Shooter Prakash Nanjappa qualifies for Rio Olympics: ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಕರ್ನಾಟಕದ ನಂಜಪ್ಪ ಅರ್ಹತೆ ಗಿಟ್ಟಿಸಿದ ಭಾರತದ 6ನೇ ಶೂಟರ್.

ನವದೆಹಲಿ (ಪಿಟಿಐ): ಬೆಂಗಳೂರಿನ ಶೂಟರ್
ಪ್ರಕಾಶ್ ನಂಜಪ್ಪ ಅವರು ಅಜರ್ಬೈಜಾನ್
ಗಬಲಾದಲ್ಲಿ ನಡೆದ ಐಎಸ್ಎಸ್ಎಫ್ ವಿಶ್ವ ಕಪ್
ಶೂಟಿಂಗ್ನಲ್ಲಿ ಪುರುಷರ 50 ಮೀಟರ್
ಪಿಸ್ತೂಲ್ ವಿಭಾಗದಲ್ಲಿ ಎಂಟನೇ ಸ್ಥಾನ ಪಡೆಯುವ
ಮೂಲಕ ಮುಂದಿನ ವರ್ಷ ನಡೆಯಲಿರುವ
ರಿಯೊ ಒಲಿಂಪಿಕ್ಸ್ಗೆ ಸ್ಥಾನ
ಗಿಟ್ಟಿಸಿದ್ದಾರೆ.
39 ವರ್ಷದ ಪಿ.ನಂಜಪ್ಪಾ,
ರಿಯೊ ಒಲಿಂಪಿಕ್ಸ್ಗೆ ಅರ್ಹತೆ
ಗಿಟ್ಟಿಸಿದ ಭಾರತದ ಆರನೇ ಶೂಟರ್.
ಅರ್ಹತಾ ಸುತ್ತಿನಲ್ಲಿ ಪ್ರಕಾಶ್ ಅವರು ನಿಖರವಾಗಿ
ಗುರಿಯಿಟ್ಟು 567 ಪಾಯಿಂಟ್ ಗಳಿಸಿ ಎರಡನೇ
ಸ್ಥಾನ ಪಡೆದರು. ಎಂಟನೇ ಫೈನಲ್ ಅವರು 70.1
ಪಾಯಿಂಟ್ ಗಳಿಸಿ ಟೂರ್ನಿಯಿಂದ
ಹೊರಬಿದ್ದರು.ಆದರೆ, ನಿಖರ್ ಗುರಿಗಳ
ಮೂಲಕ ವೀಕ್ಷಕರ ಚಪ್ಪಾಳೆ ಗಿಟ್ಟಿಸಿ
ಮೆಚ್ಚುಗೆಗೆ ಪಾತ್ರರಾದರು.
ವಿಶ್ವ 52ನೇ ಕ್ರಮಾಂಕದಲ್ಲಿರುವ ಪ್ರಕಾಶ್,
567 ಪಾಯಿಂಟ್ಗಳ ಮೂಲಕ ಅರ್ಹತಾ
ಸುತ್ತಿನಲ್ಲಿ ಎರಡನೇಯವರಾಗಿ ಹೊರ
ಹೊಮ್ಮಿದರು.ರಿಯೊ
ಒಲಿಂಪಿಕ್ಸ್ಗೆ ಈಗಾಗಲೇ ಅರ್ಹತೆ ಪಡೆದಿರುವ ಜಿತು
ರಾಯ್ ಅವರು ಕೂಡ ಸ್ಪರ್ಧೆಯಲ್ಲಿದ್ದರು. ಅವರು
ಫೈನಲ್ನಲ್ಲಿ ನಾಲ್ಕನೇ ಸ್ಥಾನ ಪಡೆದರು.
ಪ್ರಕಾಶ್, ರಾಯ್ ಅವರಲ್ಲದೇ ಅಭಿನವ್ ಬಿಂದ್ರಾ,
ಗಗನ್ ನಾರಂಗ್, ಅಪೂರ್ವಿ ಚಾಂದೇಲಾ ಹಾಗೂ
ಗುರುಪ್ರೀತ್ ಸಿಂಗ್ ಅವರು 2016ರಲ್ಲಿ
ನಡೆಯಲಿರುವ ರಿಯೊ
ಒಲಿಂಪಿಕ್ಸ್ಗೆ ಅರ್ಹತೆ
ಗಿಟ್ಟಿಸಿಕೊಂಡಿದ್ದಾರೆ.
2013ರಲ್ಲಿ ವಿಶ್ವ ಕಪ್ ಶೂಟಿಂಗ್
ಟೂರ್ನಿಯಲ್ಲಿ ಸೆರೆಬ್ರಲ್ ಪಾಲ್ಸಿಗೆ ತುತ್ತಾಗಿದ್ದ
ಪ್ರಕಾಶ್ ಅವರು, ಬಳಿಕ
ಚೇತರಿಸಿಕೊಂಡಿದ್ದರು. ಕಠಿಣ
ಪರಿಶ್ರಮದ ಮೂಲಕ ಇರಾನ್ ರಾಜಧಾನಿ ಟೆಹರಾನ್ನಲ್ಲಿ
2013ರ ಅಕ್ಟೋಬರ್ನಲ್ಲಿ ನಡೆದ ಏಷ್ಯನ್ ಏರ್
ಗನ್ ಚಾಂಪಿಯನ್ಶಿಪ್ನಲ್ಲಿ 50
ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ
ಸಾಧನೆ ತೋರಿದ್ದರು.
2014ರಲ್ಲಿ ಗ್ಲಾಸ್ಗೊದಲ್ಲಿ ನಡೆದ
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಹಾಗೂ
ಇಂಚೆನ್ನಲ್ಲಿ ನಡೆದ ಏಷ್ಯನ್
ಕ್ರೀಡಾಕೂಟದಲ್ಲಿ ಕಂಚಿನ ಸಾಧನೆ
ಮಾಡಿದ್ದರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023