Drop


Tuesday, August 18, 2015

ಸಮೀರ್ ಲಲ್ವಾಣಿ ದಕ್ಷಿಣ ಏಷ್ಯಾನ್ ಯೋಜನಾ ನೂತನ ರೂವಾರಿ The Stimson Centre yesterday announced the appointment of Sameer Lalwani as Dy Director for its South Asia programme.

ವಾಷಿಂಗ್ಟನ್, ಆಗಸ್ಟ್, 18 : ಇಂಡೋ
ಅಮೆರಿಕಾ ವಿದ್ವಾಂಸ, ಅಮೆರಿಕನ್ನರ
ಚಿಂತನಾ ವೇದಿಕೆಯಲ್ಲಿನ ಸ್ಟಿಮ್ ಸನ್
ಕೇಂದ್ರದ ಪ್ರತಿಷ್ಠಿತ ದಕ್ಷಿಣ ಏಷ್ಯಾನ್
ಯೋಜನೆಯ ಮುಂದಾಳತ್ವದ ಸ್ಥಾನವನ್ನು
ಅಲಂಕರಿಸಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ
ರಕ್ಷಣಾತ್ಮಕ ಸಲಹೆಗಳನ್ನು ನೀಡಲು
ಇರುವ ಸ್ಟಿಮ್ ಸನ್ ಕೇಂದ್ರವೂ ದಕ್ಷಿಣ
ಏಷ್ಯನ್ ಯೋಜನೆಗೆ ಸಮೀರ್ ಲಲ್ವಾಣಿ
ಅವರನ್ನು ಡೆಪ್ಯೂಟಿ ಡೈರೆಕ್ಟರ್ ಆಗಿ ಘೋಷಣೆ
ಮಾಡಿದೆ.[ ನಿಮ್ಮನ್ನು ಬೆರಗುಗೊಳಿಸುವ
ಮಂಗಳನ 3ಡಿ ಚಿತ್ರಗಳು
]
ಲಲ್ವಾಣಿ ಅವರು ಬಿಕ್ಕಟ್ಟು ನಿರ್ವಹಣೆ,
ನ್ಯೂಕ್ಲಿಯರ್ ಸೆಕ್ಯುರಿಟಿ, ನ್ಯಾಷನಲ್
ಸೆಕ್ಯುರೆಟಿ ಡಿಸಿಷನ್ ಮೇಕಿಂಗ್ ಸೌತ್ ಏಷಿಯಾ ಹಾಗೂ
ಆನ್ ಲೈನ್ನಲ್ಲಿ ನ್ಯೂಕ್ಲಿಯರ್ ಗೆ
ಸಂಬಂಧಿಸಿದ ಕೋರ್ಸ್ ಆರಂಭಿಸಲು
ಚಿಂತನೆ ನಡೆಸಿದ್ದಾರೆ.
ಸೌತ್ ಏಷಿಯನ್ ತಂಡದಲ್ಲಿ ಸಹ
ಸಂಸ್ಥಾಪಕ ಮತ್ತು ಹಿರಿಯ ಸಹಾಯಕ ಮೈಕೆಲ್
ಕ್ರೆಪಾನ್, ಸಂಶೋಧನಾ ಸಹಾಯಕ ಶೇನ್
ಮಾಸೊನ್ ಮತ್ತು ಜುಲಿಯಾ ಥಾಮ್ಸನ್
ಇನ್ನು ಮುಂತಾದವರಿದ್ದು, ಇದು ಒಂದು
ಪ್ರತಿಭಾನ್ವಿತ ತಂಡವಾಗಿದ್ದು ಇದರಲ್ಲಿ ಸ್ಥಾನ
ಪಡೆದಿರುವುದು ಬಹಳ ಸಮತೋಚವಾಗಿದೆ ಎಂದು
ಹೇಳಿದರು.
ಲಲ್ವಾಣಿ ಅವರು ಕೇಂಬ್ರಿಡ್ಜ್ನ ಪ್ರತಿಷ್ಠಿತ
ಎಂಐಟಿ (Massachusetts Institution
Of Technology)ಯಲ್ಲಿ ರಾಜಕೀಯ
ಶಾಸ್ತ್ರದಲ್ಲಿ 2014ರಲ್ಲಿ ಡಾಕ್ಟರೇಟ್ ಪದವಿ
ಗಳಿಸಿದ್ದಾರೆ.
ಇವರು strategies of counterinsurgency
and state consolidation in South Asia ಈ
ವಿಷಯದಲ್ಲಿ ಸಂಪ್ರಬಂಧವನ್ನು ಹಾಗೂ
ಭಾರತ ಮತ್ತು ಪಾಕಿಸ್ತಾನದಲ್ಲಿ ಕ್ಷೇತ್ರ ಅಧ್ಯಯನ
ಕೈಗೊಂಡಿದ್ದಾರೆ.
ಸ್ಟಿಮ್ ಸನ್ ಕೇಂದ್ರ ಎಲ್ಲಿದೆ?
ಸೂಕ್ಷ್ಮಾವಲೋಕನ ಮತ್ತು ಕ್ರಿಯಾತ್ಮಕ ವಿಶ್ಲೇಷಣೆ
ಮೂಲಕ ಪರಿಣಾಮಕಾರಿಯಾದ ರಕ್ಷಣಾ ಸಲಹೆಗಳನ್ನು
ನೀಡಲು
ಹುರುತಿಸಿಕೊಂಡಿರುವ ಸ್ಟಿಮ್ ಸನ್
ಕೇಂದ್ರವು 1989ರಲ್ಲಿ ನ್ಯೂಯಾರ್ಕಿನಲ್ಲಿ
ಸ್ಥಾಪನೆಯಾಗಿದೆ
ಏನಿದು ಸೌತ್ ಏಷಿಯಾ ಯೋಜನೆ?
ಇದು ಪ್ರಮುಖವಾಗಿ ಪ್ರಾದೇಶಿಕ ರಕ್ಷಣಾ ವಿಷಯಗಳು,
ಅಮೆರಿಕಾದ ಪ್ರಮುಖ ಯೋಜನೆಗಳ ಮೇಲೆ ಗಮನ
ಹರಿಸುವುದು, ಪ್ರಾದೇಶಿಕತೆಗೆ ಸಂಬಂಧಿಸಿದ
ವಿವಿಧ ವಿಷಯಗಳ ನಿರ್ವಹಣೆ ಮಾಡುತ್ತದೆ. ಏಷ್ಯಾ
ಪೆಸಿಫಿಕ್ ಮತ್ತು ಅಮೆರಿಕನ್ನರ ನಡುವಿನ ಉತ್ತಮ
ಅಂಶಗಳ ವಿನಿಮಯ
ಮಾಡಿಕೊಳ್ಳಲು ಸಹಕರಿಸುತ್ತದೆ.