' Kalam Island ' should be the new name of Wheeler Island( ಕ್ಷಿಪಣಿ ಉಡಾವಣಾ ಕೇಂದ್ರಕ್ಕೆ 'ಕಲಾಂ ಐಲ್ಯಾಂಡ್' ಎಂದು ನಾಮಕರಣ)

ನವದೆಹಲಿ, ಆ.2-ಇತ್ತೀಚೆಗೆ ನಮ್ಮನ್ನಗಲಿದ
ಜನತಾ ರಾಷ್ಟ್ರಪತಿ, ಮಿಸೈಲ್
ಮ್ಯಾನ್ ಎಪಿಜೆ ಅಬ್ದುಲ್ ಕಲಾಂ
ಅವರ ಗೌರವಾರ್ಥವಾಗಿ ದೇಶದ
ಅತ್ಯಂತ ಆಧುನಿಕ ಕ್ಷಿಪಣಿ
ಉಡಾವಣಾ ಕೇಂದ್ರವಾಗಿರುವ
ಬಂಗಾಳ ಕೊಲ್ಲಿಯ ದ್ವೀಪಕ್ಕೆ ಈಗ
ಕಲಾಂ ಐಲ್ಯಾಂಡ್ ಎಂದು
ನಾಮಕರಣ ಮಾಡಲು ಸಕಲ ಸಿದ್ಧತೆಗಳು
ನಡೆದಿವೆ. ವಿಜ್ಞಾನಿ ಅಬ್ದುಲ್ ಕಲಾಂ
ಅವರು ತಾವು ಅಭಿವೃದ್ಧಿಪಡಿಸಿದ್ದ
ಹಲವು ಕ್ಷಿಪಣಿಗಳನ್ನು ಇದೇ
ಜಾಗದಲ್ಲಿ ಪರೀಕ್ಷಾರ್ಥ ಉಡಾವಣೆ
ನಡೆಸಲಾಗಿತ್ತು. ಅಷ್ಟೇ ಅಲ್ಲದೆ,
ಕಲಾಂ ಅವರು ಮೈ ಜರ್ನಿ
ಪುಸ್ತಕದಲ್ಲಿನ ಕೆಲ ಪದ್ಯಗಳನ್ನು
ಬರೆಯಲು ಈ ದ್ವೀಪದಲ್ಲಿನ
ಪ್ರಶಾಂತತೆ ಹಾಗೂ ಸಮುದ್ರ
ಗಾಂಭೀರ್ಯಗಳು
ಸ್ಫೂರ್ತಿಯಾಗಿದ್ದವು. ಜು.28
ರಂದು ಇಹಲೋಕ ತ್ಯಜಿಸಿದ
ಭಾರತದ ಮಿಸೈಲ್ ಮ್ಯಾನ್ ಹಾಗೂ
ವೈಮಾನಿಕ ಇಂಜಿನಿಯರ್ ಕಲಾಂ
ಅವರ ಹೆಸರನ್ನು ಈ ರೀತಿ ಅವರು
ತುಂಬಾ ಇಷ್ಟಪಡುತ್ತಿದ್ದ ಒರಿಸ್ಸಾದ
ಈ ಪುಟ್ಟ ದ್ವೀಪಕ್ಕೆ ಅವರ
ಹೆಸರನ್ನಿಡುವ ಮೂಲಕ ದೇಶ ಅವರಿಗೆ
ಕೃತಜ್ಞತೆ ಸಲ್ಲಿಸುವುದು
ಅಗತ್ಯವಾಗಿದೆ. ಒರಿಸ್ಸಾ ಕರಾವಳಿಯ ಈ
ಪುಟ್ಟ, ಸುಂದರ ದ್ವೀಪ ಎಂದರೆ
ಅಬ್ದುಲ್ ಕಲಾಂ ಅವರಿಗೆ
ಅಚ್ಚುಮೆಚ್ಚು. 1993ರ ನ.30 ರಂದು
ಪೃಥ್ವಿ ಕ್ಷಿಪಣಿ ಉಡಾವಣೆಯಾಗಿದ್ದು
ಇದೇ ದ್ವೀಪ ಭಾಗದಲ್ಲಿ ಎಂಬುದು ವಿಶೇಷ. ಇದು ಕಲಾಂ ಅವರ ಮೆಚ್ಚಿನ ದ್ವೀಪವಾದ್ದರಿಂದ
ಇದಕ್ಕೆ ಕಲಾಂ ದ್ವೀಪ ಎಂದು
ಹೆಸರಿಡುವ ಬಗ್ಗೆ ಸಿದ್ಧತೆಗಳು ನಡೆದಿವೆ ಎಂದು
ಮೂಲಗಳು ತಿಳಿಸಿವೆ.
ಪ್ರಸ್ತುತ ಈ ದ್ವೀಪವನ್ನು ಬ್ರಿಟಿಷ್
ಕಮಾಂಡೆಂಟ್ ‘ವೀಲರ್’ ಅವರ
ಹೆಸರಿನಿಂದ ಕರೆಯಲಾಗುತ್ತಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023