Drop


Monday, September 21, 2015

ಶೀಘ್ರದಲ್ಲೇ ಆರಂಭವಾಗಲಿದೆ ವಿಶ್ವದ ಅತಿ ದೂರದ(14,000kmtrs) ವಿಮಾನ ಸಂಚಾರ:

ನವದೆಹಲಿ, ಸೆ.21- ವಿಶ್ವದ
ಮೊಟ್ಟ ಮೊದಲ
ಸುದೀರ್ಘವಾದ ವಿಮಾನ ಪ್ರಯಾಣ
ಶೀಘ್ರದಲ್ಲೇ ಬೆಂಗಳೂರು ಹಾಗೂ
ಸ್ಯಾನ್ಸ್ಫ್ರಾನ್ಸಿಸ್ಕೋ ನಡುವೆ ಕಾರ್ಯಾರಂಭ
ಮಾಡಲಿದೆ. ಸುಮಾರು 14,000 ಕಿ.ಮೀ
ದೂರವಿರುವ ಬೆಂಗಳೂರು-ಸ್ಯಾನ್ಫ್ರಾನ್ಸಿಸ್ಕೋ
ನಡುವಿನ ಏರ್ ಇಂಡಿಯಾ ವಿಮಾನ ಸಂಚಾರ
ಶೀಘ್ರದಲ್ಲೇ ಆರಂಭವಾಗಲಿದ್ದು ,
17 ರಿಂದ 18 ಗಂಟೆಗಳ ಕಾಲ ತಡೆ
ರಹಿತವಾಗಿ ಇದು ಕಾರ್ಯಾಚರಣೆ ನಡೆಸಲಿದೆ. ಈಗಾಗಲೇ
ವಿಮಾನ ಸಂಚಾರಕ್ಕೆ ಎರಡು ನಗರಗಳ
ಅಧಿಕಾರಿಗಳು ಒಪ್ಪಂದ
ಮಾಡಿಕೊಂಡಿದ್ದು , ಆದಷ್ಟು
ಶೀಘ್ರದಲ್ಲೇ ಕಾರ್ಯಗತವಾಗಲಿದೆ
ಎಂದು ಕೇಂದ್ರ ನಾಗರಿಕ ವಿಮಾನಯಾನ
ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ
ಬೆಂಗಳೂರು-ಸ್ಯಾನ್ಫ್ರಾನ್ಸಿಸ್ಕೋ ವಾಣಿಜ್ಯ
ವಿಮಾನ ಕಾರ್ಯಗತಗೊಂಡರೆ
ವಿಶ್ವದ ಅತಿ ಸುದೀರ್ಘ ವಿಮಾನ
ಎಂಬ ಹೆಗ್ಗಳಿಕೆ ಇದು ಪಾತ್ರವಾಗಲಿದೆ.
ಪ್ರಸ್ತುತ ಅತಿ ದೂರದ ವಿಮಾನ ಸಂಚಾರ
ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಗಿದೆ.
ಆಸ್ಟ್ರೇಲಿಯಾದ ಕ್ವಾಂಟಸ್ ಎಂಬ ವಿಮಾನ
ಸಂಸ್ಥೆಯು ಸಿಡ್ನಿ ಹಾಗೂ ಡೆಲ್ಲಾಸ್ ಪೋರ್ಟ್ ನಡುವೆ
ಸಂಚಾರ ಮಾಡುತ್ತಿದೆ. ಇದು 13,730
ಕಿ.ಮೀ ದೂರವಿದೆ. ಎರಡನೆ ದೂರದ
ವಿಮಾನವೆಂದರೆ ದುಬೈ ಮತ್ತು ಪನಾಮಾ ಸಿಟಿ ನಡುವೆ
ಸಂಚರಿಸುವ ಎಮಿರೇಟ್ಸ್ ವಿಮಾನ. ಇದು 13,550
ಕಿ.ಮೀ ಸಂಚಾರ ಮಾಡುತ್ತಿದೆ.
ಇದೀಗ ಏರ್ಇಂಡಿಯಾ
ಸಂಸ್ಥೆಯವರು ಬೆಂಗಳೂರಿನಿಂದ
ಸ್ಯಾನ್ಫ್ರಾನ್ಸಿಸ್ಕೋ ನಡುವೆ ವಿಮಾನ ಸಂಚಾರ
ಹಾರಾಟ ನಡೆಸಲು ಮುಂದಾಗಿದ್ದಾರೆ.
ಬೆಂಗಳೂರಿನಿಂದ ಏರ್ ಇಂಡಿಯಾ
ವಿಮಾನ ಸ್ಯಾನ್ಸ್ಫ್ರಾನ್ಸಿಸ್ಕೋಗೆ
ಹೊರಟರೆ
ಸ್ಯಾನ್ಸ್ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ
ಗೋಯಿಂಗ್ ವಿಮಾನ ಬರಲಿದೆ. ಇದರ ಜತೆಗೆ
ಅಹಮದಾಬಾದ್ ಹಾಗೂ ಲಂಡನ್ ನಡುವೆಯೂ ವಿಮಾನ
ಹಾರಾಟವನ್ನು
ಕಾರ್ಯಗತಗೊಳಿಸಬೇಕೆಂಬ
ಯೋಜನೆ ಇದೆ. ಮುಂದಿನ ತಿಂಗಳು ಅಮೆರಿಕಾ
ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ
ಮೋದಿ ಈ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ
ಶೀಘ್ರದಲ್ಲಿಯೇ ಯೋಜನೆಯನ್ನು
ಕಾರ್ಯಗತಗೊಳಿಸಲಿದ್ದಾರೆ
ಎಂದು ತಿಳಿದು ಬಂದಿದೆ.