DVDಯಲ್ಲಿ-7ನೇ ವರ್ಗದ ಭೂಗೋಳ-ಅಧ್ಯಯನ created by S VISHWANATH(Rtrd.J D, Edn Dprtmnt 99457 99886)

ಡಿ.ವಿ.ಡಿಯಲ್ಲಿ ಭೂಗೋಳ ಅಧ್ಯಯನ
ಪ್ರಪಂಚದ
ಒಂದೊಂದು ಭೌಗೋಳಿಕ
ಪ್ರದೇಶದ ಇತಿಹಾಸವು ಕುತೂಹಲ ಹಾಗೂ
ವಿಸ್ಮಯಕಾರಿಯಾಗಿರುತ್ತದೆ.
ವಿದ್ಯಾರ್ಥಿಗಳಿಗಂತೂ ಈ ಬಗ್ಗೆ ಮಾಹಿತಿ
ಇರಲೇಬೇಕು. ಪ್ರಾಥಮಿಕ ಶಾಲೆ ಹಂತದಲ್ಲೇ
ಮಕ್ಕಳು ಭೂಗೋಳ ವಿಷಯಗಳ ಕುರಿತು ಸಂಕ್ಷಿಪ್ತ
ಮಾಹಿತಿ ಪಡೆಯಲಿದ್ದಾರೆ.
7ನೇ ತರಗತಿ ವಿದ್ಯಾರ್ಥಿಗಳು ಭೂಗೋಳ
ಅಧ್ಯಯನದಲ್ಲಿ ಉತ್ತರ ಅಮೆರಿಕ, ದಕ್ಷಿಣ
ಅಮೆರಿಕ, ಆಸ್ಟ್ರೇಲಿಯಾ, ಅಂಟಾರ್ಟಿಕಾ
ಖಂಡಗಳ ಪಠ್ಯವಿಷಯ ಅಧ್ಯಯನ
ಮಾಡಲಿದ್ದಾರೆ. ಈ ಪಠ್ಯವನ್ನು ಓದಿ
ತಿಳಿದುಕೊಳ್ಳುವುದಕ್ಕಿಂತ ಚಿತ್ರ,
ಆಡಿಯೊ ಹಾಗೂ
ವಿಡಿಯೊ ದೃಶ್ಯಗಳ ಮೂಲಕ ನೋಡಿ,
ಕೇಳಿ ಅಭ್ಯಾಸ ಮಾಡಿದರೆ ಬಹುಬೇಗ ಗ್ರಹಿಸುತ್ತಾರೆ. ಈ
ಕಲ್ಪನೆಯನ್ನು ಇಟ್ಟುಕೊಂಡು
ಶಿಕ್ಷಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ
ಸೇವೆ ಸಲ್ಲಿಸಿದ್ದ ಎಸ್.ವಿಶ್ವನಾಥ್ ಎಂಬುವವರು
ಮಕ್ಕಳಿಗೆ ಅನುಕೂಲವಾಗುವಂಥ
'ಹೊಸದೃಷ್ಟಿ–ಭೂಗೋಳ ಅಧ್ಯಯನ'
ಎಂಬ ಡಿ.ವಿ.ಡಿ
ಹೊರತಂದಿದ್ದಾರೆ.
