4 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಜನವರಿ ತಿಂಗಳಲ್ಲಿ ಅರ್ಹತಾ ಪರೀಕ್ಷೆ

ಬೆಂಗಳೂರು: ವಿದ್ಯಾರ್ಥಿಗಳ ಕಲಿಕಾ
ಮಟ್ಟ ಅಳೆಯಲು 4 ಮತ್ತು 7ನೇ
ತರಗತಿ ವಿದ್ಯಾರ್ಥಿಗಳಿಗೆ ಜನವರಿ ತಿಂಗಳಲ್ಲಿ
ಅರ್ಹತಾ ಪರೀಕ್ಷೆ ನಡೆಸುವುದಾಗಿ
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ
ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ.
ಅರ್ಹತಾ ಪರೀಕ್ಷೆಯಲ್ಲಿ ನೀಡುವ
ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಪ್ರಬಂಧ
ಮಾದರಿಯ ಉತ್ತರ
ಬರೆಯಬೇಕಾಗುತ್ತದೆ. ಈ
ಪರೀಕ್ಷೆಗೂ ವಿದ್ಯಾರ್ಥಿಯ
ಉತ್ತೀರ್ಣ ಅಥವಾ
ಅನುತ್ತೀರ್ಣಕ್ಕೂ
ಸಂಬಂಧವಿರುವುದಿಲ್ಲ. ಮಕ್ಕಳ
ಕಲಿಕಾ ಮಟ್ಟ ಹೇಗಿದೆ, ಶಿಕ್ಷಕರು
ಉತ್ತಮ ರೀತಿಯಲ್ಲಿ
ಕಲಿಸುತ್ತಿದ್ದಾರಾ ಎಂಬುದನ್ನು
ಪತ್ತೆ ಮಾಡಲು ಈ ಅರ್ಹತಾ ಪರೀಕ್ಷೆ
ನಡೆಸಲಾಗುವುದು ಎಂದರು.
ಜನವರಿಯಲ್ಲಿ ಪರೀಕ್ಷೆ ನಡೆಸಿ,
ವಿದ್ಯಾರ್ಥಿಯ ಕಲಿಕೆಯಲ್ಲಿ ನ್ಯೂನತೆ
ಇದ್ದರೆ, ಸದರಿ ವಿದ್ಯಾರ್ಥಿಯ ಮೇಲೆ
ಹೆಚ್ಚಿನ ಗಮನ ನೀಡಿ ಮಾರ್ಚ್ನಲ್ಲಿ
ನಡೆಯುವ ವಾರ್ಷಿಕ ಪರೀಕ್ಷೆಯ
ವೇಳೆಗೆ ಆತನ ಕಲಿಕಾ
ಸಾಮರ್ಥ್ಯವನ್ನು ಹೆಚ್ಚಿಸಬಹುದು
ಎಂಬ ಕಾರಣಕ್ಕಾಗಿ ಈ ವ್ಯವಸ್ಥೆ
ಅಳವಡಿಸಲಾಗುತ್ತಿದೆ ಎಂದು ಅವರು
ಹೇಳಿದರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023