Drop


Friday, August 21, 2015

Recruitment of 8500 police constables commence soon(20%reserved got women)-K K George(HM)

8500 ಪೊಲೀಸ್ ಹುದ್ದೆಗಳ
ನೇಮಕ ಶೀಘ್ರ
ಬೆಂಗಳೂರು: ರಾಜ್ಯದಲ್ಲಿ ಖಾಲಿ ಇರುವ
ಪೊಲೀಸ್ ಕಾನ್ಸ್​ಟೆಬಲ್
ಹುದ್ದೆಗಳ ಪೈಕಿ 8500 ಹುದ್ದೆಗಳನ್ನು
ಶೀಘ್ರ ಭರ್ತಿ
ಮಾಡಿಕೊಳ್ಳಲಾಗುವುದು ಎಂದು
ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ನಗರದಲ್ಲಿ ಗುರುವಾರ
ಸುದ್ದಿಗೋಷ್ಠಿಯಲ್ಲಿ
ಮಾತನಾಡಿದ ಅವರು, ಈಗಾಗಲೇ 8500
ಪೊಲೀಸ್ ಕಾನ್ಸ್​ಟೆಬಲ್
ಹುದ್ದೆಗಳನ್ನು ಭರ್ತಿ
ಮಾಡಿಕೊಳ್ಳಲಾಗಿದೆ. ಈಗ
ಹೆಚ್ಚುವರಿಯಾಗಿ 8500
ಪೊಲೀಸ್ ಕಾನ್ಸ್​ಟೆಬಲ್
ಹುದ್ದೆಗಳ ಭರ್ತಿಗೆ ನಿರ್ಧರಿಸಲಾಗಿದೆ. ಈ
ಸಂಬಂಧದ ಪ್ರಸ್ತಾವನೆಗೆ ಸಿಎಂ
ತಾತ್ವಿಕ ಒಪ್ಪಿಗೆ ನೀಡಿದ್ದು, ಇನ್ನೂ ಹಣಕಾಸು
ಇಲಾಖೆಯಿಂದ ಒಪ್ಪಿಗೆ
ದೊರೆತ ತಕ್ಷಣ ನೇಮಕಾತಿ
ಪ್ರಕ್ರಿಯೆ ಆರಂಭಿಸುತ್ತೇವೆ ಎಂದು
ಹೇಳಿದರು.
ಭೂಮಿಯೊಳಗೆ ರಸ್ತೆ ನಿರ್ವಣ:
ಜಪಾನ್ ಮತ್ತು ಕೌಲಾಲಂಪುರದಲ್ಲಿ ಭೂಮಿಯ
ಅಡಿಯಲ್ಲಿ ಸುರಂಗ ಕೊರೆದು
ನಿರ್ವಿುಸಿರುವ ರಸ್ತೆ ಹಾಗೆ ಬೆಂಗಳೂರು ನಗರದಲ್ಲಿ
ಪಿಪಿಪಿ ಆಧಾರದಲ್ಲಿ ರಸ್ತೆ ನಿರ್ವಿುಸಬೇಕಾಗಿದೆ.
ಇದರಿಂದ ಭೂಸ್ವಾಧೀನ ಸಮಸ್ಯೆ
ಎದುರಾಗುವುದಿಲ್ಲ ಎಂದು ಅವರು
ಅಭಿಪ್ರಾಯಪಟ್ಟರು.
ಪೊಲೀಸ್ ಸಿಬ್ಬಂದಿ
ರಜಾ ದಿನ ಭತ್ಯೆ ದ್ವಿಗುಣ
ರಜಾ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವ
ಪೊಲೀಸ್ ಪೇದೆಗಳಿಗೆ
ನೀಡಲಾಗುತ್ತಿದ್ದ ದಿನ ಭತ್ಯೆಯನ್ನು
200 ರಿಂದ 400 ರೂ.ಗೆ ಹೆಚ್ಚಿಸಲು ಸಿಎಂ
ಸಿದ್ದರಾಮಯ್ಯ
ಒಪ್ಪಿಕೊಂಡಿದ್ದು,
ಶೀಘ್ರದಲ್ಲಿ ಆದೇಶ
ಹೊರಡಿಸಲಾಗುವುದು ಎಂದು ಗೃಹ
ಸಚಿವ ಕೆ.ಜೆ.ಜಾರ್ಜ್ ಹೇಳಿದರು. ಈ ಹಿಂದೆ ರಜಾ
ದಿನ ಕೆಲಸ ಮಾಡಿದ
ಪೊಲೀಸ್ ಪೇದೆಗಳಿಗೆ 100
ರೂ. ನೀಡಲಾಗುತ್ತಿತ್ತು. ಕಾಂಗ್ರೆಸ್
ಅಧಿಕಾರಕ್ಕೆ ಬಂದ ನಂತರ ಆ
ಮೊತ್ತವನ್ನು 200 ರೂ.ಗೆ
ಹೆಚ್ಚಿಸಿದೆವು. ಈಗ ಮತ್ತೆ ಆ
ಮೊತ್ತವನ್ನು
ದ್ವಿಗುಣಗೊಳಿಸಿ 400 ರೂ.ಗೆ
ಹೆಚ್ಚಿಸುವಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ
ಕಳುಹಿಸಲಾಗಿದೆ. ಹಾಗಾಗಿ
ಶೀಘ್ರದಲ್ಲಿಯೇ ಈ ಕುರಿತು ಆದೇಶ
