2008ರಲ್ಲಿ ನೆಪಾಳ ಸಂಸತ್ತು ನೇಪಾಳವನ್ನು ಜಾತ್ಯಾತೀತ ರಾಷ್ಟ್ರವೆಂದು ಘೊಷಿಸಿತ್ತು. ಈಗಲೂ ಕೂಡ ಅದು ಜಾತ್ಯಾತೀತ ರಾಷ್ಟ್ರ.:
ಕಠ್ಮಂಡು: ನೇಪಾಳವನ್ನು
ಹಿಂದು ರಾಷ್ಟ್ರವೆಂದು
ಘೊಷಿಸಬೇಕೆಂಬ ವಿಧೇಯಕಕ್ಕೆ
ಸೋಮವಾರ ನೇಪಾಳ
ಸಂಸತ್ತಿನಲ್ಲಿ
ಸೋಲುಂಟಾಗಿದ್ದು,
ನೇಪಾಳ ಜಾತ್ಯಾತೀತ
ರಾಷ್ಟ್ರವಾಗಿ ಮುಂದುವರೆಯಲಿದೆ
ಎಂದು ಸಂಸತ್ತು ತಿಳಿಸಿದೆ.
ಹಿಂದೂಗಳ ಸಂಖ್ಯೆ ಹೆಚ್ಚಾಗಿರುವ
ನೇಪಾಳವನ್ನು ಹಿಂದು
ರಾಷ್ಟ್ರವೆಂದು
ಘೊಷಿಸಬೇಕೆಂದು ಪ್ರತಿಭಟನೆಗಳು
ನಡೆಯುತ್ತಿದ್ದವು. ಇದೇ
ಸಂದರ್ಭದಲ್ಲಿ ನೇಪಾಳದ ಹಿಂದು
ಪರ ರಾಷ್ಟ್ರೀಯ ಪ್ರಜಾತಂತ್ರ ಪಕ್ಷ
(ಆರ್ಪಿಪಿ-ಎನ್)ದ ಅಧ್ಯಕ್ಷ ಕಮಲ್ ಥಾಪ
ಸಂಸತ್ತಿನಲ್ಲಿ ಹಿಂದು ರಾಷ್ಟ್ರ
ವಿಧೇಯಕ ಮಂಡಿಸಿದ್ದರು.
ಕಾನೂನಿನಲ್ಲಿ ತಿದ್ದುಪಡಿ ತರುವ
ಮೂಲಕ ನೇಪಾಳವನ್ನು ಹಿಂದು
ರಾಷ್ಟ್ರವೆಂದು ಘೊಷಿಸಲು
ಒತ್ತಾಯಿಸಿತ್ತು. 601 ಸದಸ್ಯ ಬಲದ
ನೇಪಾಳ ಸಂಸತ್ತಿನಲ್ಲಿ
ಸೋಮವಾರ 2/3 ಬಹುಮತದಿಂದ
ವಿಧೇಯಕಕ್ಕೆ
ಸೋಲುಂಟಾಗಿದೆ. ಸಂಸತ್ತು
ನೇಪಾಳ ಜಾತ್ಯಾತೀತ
ರಾಷ್ಟ್ರವಾಗಿ ಮುಂದುವರೆಯಲಿದೆ
ಎಂದು ತಿಳಿಸಿದೆ.
2008ರಲ್ಲಿ ನೆಪಾಳ ಸಂಸತ್ತು
ನೇಪಾಳವನ್ನು ಜಾತ್ಯಾತೀತ
ರಾಷ್ಟ್ರವೆಂದು ಘೊಷಿಸಿತ್ತು.
ಅದೇ ಸ್ಥಾನಮಾನವನ್ನು
ಮುಂದುವರೆಸುವುದಾಗಿ
ಸಂಸತ್ತು ತಿಳಿಸಿದೆ.
ಜುಲೈನಲ್ಲಿ ನಡೆದಿದ್ದ ಜನಮತ
ಸಂಗ್ರಹದಲ್ಲಿ ಬಹುಪಾಲು ಜನರು
ಹಿಂದು ಅಥವಾ ಧಾರ್ಮಿಕ
ಸ್ವಾತಂತ್ರ್ಯ ಹೊಂದಿರುವ
ರಾಷ್ಟ್ರ ಬೇಕೆಂದು ತಿಳಿಸಿದ್ದರು.
Comments
Post a Comment