Drop


Sunday, August 9, 2015

ಕಾಸರಗೋಡಿನ ಕನ್ನಡದ ಗಟ್ಟಿದನಿ ಕಯ್ಯಾರ ಕಿಞ್ಞಣ್ಣ ರೈ ಅಸ್ತಂಗತ


Posted by: Mahesh
| Sun, Aug 9, 2015, 16:33 [IST]
ಕಾಸರಗೋಡು, ಆಗಸ್ಟ್ 09: ಸ್ವಾತಂತ್ರ್ಯ
ಹೋರಾಟಗಾರ, ಕವಿ, ಕಾಸರಗೋಡು
ವಿಲೀನೀಕರಣ
ಕ್ರಿಯಾಸಮಿತಿಯ ಪ್ರಧಾನ ಸಂಚಾಲಕ ಗಡಿ
ನಾಡಲ್ಲಿ ಕನ್ನಡದ ಗಟ್ಟಿದನಿಯಾಗಿದ್ದ 101
ವರ್ಷದ ಹಿರಿಯ ಚೇತನ ಕಯ್ಯಾರ ಕಿಞ್ಞಣ್ಣ ರೈ
ಅವರು ಭಾನುವಾರ ಬದಿಯಡ್ಕದ ತಮ್ಮ್
ಮನೆಯಲ್ಲಿ ಕೊನೆಯುಸಿರೆಳೆದರು.
ಕಯ್ಯಾರ ಕಿಞ್ಞಣ್ಣ ರೈ ಅಖಿಲ ಮಹಾಕವಿ, ಸಾಹಿತಿ,
ಬಹುಭಾಷಾ ವಿದ್ವಾಂಸ, ಸ್ವಾತಂತ್ರ್ಯ
ಹೋರಾಟಗಾರ, ಕರ್ನಾಟಕ ಏಕೀಕರಣ
ಚಳುವಳಿಯ ನಾಯಕ, ಕಾಸರಗೋಡು
ವಿಲೀನೀಕರಣ
ಕ್ರಿಯಾಸಮಿತಿಯ ಪ್ರಧಾನ ಸಂಚಾಲಕರಾಗಿ
ಸದಾಕಾಲ ಸ್ಮರಣೀಯರು.