ಹೊರಬೀಳಲಿದೆ
ಎಂದು ಜಾರ್ಜ್ ಹೇಳಿದರು.
ಹೋಂಗಾರ್ಡ್ ದಿನ ಭತ್ಯೆ
ಹೆಚ್ಚಳ
ರಾಜ್ಯದಲ್ಲಿ ಪೊಲೀಸ್
ಸಿಬ್ಬಂದಿಗೆ ನೆರವಾಗುತ್ತಿರುವ ಗೃಹರಕ್ಷಕ ದಳದ
ಸಿಬ್ಬಂದಿಗೆ ನೀಡಲಾಗುತ್ತಿದ್ದ
ದಿನಭತ್ಯೆ ಹೆಚ್ಚಳ ಮಾಡಲಾಗಿದೆ. ಬೆಂಗಳೂರು
ನಗರದಲ್ಲಿ ಕಾರ್ಯ ನಿರ್ವಹಿಸುವ ಗೃಹರಕ್ಷಕ ದಳ
ಸಿಬ್ಬಂದಿಗೆ 325ರ ಬದಲಿಗೆ 400 ಮತ್ತು
ಬೆಂಗಳೂರು ಹೊರತುಪಡಿಸಿ ಉಳಿದ
ಪ್ರದೇಶದಲ್ಲಿ ಕಾರ್ಯನಿರ್ವಹಿಸುವ
ಸಿಬ್ಬಂದಿಗೆ 250 ರೂ.ಬದಲಿಗೆ 325 ರೂ.ಗೆ
ನಿಗದಿಪಡಿಸಲಾಗಿದೆ ಎಂದು ಜಾರ್ಜ್ ಹೇಳಿದರು.
ದೈಹಿಕ ಪರೀಕ್ಷೆಯಲ್ಲಿ ವಿನಾಯಿತಿ?
ಕೆಲ ತಿಂಗಳ ಹಿಂದೆಯಷ್ಟೇ 8500
ಪೊಲೀಸ್ ಕಾನ್ಸ್​ಟೆಬಲ್
ಹುದ್ದೆಗೆ ಅರ್ಜಿ ಕರೆದಾಗ 1 ಲಕ್ಷ ಅಭ್ಯರ್ಥಿಗಳು
ಅರ್ಜಿ ಸಲ್ಲಿಸಿದ್ದರು. ಎಲ್ಲ ಅಭ್ಯರ್ಥಿಗಳ
ದೈಹಿಕ ಪರೀಕ್ಷೆಗೆ ಹೆಚ್ಚು ಸಮಯ
ಹಿಡಿಯಿತು. ಈಗ ಮತ್ತೆ 8500 ಹುದ್ದೆಗಳಿಗೆ ಅರ್ಜಿ
ಆಹ್ವಾನಿಸಬೇಕಾಗಿದೆ. ಕಳೆದ ಬಾರಿ ದೈಹಿಕ
ಪರೀಕ್ಷೆಗೆ ಒಳಗಾಗಿರುವ ಅಭ್ಯರ್ಥಿಗಳಿಗೆ
ಈ ಬಾರಿ ವಿನಾಯಿತಿ ನೀಡುವ ಬಗ್ಗೆ
ಚಿಂತನೆ ನಡೆಸಲಾಗುತ್ತಿದೆ. ಒಟ್ಟಾರೆ
ಪೊಲೀಸ್ ಹುದ್ದೆಗೆ
ಒಂದು ಬಾರಿ ದೈಹಿಕ ಪರೀಕ್ಷೆಗೆ
ಒಳಗಾದರೆ ಮುಂದಿನ ಒಂದು ಅಥವಾ 2
ವರ್ಷಗಳ ಕಾಲ ಅವರು ದೈಹಿಕ ಪರೀಕ್ಷೆಗೆ
ಒಳಪಡುವ ಅಗತ್ಯವಿಲ್ಲದ ರೀತಿ
ಕಾನೂನಿಗೆ ತಿದ್ದುಪಡಿ ತರುವ ಕುರಿತು ಚಿಂತನೆ
ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಎತ್ತರದಲ್ಲಿ ವಿನಾಯಿತಿ
ಸಿದ್ದಿ, ಮಲೆಕುಡಿಯ ಸೇರಿ ಮಲೆನಾಡು ಮತ್ತು ಕರಾವಳಿ
ಭಾಗದಲ್ಲಿರುವ ಕೆಲ ಬುಡಕಟ್ಟು ಜನಾಂಗದವರು
ದೈಹಿಕವಾಗಿ ಸದೃಢರಾಗಿರುತ್ತಾರೆ. ಆದರೆ ಎತ್ತರ ಕಡಿಮೆ
ಇರುತ್ತದೆ. ಆದ್ದರಿಂದ ಆ ಯುವಕರಿಗೆ
ಪೊಲೀಸ್ ಭರ್ತಿಯ ದೈಹಿಕ
ಪರೀಕ್ಷೆಯಲ್ಲಿ ಎತ್ತರದಲ್ಲಿ
ವಿನಾಯಿತಿ ನೀಡಲಾಗಿದೆ ಎಂದು ಜಾರ್ಜ್
ಹೇಳಿದರು.
* ನೇಮಕಾತಿಯನ್ನು ಪಾರದರ್ಶಕತೆ ಯಿಂದ
ಮಾಡಲಾಗು ವುದು. ಈ ಬಾರಿ ಶೇ.20 ಹುದ್ದೆಗಳನ್ನು
ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಮಹಿಳಾ
ಪೊಲೀಸ್ ಸಿಬ್ಬಂದಿ
ಕೊರತೆಯನ್ನು ತುಂಬಲು
ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿದೆ.
| ಕೆ.ಜೆ.ಜಾರ್ಜ್, ಗೃಹ ಸಚಿವ