Drop


Thursday, August 13, 2015

ಭಾರತದ ಸೈಕಲ್ ಉದ್ಯಮ ಪಿತಾಮಹ ಓಂ ಪ್ರಕಾಶ್ ಮುಂಜಲ್ ಇನ್ನಿಲ್ಲ. ( O.P. Munjal, father of cycle industry, passes away)

ಲುಧಿಯಾನ, ಆಗಸ್ಟ್, 13 : ಭಾರತದ
ಸೈಕಲ್ ಉದ್ಯಮ ಪಿತಾಮಹ,
ಹೀರೋ ಸೈಕಲ್ ಮಾಲೀಕ, ಓಂ
ಪ್ರಕಾಶ್ ಮುಂಜಲ್ ಗುರುವಾರ
ಲುಧಿಯಾನದಲ್ಲಿ (ಪಂಜಾಬ್)
ನಿಧನರಾಗಿದ್ದಾರೆ.
ಕೆಲವು ದಿನಗಳ ಹಿಂದೆ ಮೆದುಳಿನ
ಪಾರ್ಶ್ವವಾಯುವಿಗೆ ತುತ್ತಾಗಿದ್ದ
ಇವರು ಲುಧಿಯಾದಲ್ಲಿರುವ
ದಯಾನಂದ್ ಮೆಡಿಕಲ್ ಕಾಲೇಜು
ಆಸ್ಪತ್ರೆಗೆ ದಾಖಲಾಗಿದ್ದ ಮಂಜಲ್ (86)
ಬೆಳಗ್ಗೆ 10.30 ವೇಳೆಗೆ ಇಹಲೋಕ
ತ್ಯಜಿಸಿದ್ದಾರೆ.[ ಮೈಸೂರು: ಸರಳ
ಸಜ್ಜನ ಪತ್ರಕರ್ತ ಕೃಷ್ಣ ವಟ್ಟಂ ವಿಧಿವಶ
]
1944ರಲ್ಲಿ ಮಂಜಲ್ ತಮ್ಮ ಸಹೋದರರ
ಜೊತೆಗೂಡಿ ಅಮೃತಸರದಲ್ಲಿ ಸೈಕಲ್
ಬಿಡಿ ಭಾಗಗಳನ್ನು ಮಾರಾಟ
ಮಾಡುತ್ತಿದ್ದರು. ಬಳಿಕ ಇವರೇ
ಸ್ವಯಂ ಆಗಿ 1955ರಲ್ಲಿ
ಲುಧಿಯಾನದಲ್ಲಿ ಹೀರೋ ಸೈಕಲ್
ತಯಾರಿಕೆ ಕಾರ್ಖಾನೆ ಸ್ಥಾಪಿಸಿದರು.
ಸೈಕಲ್ ಉತ್ಪಾದನೆ
ಮಾಡುತ್ತಿದ್ದವರು, ಬಳಿಕ ಸೈಕಲ್
ಕಂಪನಿಗೆ ಒಡೆಯರಾದರು.
1986ರಲ್ಲಿ ವಿಶ್ವದಲ್ಲೇ ಅತಿಹೆಚ್ಚು
ಸೈಕಲ್ ಉತ್ಪಾದನೆ ಮಾಡುವ ಕಂಪನಿ
ಎಂಬ ಹೆಗ್ಗಳಿಕೆಯೊಂದಿಗೆ
ಹೀರೋ ಸೈಕಲ್ ಕಂಪನಿ ಹೆಸರು
ಗಿನ್ನಿಸ್ ದಾಖಲೆಯಲ್ಲಿ
ಸೇರ್ಪಡೆಯಾಗಿದೆ. 2012ರಲ್ಲಿ 13
ಕೋಟಿ ಅಂದರೆ ಸುಮಾರು 48%
ಮಂದಿ ಇಂದಿಗೂ ಹೀರೋ ಸೈಕಲ್
ಬಳಕೆ ಮಾಡುತ್ತಿದ್ದಾರೆ.