Dark side of the moon captured by Nasa satellite a million miles from Earth.( ಚಂದ್ರನ ‘ಕಪ್ಪು ಭಾಗ'ದ ಅಪರೂಪ ಚಿತ್ರವನ್ನು ನಾಸಾಸ ಡಿಸ್ಕವರ್ ಸೆರೆಹಿಡಿದು ಸಾರ್ವಜನಿಕ ವೀಕ್ಷಣೆಗೆ ನೀಡಿದೆ.)

ವಾಷಿಂಗ್‌ಟನ್ ಆಗಸ್ಟ್. 08:
ಚಂದಾಮಾಮನನ್ನು ಮಕ್ಕಳಿಗೆ ತೋರಿಸಿ ಊಟ
ಮಾಡಿಸುವ ಕಾಲವೊಂದಿತ್ತು.
ಹೊಳೆಯುವ ಮೈ ಕಾಂತಿ
ಇರುವವರನ್ನು ಹುಣ್ಣಿಮೆ ಚಂದ್ರ ಎಂದು
ಕವಿಗಳು ಕರೆದಿದ್ದರು. ಆದರೆ ನಾಸಾ(ನ್ಯಾಶನಲ್
ಏರೋನಾಟಿಕ್ಸ್ ಆಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶನ್
ಅಮೆರಿಕ) ಹೇಳುವುದೇ ಬೇರೆ. ಭೂಮಿಗಿಂತ
ಚಂದ್ರ ಕಪ್ಪಗಿದ್ದಾನಂತೆ!
ಭೂಮಿಯಿಂದ ನೋಡಲು ಸಾಧ್ಯವಾಗದ
ಚಂದ್ರನ ಮತ್ತೊಂದು
ಮುಖದ ದರ್ಶನವನ್ನು ನಾಸಾ ಮಾಡಿಸಿದೆ.
ಚಂದ್ರನ 'ಕಪ್ಪು ಭಾಗ'ದ ಅಪರೂಪ ಚಿತ್ರವನ್ನು
ನಾಸಾಸ ಡಿಸ್ಕವರ್ ಸೆರೆಹಿಡಿದು ಸಾರ್ವಜನಿಕ
ವೀಕ್ಷಣೆಗೆ ನೀಡಿದೆ.
ಭೂಮಿಯ ಒಂದು ಮೇಲ್ಮೈ ಮೇಲೆ ಸೂರ್ಯನ
ಬೆಳಕು ಬೀಳುವಾಗ ಅದರ
ಮುಂಭಾಗದಲ್ಲಿ ಚಂದ್ರ ಹಾದುಹೋಗುವ
ಘಳಿಗೆಯನ್ನು ನಾಸಾ ಕಳೆದ ತಿಂಗಳೆ ಸೆರೆಹಿಡಿತ್ತು.
ಇದೀದಗ ತನ್ನ ವೆಬ್ ತಾಣ ಮತ್ತು ಸಾಮಾಜಿಕ
ತಾಣಗಳ ಖಾತೆಯಲ್ಲೂ ಫೋಟೋಗಳನ್ನು ಬಿಡುಗಡೆ ಮಾಡಿದೆ.
ಭೂಮಿಯಿಂದ ಸುಮಾರು ನೂರು ಕೋಟಿ ಮೈಲಿಗೂ ಅಧಿಕ
ದೂರದಲ್ಲಿ ನಿಂತು ಚಿತ್ರ ಕ್ಲಿಕ್ಕಿಸಿದೆ. ನಾಸಾದ
ಡಿಸ್ಕವರ್ ಉಪಗ್ರಹವು ಭೂ
ಬಹುವರ್ಣೀಯ ಛಾಯಾಚಿತ್ರ ಕ್ಯಾಮೆರಾ
(ಎಪಿಕ್), ನಾಲ್ಕು ಮೆಗಾ ಪಿಕ್ಸೆಲ್ ಸಿಸಿಡಿ ಕ್ಯಾಮೆರಾ
ಮತ್ತು ಟೆಲಿಸ್ಕೋಪ್ ನೆರವಿನಿಂದ ಈ ಚಿತ್ರಗಳನ್ನು
ಸೆರೆಹಿಡಿದಿದೆ.
ಒಮ್ಮೆ ನೀವು ಭೂಮಿಯ ಮೇಲೆ
ಚಂದ್ರ ಹಾದು ಹೋಗುವುದನ್ನು
ನೋಡಿಕೊಂಡು ಬನ್ನಿ....

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023