Google is reorganizing and Sundar Pichai will become new CEO.. ಗೂಗಲ್ನ CEOಆಗಿ ಭಾರತೀಯ ಪ್ರಜೆ ಸುಂದರ್ ಪಿಚ್ಬೈ ಅವರನ್ನು ನಿಯೋಜಿಸಲಾಗಿದೆ

ನ್ಯೂಯಾರ್ಕ್, ಆ.11- ತಂತ್ರಜ್ಞಾನ
ಕ್ಷೇತ್ರದ ದೈತ್ಯ ಸಂಸ್ಥೆಯಾಗಿರುವ ಗೂಗಲ್ನ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ
ಭಾರತೀಯ ಪ್ರಜೆ ಸುಂದರ್ ಪಿಚ್ಬೈ
ಅವರನ್ನು ನಿಯೋಜಿಸಲಾಗಿದೆ.
ಗೂಗಲ್ ಕಂಪೆನಿ ಆಡಳಿತ ವ್ಯವಸ್ಥೆಯನ್ನು
ಒಂದು ಬಾರಿ ಸಮಗ್ರ ಪುನಾರಚನೆ ಮಾಡಲು
ಮುಂದಾಗಿರುವ ಕಂಪೆನಿ, ಆಲ್ಫಬೆಟ್
ಪದ್ಧತಿಯಲ್ಲಿ
ಪುನಶ್ಚೇತನಗೊಳಿಸಲು ನಿರ್ಧರಿಸಿದೆ.
ಗೂಗಲ್ ಕಂಪೆನಿಯ ಈ
ಮೊದಲಿನ ಷೇರುಗಳು ಅದೇ
ರೀತಿ ಮುಂದುವರೆಯಲಿವೆ. ಗೂಗಲ್ ಸಹ
ಸಂಸ್ಥಾಪಕ ಸರ್ಜಿಬಿನ್ ಅಧ್ಯಕ್ಷರಾಗಿರುತ್ತಾರೆ.
43 ವರ್ಷದ ಭಾರತ ಮೂಲದ ಪಿಚ್ಬೈ ಈ
ಮೊದಲು ಗೂಗಲ್ ಅಂತರ್ಜಾಲ
ವ್ಯವಹಾರದ ಮೇಲುಸ್ತುವಾರಿ ನೋಡುತ್ತಿದ್ದರು.ಭಾರತದ
ಖರಗ್ಪುರ ವಿಶ್ವವಿದ್ಯಾನಿಲಯದಿಂದ ಬಿ.ಟೆಕ್
ಪದವಿ ಪಡೆದಿರುವ ಪಿಚ್ಬೈ 2004ರಲ್ಲಿ ಗೂಗಲ್
ಉತ್ಪನ್ನಗಳ ನಿರ್ವಹಣೆ ಮಾಡುತ್ತಿದ್ದರು. ಪಿಚ್ಬೈ
ಅವರ ವ್ಯಾವಹಾರಿಕ ಪ್ರತಿಭೆಯನ್ನು ಗಮನಿಸಿದ
ಗೂಗಲ್ ಆಡಳಿತ ನಿನ್ನೆ ನಡೆದ ಸದಸ್ಯರ
ಸಭೆಯಲ್ಲಿ ಅವರನ್ನು ಆಯ್ಕೆ ಮಾಡಿತು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023