ ಕೇವಲ ಸಾಮಾನ್ಯ ಕಲ್ಲುಗಳನ್ನು
ಬಳಸಲಾಗಿದೆ. ಗೋಡೆಗಳಿಗೆ ಒಂದು ನಿರ್ದಿಷ್ಟ
ಮಟ್ಟದವರೆಗೆ ಮಾತ್ರ ಮಾರ್ಬಲ್ ಬಳಸಲಾಗಿದೆ
ಅಷ್ಟೆ.ಸಾಮಾನ್ಯವಾಗಿ ಬೀಬಿಕಾ ಮಕ್ಬಾರ್
ಅಂದರೆ ಬಡ ಮನುಷ್ಯನ ತಾಜ್ಮಹಲ್
ಎಂದೇ ಕರೆಯಲಾಗಿದೆ.ಅಲಂ ಷಾ ಸ್ವತಃ
ಔರಂಗಜೇಬನ ಮಗ. ಇತಿಹಾಸ ಹೇಳುವಂತೆ
ಔರಂಗಜೇಬನಿಗೆ ರಾಜ್ಯ ವಿಸ್ತರಣೆ, ಧಾರ್ಮಿಕ
ವ್ಯವಸ್ಥೆ ಬಗ್ಗೆ ಇದ್ದಷ್ಟು ಕಾಳಜಿ ಕಲೆ,
ವಾಸ್ತುಶಿಲ್ಪ ಕಟ್ಟಡ ನಿರ್ಮಾಣಗಳ ಬಗ್ಗೆ
ಇರಲಿಲ್ಲ. ಇರಲೇ ಇಲ್ಲ ಎಂದರೂ ತಪ್ಪಿಲ್ಲ.
ತಾಜ್ಮಹಲ್ನಂತೆ ಭವ್ಯವಾದ ಈ ಸಮಾಧಿ
ನಿರ್ಮಿಸುವುದನ್ನು ವಿರೋಧಿಸಿದ್ದ ಔರಂಗಜೇಬ್
ಮಾರ್ಬಲ್ ಸಾಗಾಟಕ್ಕೆ ನಿಷೇಧ ಹೇರಿದ್ದನಂತೆ !
ಹಾಗಾಗಿ ರಾಜಸ್ಥಾನ ಮತ್ತಿತರೆ ಕಡೆಗಳಿಂದ
ಬೆಲೆಬಾಳುವ ಮಾರ್ಬಲ್ ತರಲು ಸಾಧ್ಯವಾಗಲೇ ಇಲ್ಲ.
ಆದರೆ ತನ್ನ ತಾಯಿಗೊಂದು
ಭವ್ಯ ಸ್ಮಾರಕ ಕಟ್ಟಬೇಕೆಂಬುದು
ಅಲಂಷಾ ನಿರ್ಧಾರವಾಗಿತ್ತು. ಹಾಗಾಗಿ ಅವರಪ್ಪನ
ಪ್ರತಿರೋಧದ ನಡುವೆಯೂ ಸ್ಮಾರಕ ನಿರ್ಮಿಸುವಲ್ಲಿ
ಅಲಂ ಮೇಲುಗೈ ಸಾಧಿಸಿದ್ದ.ಕಾಲ ಚಕ್ರ
ಉರುಳುತ್ತದೆ ಔರಂಗಜೇಬ್, ಆಲಂಷಾ
ಎಲ್ಲರೂ ಇತಿಹಾಸ ಸೇರುತ್ತಾರೆ. ಮುಂದೆ
1803ರಲ್ಲಿ ಹೈದ್ರಾಬಾದ್ನ ನಿಜಾಂ
ಸಿಕಂದರ್ ಜಹಾನ್ ಮಹಾರಾಷ್ಟ್ರ, ಮರಾಠವಾಡಾ,
ಔರಂಗಾಬಾದ್ಗಳನ್ನು ಗೆದ್ದು ತನ್ನ ರಾಜ್ಯಕ್ಕೆ
ಸೇರಿಸಿಕೊಳ್ಳುತ್ತಾನೆ. ಅಲ್ಲಿಗೇ
ಸುಮ್ಮನಾಗದ ಸಿಕಂದರ್ ಜಹಾನ್ ಈ ಅಪರೂಪದ
ಮಕ್ಬಾರ ಸ್ಮಾರಕವನ್ನು ತನ್ನ ರಾಜಧಾನಿ
ಹೈದ್ರಾಬಾದ್ಗೆ ಸ್ಥಳಾಂತರಿಸುವ ಸಾಹಸಕ್ಕೂ ಕೈ
ಹಾಕುತ್ತಾನೆ. ಇಡೀ ಕಟ್ಟಡವನ್ನು
ಒಂದೊಂದೇ ಭಾಗವಾಗಿ,
ಜಖಂ ಆಗದಂತೆ ಕೀಳಿಸಲು
ಮುಂದಾಗುತ್ತಾನೆ. ಆದೇಶವನ್ನೂ
ಹೊರಡಿಸುತ್ತಾನೆ.ಆದರೆ ಅದೃಷ್ಟವಶಾತ್
ಅದೇಕೋ ಆ ದುಸ್ಸಾಹಸವನ್ನು ಅಲ್ಲಿಗೇ ನಿಲ್ಲಿಸುತ್ತಾನೆ. ತಾನು
ಮಾಡಲೆತ್ನಿಸಿದ್ದ ಘೋರ ತಪ್ಪಿಗೆ ಪ್ರಾಯಶ್ಚಿತ್ತ
ರೂಪದಲ್ಲಿ ಈ ಮಕ್ಬಾರಾ ಪಕ್ಕದಲ್ಲೇ ಒಂದು
ಪ್ರಾರ್ಥನಾ ಮಂದಿರ (ಮಸೀದಿ)
ಕಟ್ಟಿಸುತ್ತಾನೆ. ಮಕ್ಬಾರಾ (ಸಮಾಧಿಯ) ಪಶ್ಚಿಮ
ದಿಕ್ಕಿನಲ್ಲಿ ಈಗಲೂ ನಾವು ಈ ಮಸೀದಿ
ಕಾಣುತ್ತೇವೆ.ಇದು ಎರಡು ತಾಜ್ಮಹಲ್ಗಳ ಕಥೆ.
ಇನ್ನೊಮ್ಮೆ ಹೇಳುತ್ತೇನೆ. ಈ
ದೇಶದಲ್ಲಿರುವುದು ಏಕಮಾತ್ರ ತಾಜ್ಮಹಲ್ ಅಲ್ಲ.
ಎರಡು ತಾಜ್ಗಳಿವೆ. ಒಂದು ಮೋಹದ ಮಡದಿಗಾದರೆ
ಇನ್ನೊಂದು ಅಕ್ಕರೆಯ
ತಾಯಿಗಾಗಿ, ಒಂದರ ನಿರ್ಮಾತೃ ಅಜ್ಜನಾದರೆ,
ಇನ್ನೊಂದರ ನಿರ್ಮಾತೃ
ಮೊಮ್ಮಗ.ಇಷ್ಟಾದರೂ ಇದುವರೆಗೆ
ಈ ಅಲಂಷಾ ತಾಜ್ ಅಜ್ಞಾತವಾಗಿಯೇ
ಉಳಿದಿರುವುದು ಅಚ್ಚರಿ ಹುಟ್ಟಿಸುತ್ತದೆ.