25 ವರ್ಷಗಳಲ್ಲಿ ಶೇ 3ರಷ್ಟು ತಗ್ಗಿದ ಜಾಗತಿಕ ಅರಣ್ಯ ಪ್ರದೇಶ ಅರಣ್ಯ ನಾಶ ಭಾರತದಲ್ಲೇ ಹೆಚ್ಚು; ವಿಶ್ವಸಂಸ್ಥೆ ವರದಿ


ಸಿಡ್ನಿ (ಐಎಎನ್ಎಸ್): ಭಾರತದಲ್ಲಿ ಹಚ್ಚ ಹಸಿರಿನ
ಅರಣ್ಯ ಪ್ರದೇಶ ಕಳೆದ ಎರಡೂವರೆ ದಶಕದಲ್ಲಿ
ಗಣನೀಯ ಪ್ರಮಾಣದಲ್ಲಿ
ಕಡಿಮೆಯಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ
ಅರಣ್ಯನಾಶ ಭಾರತದಲ್ಲೇ ಹೆಚ್ಚಿದೆ ಎಂದು
ಇತ್ತೀಚೆಗೆ ಬಿಡುಗಡೆಯಾದ
ವಿಶ್ವಸಂಸ್ಥೆಯ 'ಜಾಗತಿಕ ಅರಣ್ಯ
ಸಂಪತ್ತು ಮೌಲ್ಯಮಾಪನ ವರದಿ
(ಜಿಎಫ್ಆರ್ಎ) ಹೇಳಿದೆ.
ಮೆಲ್ಬರ್ನ್ ವಿಶ್ವವಿದ್ಯಾಲಯದ ತಜ್ಞರ
ತಂಡ ಈ ಅಧ್ಯಯನ ನಡೆಸಿದೆ.
1990ರಿಂದ ಅಂದರೆ ಕಳೆದ 25
ವರ್ಷಗಳಲ್ಲಿ ಪ್ರಪಂಚದಾದ್ಯಂತ
ಅರಣ್ಯ ಪ್ರದೇಶ ಶೇ 3ರಷ್ಟು ತಗ್ಗಿದೆ. ಶೇ 3ರಷ್ಟು
ಅಂದರೆ 129 ದಶಲಕ್ಷ ಹೇಕ್ಟರ್ಗಳಷ್ಟು. ಇದು
ಗಾತ್ರದಲ್ಲಿ ದಕ್ಷಿಣ ಆಫ್ರಿಕಾ ದೇಶವನ್ನು ಹೋಲುತ್ತದೆ
ಎಂದು ಈ ಅಧ್ಯಯನ ತಂಡದ
ಮುಖ್ಯಸ್ಥ ಪ್ರೊಪೆಸರ್ ರುದ್
ಕೀನನ್ ಆತಂಕ
ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿ ಹೊಂದಿದ
ದೇಶಗಳಲ್ಲಿ ಅರಣ್ಯ ರಕ್ಷಣೆಗಾಗಿ ಹಲವು
ಕಾಯ್ದೆಗಳು ಜಾರಿಯಲ್ಲಿವೆ. ಆದರೆ, ಅದನ್ನು
ಪರಿಣಾಮಕಾರಿಯಾಗಿ ಜಾರಿಗೊಳಿಸುವ
ಸಾಮರ್ಥ್ಯ ಆ ದೇಶಗಳಿಗಿಲ್ಲ. ಹೀಗಾಗಿ
ಕೃಷಿ ಭೂಮಿ ಅಭಿವೃದ್ಧಿ ಹೆಸರಿನಲ್ಲಿ ಮರಗಳ
ಆಹುತಿಯಾಗುತ್ತಿವೆ ಎಂದೂ ವರದಿ ಗಮನ
ಸೆಳೆದಿದೆ.
ಸಣ್ಣ ಮತ್ತು ದೊಡ್ಡ
ರೈತರಿಂದ ಕೃಷಿ ಭೂಮಿ ಅಭಿವೃದ್ಧಿಗಾಗಿ ಹೆಚ್ಚಿನ
ಅರಣ್ಯ ನಾಶ ಆಗಿದೆ. ಬ್ರೆಜಿಲ್,
ಇಂಡೋನೇಷ್ಯಾ, ನೈಜೀರಿಯಾದಲ್ಲಿ
ಕಳೆದ 5 ವರ್ಷಗಳಲ್ಲಿ ಗರಿಷ್ಠ ಹಾನಿ
ಸಂಭವಿಸಿದೆ ಎಂದು ವರದಿ ಹೇಳಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023