Drop


Saturday, August 1, 2015

Tabu, Irrfan's TALWAR to premiere at Toronto Film Fest 2015.

ಟೊರಾಂಟೊ
ಅಂತರಾಷ್ಟ್ರೀಯ
ಚಲನಚಿತ್ರೋತ್ಸವಕ್ಕೆ 'ತಲ್ವಾರ್' ಆಯ್ಕೆ
ಉದಯವಾಣಿ, Jul 30, 2015, 6:51 PM IST
ರಾಷ್ಟ್ರ ರಾಜಧಾನಿಯ ನೋಯ್ಡಾದಲ್ಲಿ ನಡೆದ ಆರುಷಿ
ಹತ್ಯಾ ಪ್ರಕರಣದ ಕಥೆಯಾಧಾರಿತ ತಲ್ವಾರ್ ಚಿತ್ರವು
ಸೆಪ್ಟಂಬರ್'ನಲ್ಲಿ ನಡೆಯಲಿರುವ
ಟೊರಾಂಟೊ
ಅಂತರಾಷ್ಟ್ರೀಯ
ಚಲನಚಿತ್ರೋತ್ಸವದ ಕ್ರೈಂ ಥ್ರಿಲ್ಲರ್
ವಿಭಾಗದಲ್ಲಿ ಆಯ್ಕೆ
ಪಡೆದುಕೊಂಡಿದೆ.
ಚಿತ್ರದಲ್ಲಿ ಖ್ಯಾತ ರಂಗಭೂಮಿ ಕಲಾವಿದ
ಬಾಲಿವುಡ್ ನಟ ಇರ್ಫಾನ್ ಖಾನ್ ಹಾಗೂ ತಬು ಮುಖ್ಯ
ಪಾತ್ರದಲ್ಲಿ
ಕಾಣಿಸಿಕೊಂಡಿದ್ದಾರೆ.
ದೆಹಲಿಯಲ್ಲಿ 14 ವರ್ಷದ ಆರುಷಿ ತಲ್ವಾರ್ ಹಾಗೂ
ಮನೆ ಕೆಲಸಗಾರ ಹೇಮರಾಜ್'ರನ್ನು ವೃತ್ತಿಯಲ್ಲಿ
ದಂತವೈದ್ಯರಾಗಿರುವ ಆರುಷಿ ಹೆತ್ತವರು
ಕೊಲೆ ಮಾಡಿದ್ದರು.
ಇದೇ ಕಥೆಗೆ ಮೆಘನಾ ಗುಲ್ಜರ್ ಆಕ್ಷನ್ ಕಟ್ ಹೇಳಿದ್ದು
ಮೊದಲ ಸಕ್ಸಸ್ ಎಂಬಂತೆ
ಚಿತ್ರವು
ಟೊರಾಂಟೊ
ಅಂತರಾಷ್ಟ್ರೀಯ
ಚಲನಚಿತ್ರೋತ್ಸವದಲ್ಲಿ
ಪ್ರದರ್ಶನಗೊಳ್ಳಲಿರುವ 35
ಚಿತ್ರಗಳಲ್ಲಿ ಸ್ಥಾನ ಪಡೆದಿದ್ದಾರೆ.
ಈ ಚಿತ್ರವು ಇಂಗ್ಲಿಷ್'ನಲ್ಲಿ ಗಿಲ್ಟಿ
ಎಂಬ
ಶೀರ್ಷಿಕೆಯೊಂದಿಗೆ
ಬಿಡುಗಡೆಯಾಗಲಿದ್ದು ತಲ್ವಾರ್'ನ್ನು ಜಂಗ್ಲಿ
ಮೋಷನ್ ಪಿಕ್ಚರ್ಸ್ ಸಂಸ್ಥೆಯು ನಿರ್ಮಾಣ
ಮಾಡಿದ್ದಾರೆ.
ಇರ್ಫಾನ್ ಖಾನ್, ತಬುರೊಂದಿಗೆ
ಚಿತ್ರದಲ್ಲಿ ನೀರಜ್ ಕಾಬಿ ಹಾಗೂ
ಕೊಂಕಣ ಸೇನ್ ಶರ್ಮಾ
ಅಭಿನಯಿಸಿದ್ದು ಅಕ್ಟೋಬರ್-2ರಂದು
ದೇಶದ್ಯಾಂತ ತೆರೆಗೆ ಬರಲಿದೆ.