Drop


Monday, September 14, 2015

ಬಿಇಎಂಎಲ್ ನಲ್ಲಿ 43 ಹುದ್ದೆಗಳಿಗೆ ಅರ್ಜಿ ಆಹ್ವಾನ


ಬೆಂಗಳೂರು, ಸೆ. 14: ಭಾರತ್ ಅರ್ಥ್ ಮೂವರ್ಸ್
ಲಿಮಿಟೆಡ್ (ಬಿಇಎಂಎಲ್) ಸಹಾಯಕ
ಮ್ಯಾನೇಜರ್, ಐಟಿಐ ಟ್ರೈನಿ ಸೇರಿದಂತೆ 43ಕ್ಕೂ
ಅಧಿಕ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಮೈಸೂರು, ಬೆಂಗಳೂರು, ಕೆ.ಜಿ.ಎಫ್, ಪಾಲಕ್ಕಾಡ್
ಮುಂತಾದ ಕಡೆಗಳಲ್ಲಿ ನೇಮಕಾತಿ ನಡೆಸಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ಸೆ.
23ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಬಿಇಎಂಎಲ್ ಹುದ್ದೆಗಳ ವಿವರ:
* ಸಹಾಯಕ ಮ್ಯಾನೇಜರ್ ಹುದ್ದೆ : 09
* ಅಧಿಕಾರಿ: 8 ಹುದ್ದೆಗಳು
* ಸಹಾಯಕ ಅಧಿಕಾರಿ : 13
* ಲ್ಯಾಬ್ ಟೆಕ್ನಿಷಿಯನ್ ಟ್ರೈನಿ: 2
* ಕಚೇರಿ ಸಹಾಯಕ ಟ್ರೈನಿ: 2
* ಐಟಿಐ ಟ್ರೈನಿ : 7
ವಯೋಮಿತಿ : ಸಹಾಯಕ ಮ್ಯಾನೇಜರ್ ಹುದ್ದೆ : 35
ವರ್ಷ, ಅಧಿಕಾರಿ 32, ಸಹಾಯಕ ಅಧಿಕಾರಿ 31,
ಲ್ಯಾಬ್ ಟೆಕ್ನಿಷಿಯನ್ ಟ್ರೈನಿ 39 ವರ್ಷ ಗರಿಷ್ಠ.
ವಿದ್ಯಾರ್ಹತೆ: ಸಹಾಯಕ ಮ್ಯಾನೇಜರ್ ಹುದ್ದೆ :
ಮೆಕ್ಯಾನಿಕಲ್ ವಿಷಯದಲ್ಲಿ
ಇಂಜಿನಿಯರಿಂಗ್ ಡಿಗ್ರಿ, ಎಚ್ ಆರ್
ಹುದ್ದೆಗೆ ಎಂಬಿಎ (ಎಚ್ ಆರ್/ಐಆರ್) , ಆಡಿಟ್
ಹುದ್ದೆಗೆ ಐಸಿಡಬ್ಲ್ಯೂಎ/ಸಿಎ, ಸಹಾಯಕ ಅಧಿಕಾರಿ
ಹುದ್ದೆ ಸಿವಿಎಲ್ ಇಂಜಿನಿಯರ್
ಅರ್ಜಿ ಸಲ್ಲಿಸುವುದು ಹೇಗೆ?: ಸರಿಯಾದ ಮಾದರಿ
ಅರ್ಜಿಯನ್ನು ತುಂಬಿ recruitment@
beml.co.in ಗೆ ಇಮೇಲ್ ಕಳಿಸಿ
ಜೊತೆಗೆ ಭಾವಚಿತ್ರ ಸಮೇತ ಕೆಳಗಿನ
ವಿಳಾಸಕ್ಕೆ ಕಳಿಸಿ
General Manager (HR), Recruitment Cell,
BEML Soudha, No.23/1,
4ನೇ ಮುಖ್ಯರಸ್ತೆ,
ಸಂಪಂಗಿರಾಮ ನಗರ,
ಬೆಂಗಳೂರು- 560 027.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
23/09/2015.
ಹೆಚ್ಚಿನ ಮಾಹಿತಿಗೆ ಬಿಇಎಂಎಲ್ ವೆಬ್ ತಾಣ
ವೀಕ್ಷಿಸಿ
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್
(ಬಿಇಎಂಎಲ್) ಸಂಸ್ಥೆ ರಕ್ಷಣೆ,
ಗಣಿಗಾರಿಕೆ, ನಿರ್ಮಾಣ, ರೈಲ್ವೆ, ಮೆಟ್ರೋ, ಏರೋಸ್ಪೇಸ್
ಸೇರಿದಂತೆ ವಿಭಾಗ ಕ್ಷೇತ್ರಗಳಿಗೆ ಪೂರಕವಾದ ಹೆವಿ
ಇಂಜಿನಿಯರಿಂಗ್
ಕಂಪನಿಯಾಗಿದ್ದು, ಸುಮಾರು 3000 ಕೋಟಿ ರು.ಗೂ
ಅಧಿಕ ವಾರ್ಷಿಕ ಆದಾಯ
ಹೊಂದಿದೆ.