Drop


Tuesday, August 11, 2015

Sania Mirza to be conferred Rajiv Gandhi Khel Ratna - ಸಾನಿಯಾಗೆ ಒಲಿಯಿತು ಖೇಲ್ ರತ್ನ ಪ್ರಶಸ್ತಿ:

.

ನವದೆಹಲಿ: ಕ್ರೀಡಾ ಸಚಿವಾಲಯ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರ ಹೆಸರನ್ನು ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಸಾನಿಯಾ ಮಿರ್ಜಾ ಅವರ ಹೆಸರನ್ನು ಶಿಫಾರಸು ಮಾಡಲಾಗಿದ್ದು, ಅಂತಿಮ ನಿರ್ಧಾರವನ್ನು ಪ್ರಶಸ್ತಿ ಸಮಿತಿ ಕೈಗೊಳ್ಳಲಿದೆ ಎಂದು ಕ್ರೀಡಾ ಕಾರ್ಯದರ್ಶಿ ಅಜಿತ್ ಶರ್ಮಾ ಕಳೆದ ವಾರ ತಿಳಿಸಿದ್ದರು.
ಅಖಿಲ ಭಾರತ ಟೆನ್ನಿಸ್ ಅಸೋಸಿಯೇಷನ್ ನಿಂದ ಖೇಲ್ ರತ್ನ ಪ್ರಶಸ್ತಿಗೆ ಸಾನಿಯಾ ಮಿರ್ಜಾ ಹೆಸರು ಶಿಫಾರಸ್ಸು ತಡವಾಗಿ ಬಂದಿತ್ತು. ಆದರೂ ಕ್ರೀಡಾ ಸಚಿವಾಲಯ ಸಾನಿಯಾ ಹೆಸರನ್ನು ಶಿಫಾರಸು ಮಾಡಿತ್ತು. ಈಗ ಪ್ರಶಸ್ತಿ ಸಮಿತಿ ಕ್ರೀಡಾ ಸಚಿವಾಲಯದ ಶಿಫಾರಸನ್ನು ಪುರಸ್ಕರಿಸಿ ಸಾನಿಯಾ ಹೆಸರನ್ನು ಅಂತಿಮಗೊಳಿಸಿದೆ.

ಈ ಬಾರಿಯ ಖೇಲ್ ರತ್ನ ಪ್ರಶಸ್ತಿಗೆ ಸಾನಿಯಾ ಜೊತೆಗೆ ಸ್ವ್ಕಾಶ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಮತ್ತು ಡಿಸ್ಕಸ್ ಎಸೆತಗಾರ ವಿಕಾಸ್ ಗೌಡ ಹೆಸರನ್ನು ಕ್ರೀಡಾ ಸಚಿವಾಲಯ ಶಿಫಾರಸು ಮಾಡಿತ್ತು.

2015ರ ವಿಂಬಲ್ಡನ್ ಮಹಿಳಾ ಡಬಲ್ಸ್ ನಲ್ಲಿ ಸ್ವಿಜರ್ಲ್ಯಾಂಡ್‍ನ ಮಾರ್ಟಿನಾ ಹಿಂಗೀಸ್ ಜೊತೆಗೂಡಿ ಸಾನಿಯಾ ಮಿರ್ಜಾ ನಲ್ಲಿ ಪ್ರಪ್ರಥಮ ಬಾರಿಗೆ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ್ದರು. ಸಾನಿಯಾ ಇದುವರೆಗೆ ಮೂರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಜಯಿಸಿದ್ದು, ಪ್ರಸ್ತುತ ವಿಶ್ವದ ಮಹಿಳಾ ಡಬಲ್ಸ್ ಶ್ರೇಯಾಂಕ ಪಟ್ಟಿಯಲ್ಲಿ ಮಾರ್ಟಿನಾ ಹಿಂಗೀಸ್, ಸಾನಿಯಾ ಮಿರ್ಜಾ ನಂ.1 ಸ್ಥಾನದಲ್ಲಿದ್ದಾರೆ.