Drop


Friday, August 7, 2015

ಚಂದ್ರನ ಬೆನ್ನು ತೋರಿಸಿದ ನಾಸಾ


Aug 7, 2015, 04.16AM IST
ಲೇಖನ
ಅನಿಸಿಕೆಗಳು
ಕಾಣದ ದಿಕ್ಕಿಗೆ ಕಣ್ಣಿಟ್ಟ ನಾಸಾ ಉಪಗ್ರಹ
ವಾಷಿಂಗ್ಟನ್: ಚಂದ್ರನನ್ನು ನೋಡದವರು
ಬಹುಷಃ ಯಾರೂ ಇರಲಾರರು. ಆದರೆ, ಎಷ್ಟೇ ಬಾರಿ
ನೋಡಿದರೂ ಚಂದ್ರ ಒಂದೇ ರೀತಿ
ಕಾಣುತ್ತಾನಲ್ಲಾ ಎಂದು ಬಹುತೇಕರಿಗೆ
ಅನಿಸಿರಲೂಬಹುದು.
ಹಾಗನ್ನಿಸಿದ್ದರೆ ಅದು ನಿಜ ! ಯಾಕೆಂದರೆ
ನಮಗೆ ಈವರೆಗೂ ಕಾಣದ ಚಂದ್ರನ
ಮತ್ತೊಂದು ಮುಖ
ಇದೀಗ ಬಯಲಾಗಿದೆ.
ನಾಸಾದ 'ಡೀಪ್ ಸ್ಪೇಸ್ ಕ್ಲೈಮೇಟ್
ಅಬ್ಸರ್ವೇಟರಿ' ಉಪಗ್ರದಲ್ಲಿರುವ ಕ್ಯಾಮೆರಾ
ಚಂದ್ರನ ಕಾಣದ ದಿಕ್ಕನ್ನು ಅನಾವರಣ ಮಾಡಿದೆ.
ಸೂರ್ಯನ ಬೆಳಕಿಗೆ ಬೆಳಗುವ ಭೂಮಿಯ ದಿಕ್ಕಿಗೆದುರಾಗಿ
ಚಂದ್ರ ಹಾದು ಹೋದಾಗ ಈ ಕ್ಯಾಮೆರಾ
ಚಂದ್ರನ ಆ ಕಾಣದ ಮುಖವನ್ನು ಸರಣಿ
ಚಿತ್ರಗಳಲ್ಲಿ ಅದ್ಭುತವಾಗಿ ಸೆರೆ ಹಿಡಿದಿದೆ.
''ಭೂಮಿಯಿಂದ ಈವರೆಗೆ ಕಾಣದ
ಚಂದ್ರನ ಮತ್ತೊಂದು
ದಿಕ್ಕು ಬೆಳಗುತ್ತಿರುವುದನ್ನು ಉಪಗ್ರಹ ತೆಗೆದಿರುವ
ಸರಣಿ ಚಿತ್ರಗಳು ತೋರಿಸುತ್ತವೆ,'' ಎಂದು ನಾಸಾ
ಹೇಳಿದೆ.
ನಮಗೆ ಈವರೆಗೂ ಕಂಡಿರುವುದು ಚಂದ್ರನ
ಒಂದು ದಿಕ್ಕು ಮಾತ್ರ. ಯಾಕೆಂದರೆ, ಅದರ
ಮತ್ತೊಂದು ದಿಕ್ಕು
ಭೂಮಿಯಿಂದ ಕಾಣುವುದಿಲ್ಲ. ಚಂದ್ರ
ತನ್ನ ಕಕ್ಷೆ ಮತ್ತು ಅಕ್ಷ ದ ಸುತ್ತ ತಿರುಗುವ ಸಮಯ
ಒಂದೇ ಆಗಿರುವುದೇ ಇದಕ್ಕೆ ಕಾರಣ.
ಈ ಚಿತ್ರಗಳನ್ನು ಜುಲೈ 16ರ ಮಧ್ಯಾಹ್ನ
3.50ರಿಂದ 8.45ರ ಅವಧಿಯಲ್ಲಿ
ಭೂಮಿಯಿಂದ 1.6 ಲಕ್ಷ ಕಿಲೋ
ಮೀಟರ್ ದೂರದಿಂದ ತೆಗೆಯಲಾಗಿದೆ
ಎಂದು ನಾಸಾ ಹೇಳಿದೆ.
ಸ್ಯಾಟಲೈಟ್ನ ಒಳಗಿರುವ ಈ ಕ್ಯಾಮೆರಾ
ವರ್ಷಕ್ಕೆರಡು ಬಾರಿ ಭೂಮಿ ಮತ್ತು ಚಂದ್ರನ
ಚಿತ್ರಗಳನ್ನು ನಿರ್ದಿಷ್ಟ ಸಂದರ್ಭದಲ್ಲಿ
ತೆಗೆಯುತ್ತದೆ.