ಏಳನೇ ತರಗತಿ ಪಠ್ಯವಿಷಯನ್ನೇ ಆಧರಿಸಿ
ಡಿ.ವಿ.ಡಿ. ಮಾಡಿದ್ದಾರೆ ವಿಶ್ವನಾಥ್. ಇದು ಎರಡು
ಭಾಗಗಳನ್ನು ಒಳಗೊಂಡಿದ್ದು,
ಐದು ಗಂಟೆ ಅವಧಿಯದ್ದಾಗಿದೆ. ಭಾಗ–1ರಲ್ಲಿ
ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಹಾಗೂ ಭಾಗ–
2ರಲ್ಲಿ ಆಸ್ಟ್ರೇಲಿಯಾ, ಅಂಟಾರ್ಟಿಕ
ಖಂಡಗಳ ಪಠ್ಯವಿಷಯ ನೋಡಬಹುದಾಗಿದೆ. ಈ
ಎಲ್ಲಾ ಖಂಡಗಳ ಭೂಮಿಯ
ಅಧ್ಯಯನವನ್ನು ಮಕ್ಕಳು ಚಿತ್ರ, ಭೂಪಟ ಹಾಗೂ
ದೃಶ್ಯಗಳ ಮೂಲಕ
ತಿಳಿದುಕೊಳ್ಳಬಹುದು.
ಅಮೆರಿಕದ ಪಶ್ಚಿಮದ ಪರ್ವತ ಶ್ರೇಣಿಗಳು,
ಸರೋವರಗಳು, ಉತ್ತರ ಅಮೆರಿಕದ ಪ್ರಾಣಿ ವರ್ಗ
ಮತ್ತು ಸಸ್ಯವರ್ಗದ ದೃಶ್ಯಗಳು ಮಕ್ಕಳ
ಮನಸ್ಸಿನಲ್ಲಿ ಉಳಿಯುವಂತೆ ದಾಖಲಾಗಿವೆ. ನಾವು
ನೋಡಿರದ ಸಸ್ಯಗಳು, ಪ್ರಾಣಿಗಳು, ಗಿಡ–ಮರ
ಬಳ್ಳಿಗಳ ಮಾಹಿತಿ ಇದರಲ್ಲಿ ಅಡಕವಾಗಿವೆ. ಅಲ್ಲದೇ
ಅಲ್ಲಿನ ವಾಯುಗುಣ, ಖನಿಜ ಸಂಪತ್ತು,
ವ್ಯವಸಾಯ ಹಾಗೂ ಕೈಗಾರಿಕೆಗಳ ಬಗೆಗಿನ
ಮಾಹಿತಿಯನ್ನು ತಿಳಿದುಕೊಳ್ಳಬಹುದು.
'ಪಠ್ಯವಿಷಯವನ್ನು ದೃಶ್ಯ ಮಾಧ್ಯಮದ
ಮೂಲಕ ಮಕ್ಕಳಿಗೆ ಪರಿಚಯಿಸುವ ವಿಧಾನ ಬಹಳಷ್ಟು
ಶಾಲೆಗಳಲ್ಲಿ ಇದ್ದರೂ, ಕನ್ನಡ ಮಾಧ್ಯಮದ,
ಅದರಲ್ಲೂ ಸರ್ಕಾರಿ ಶಾಲೆಗಳಲ್ಲಿ ಅಪರೂಪ ಎಂದೇ
ಹೇಳಬಹುದು. ಈ ಮುಂಚೆ ಇತಿಹಾಸ ಪಠ್ಯಕ್ಕೆ
ಸಂಬಂಧಿಸಿದಂತೆ
ಹೊರತಂದಿರುವ ಡಿ.ವಿ.ಡಿಗಳ
ಯಶಸ್ಸಿನಿಂದ ಪ್ರೇರಣೆ ಪಡೆದು ಈ
'ಹೊಸದೃಷ್ಟಿ–ಭೂಗೋಳ ಅಧ್ಯಯನ'
ಡಿ.ವಿ.ಡಿ ಮಾಡಿದ್ದೇವೆ. ಶಿಕ್ಷಕರಿಗೆ ಬೋಧನೆ ಮಾಡಲು
ಸುಲಭವಾಗಿದೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ
ಬರೆಯುವವರ ಮಾರ್ಗದರ್ಶಿಯಾಗಿದೆ' ಎನ್ನುತ್ತಾರೆ
ಎಸ್.ವಿಶ್ವನಾಥ್.
ಮಾಹಿತಿಗೆ: 99457 99886

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023