ವಿಶ್ವ ಬ್ಯಾಂಕ್ ಸಮೀಕ್ಷೆ ನಡೆಸಿ ಸಿದ್ಧಪಡಿಸಿರುವ ಉದ್ಯಮಸ್ನೇಹಿ ರಾಜ್ಯಗಳ ಪಟ್ಟಿ ಗುಜರಾತ್ -1ನೇ ಸ್ಥಾನ, ಕರ್ನಾಟಕಕ್ಕೆ 9ನೇ ಸ್ಥಾನ:

ನವದೆಹಲಿ: ಭಾರತದಲ್ಲಿ ವಿಶ್ವ ಬ್ಯಾಂಕ್
ಸಮೀಕ್ಷೆ ನಡೆಸಿ ಸಿದ್ಧಪಡಿಸಿರುವ
ಉದ್ಯಮಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ
ಗುಜರಾತ್ 1ನೇ ಸ್ಥಾನ ಪಡೆದಿದ್ದರೆ, ಕರ್ನಾಟಕ 9ನೇ
ಸ್ಥಾನ ಪಡೆದಿದೆ.
ಉದ್ಯಮ ಸ್ಥಾಪಿಸಲು ಪೂರಕ ವಾತಾವರಣ, ಜಾಗದ
ಲಭ್ಯತೆ, ಕಾರ್ಮಿಕರು ಮತ್ತು ಪರಿಸರ ಇಲಾಖೆ
ಪರವಾನಗಿ, ರಾಜ್ಯ ಸರ್ಕಾರಗಳ ಸಹಕಾರ, ತೆರಿಗೆ ಪಾವತಿ
ನಿಯಮಾವಳಿಗಳು, ಮೂಲಸೌಕರ್ಯ, ಸೇರಿದಂತೆ
ಹಲವು ಅಂಶಗಳನ್ನು
ಒಳಗೊಂಡಂತೆ
ವಿಶ್ವಬ್ಯಾಂಕ್ ಸಮೀಕ್ಷೆ ನಡೆಸಿತ್ತು.
ಸಮೀಕ್ಷೆಯಲ್ಲಿ ಸಿದ್ಧಪಡಿಸಿರುವ
ಪಟ್ಟಿಯಲ್ಲಿ ಆಂಧ್ರಪ್ರದೇಶ
ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದು,
ಜಾರ್ಖಂಡ್ 3ನೇ ಸ್ಥಾನ ಪಡೆದಿದೆ.
ನಂತರದ ಸ್ಥಾನಗಳಲ್ಲಿ ಛತ್ತೀಸ್​ಗಢ (4ನೇ)
, ಮಧ್ಯಪ್ರದೇಶ (5ನೇ), ರಾಜಸ್ಥಾನ (6ನೇ), ಒಡಿಸ್ಸಾ
(7ನೇ), ಮಹಾರಾಷ್ಟ್ರ (8ನೇ), ಕರ್ನಾಟಕ (9ನೇ)
ಮತ್ತು ಉತ್ತರ ಪ್ರದೇಶ(10ನೇ) ಸ್ಥಾನ ಪಡೆದಿವೆ.
ಉದ್ಯಮ ಸ್ನೇಹಿ ರಾಜ್ಯಗಳ
ಪಟ್ಟಿಯಲ್ಲಿ ಮಿಜೋರಾಮ್
ಕೊನೆಯ ಸ್ಥಾನ ಪಡೆದಿದ್ದು,
ಜಮ್ಮು ಮತ್ತು ಕಾಶ್ಮೀರ, ಮೇಘಾಲಯ,
ನಾಗಲ್ಯಾಂಡ್ ಮತ್ತು ಅರುಣಾಚಲ ಪ್ರದೇಶಗಳು
ನಂತರದ ಸ್ಥಾನ ಪಡೆದಿವೆ. ಪಶ್ಚಿಮ
ಬಂಗಾಳ (11ನೇ), ತಮಿಳುನಾಡು (12ನೇ),
ಹರ್ಯಾಣ (41ನೇ), ದೆಹಲಿ (15ನೇ), ಪಂಜಾಬ್
(16ನೇ), ಹಿಮಾಚಲ ಪ್ರದೇಶ (17ನೇ), ಕೇರಳ (18ನೇ),
ಗೋವಾ (19ನೇ), ಬಿಹಾರ (21ನೇ)
ಮತ್ತು ಅಸ್ಸಾಂ (22ನೇ) ಸ್ಥಾನ ಪಡೆದಿವೆ.
ವಿಶ್ವಮಟ್ಟದಲ್ಲಿ ವಿಶ್ವಬ್ಯಾಂಕ್ 182
ದೇಶಗಳಲ್ಲಿ ಸಮೀಕ್ಷೆ ನಡೆಸಿತ್ತು. ಉದ್ಯಮ
ಸ್ನೇಹಿ ವಾತಾವರಣ
ಹೊಂದಿರುವ ರಾಷ್ಟ್ರಗಳ
ಪಟ್ಟಿಯಲ್ಲಿ ಭಾರತ 142ನೇ ಸ್ಥಾನ ಪಡೆದಿದೆ.
ಕೇಂದ್ರ ಸರ್ಕಾರವು ದೇಶವನ್ನು
ಉದ್ಯಮಸ್ನೇಹಿ ದೇಶವಾಗಿಲು
ಕೆಲವೊಂದು ಅಗತ್ಯ ಕ್ರಮ
ತೆಗೆದುಕೊಂಡಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023