Drop


Saturday, August 8, 2015

ವಿಜ್ಞಾನಿ ರಾಘವೇಂದ್ರ ಗದಗ್ಕರ್ ಅವರಿಗೆ ಜರ್ಮನಿಯ ಅತ್ಯುನ್ನತ ನಾಗರಿಕ ಪ್ರಶಸ್ತಿ 'ದಿ ಕ್ರಾಸ್ ಆಫ್ ಆರ್ಡರ್ ಆಫ್ ಮೆರಿಟ್''

ಬೆಂಗಳೂರು: ಭಾರತದ ಸಮಾಜ
ಜೀವ ವಿಜ್ಞಾನಿ ರಾಘವೇಂದ್ರ
ಗದಗ್ಕರ್ ಅವರು ಜರ್ಮನಿಯ ಅತ್ಯುನ್ನತ
ನಾಗರಿಕ ಪ್ರಶಸ್ತಿ 'ದಿ ಕ್ರಾಸ್ ಆಫ್ ಆರ್ಡರ್ ಆಫ್
ಮೆರಿಟ್'ಗೆ ಭಾಜನಾಗಿದ್ದಾರೆ.
ಬೆಂಗಳೂರು ನಿವಾಸಿ,ಸೆಂಟರ್ ಫಾರ್
ಇಕೊಲಾಜಿಕಲ್ ಸೈನ್ಸಸ್, ಇಂಡಿಯನ್
ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ
ಪ್ರೊಫೆಸರ್ ಆಗಿರುವ ಗದಕ್ಕರ್ ಅವರಿಗೆ
ಬೆಂಗಳೂರಿನಲ್ಲಿರುವ ಜರ್ಮನ್
ಕಾನ್ಸುಲೇಟ್ನಲ್ಲಿ ಪ್ರಶಸ್ತಿ ಪ್ರದಾನ
ಮಾಡಲಾಯಿತು.
ವರ್ತನಾ ಪರಿಸರ ಮತ್ತು ಸಾಮಾಜಿಕ
ಜೀವಶಾಸ್ತ್ರಕ್ಕೆ ನೀಡಿರುವ
ಕೊಡುಗೆ ಹಾಗೂ ಭಾರತ-ಜರ್ಮನಿ
ಮಧ್ಯೆ ಸಂಶೋಧನಾ
ಸಹಕಾರವನ್ನು ಬಲಪಡಿಸಿರುವುದನ್ನು
ಪರಿಗಣಿಸಿ ಅವರಿಗೆ ಈ ಪುರಸ್ಕಾರ ಲಭಿಸಿದೆ.
ಕೀಟ ಸಮಾಜವಿಜ್ಞಾನದಲ್ಲೂ
ತಜ್ಞರಾಗಿರುವ ಗದಗ್ಕರ್ ಅವರು
ನ್ಯಾಷನಲ್ ಸೈನ್ಸ್ ಅಕಾಡೆಮಿ
ಅಧ್ಯಕ್ಷರು. ಇವರ 'ಸರ್ವೈವಲ್
ಸ್ಟ್ರಾಟಜಿಸ್' ಪುಸ್ತಕ ಚೀನಿ ಮತ್ತು
ಕೊರಿಯನ್ ಭಾಷೆಗಳಿಗೆ
ಅನುವಾದಗೊಂಡಿದೆ.
ಹೆಮ್ಮೆಯ ಕ್ಷಣ: ಇದೊಂದು
ದೊಡ್ಡ ಹೆಮ್ಮೆಯ ಕ್ಷಣ ಎಂದು
ಗದಕ್ಕರ್ ಹೇಳಿದ್ದಾರೆ. 'ಸಂಶೋಧನೆ
ಸಂದರ್ಭದಲ್ಲಿ ಕೀಟಗಳು ನನ್ನ
ಆಸಕ್ತಿಯಾಗಿದ್ದವು, ಆದರೆ ಕೀಟಗಳ
ಮೇಲಿನ ಅಧ್ಯಯನವು
ವೃತ್ತಿಯಾಯಿತು. ಹೊಸ
ಪ್ರವೃತ್ತಿಯಾಗಿ ವಿಜ್ಞಾನ ಮತ್ತು
ಮಾನವಿಕ ಶಾಸ್ತ್ರವನ್ನು ಜತೆಯಾಗಿ
ಅಧ್ಯಯನ ನಡೆಸಿದೆ. ವಿಜ್ಞಾನ ಮತ್ತು
ಮಾನವಿಕ ಶಾಸ್ತ್ರ ಪ್ರತ್ಯೇಕವಾಗಿ
ಕಾರ್ಯನಿರ್ವಹಿಸಲಾಗದು. ಇವೆರಡು
ಜರ್ಮನಿ ಜತೆ ನನ್ನ ಸಂಬಂಧ
ಬಲಪಡಿಸಿದೆ,'ಎಂದು ಹೇಳಿದರು.