ಕಾಂಗ್ರೆಸ್ ಗೆ ಬಿಬಿಎಂಪಿ ಗದ್ದುಗೆ; ಮಂಜುನಾಥ್ ರೆಡ್ಡಿಗೆ ಮೇಯರ್ ಪಟ್ಟ.
@EDUCATIONGKNEWS.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬಿಟಿಎಂ ಲೇಔಟ್ ನ ಮಡಿವಾಳ ವಾರ್ಡ್ ನ ಕಾಂಗ್ರೆಸ್ ಕಾರ್ಪೋರೇಟರ್ ಮಂಜುನಾಥ್ ರೆಡ್ಡಿ ಸರಳ ಬಹುಮತ ಗಳಿಸುವ ಮೂಲಕ ನೂತನ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಬಿಬಿಎಂಪಿ ಅಧಿಕಾರದ ಗದ್ದುಗೆ ಮತ್ತು ಮೇಯರ್ ಪಟ್ಟದ ಕುತೂಹಲಕ್ಕೆ ತೆರೆ ಬಿದ್ದಂತಾಗಿದೆ.

198 ಕಾರ್ಪೋರೇಟರ್ ಗಳು ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೇಯರ್ ಆಯ್ಕೆಗಾಗಿ ಚುನಾವಣೆ ಪ್ರಕ್ರಿಯೆ ನಡೆದಿತ್ತು. ಮೇಯರ್ ಚುನಾವಣೆಯಲ್ಲಿ ಕಾರ್ಪೋರೇಟರ್ ಗಳು ಕೈ ಎತ್ತುವ ಮೂಲಕ ಮತದಾನ ಮಾಡಿದ್ದರು. ಬಳಿಕ ಅಧಿಕಾರಿಗಳು ಲೆಕ್ಕಹಾಕುವ ಮೂಲಕ ಮೇಯರ್ ಆಯ್ಕೆಯನ್ನು ಘೋಷಿಸಿದರು.

ಮತದಾನದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ 131 ಸದಸ್ಯರು ಮಂಜುನಾಥ್ ರೆಡ್ಡಿ ಪರ ಮತ ಚಲಾಯಿಸುವ ಮೂಲಕ ಮೇಯರ್ ಆಗಿ ಆಯ್ಕೆ ಮಾಡಿದರು. ಆ ಮೂಲಕ ರೆಡ್ಡಿ 3 ಬಾರಿ ಬಿಬಿಎಂಪಿ ಮೇಯರ್ ಆದಂತಾಗಿದೆ.

ಮೇಯರ್ ಚುನಾವಣೆಗೂ ಮುನ್ನ ಶುಕ್ರವಾರ ಬೆಳಗ್ಗೆ (ಬಿಬಿಎಂಪಿ ಕ್ಲೈಮ್ಯಾಕ್ಸ್ ಇಂದು)  ಮೇಯರ್, ಉಪಮೇಯರ್ ಚುನಾವಣೆಯ ಪ್ರಕ್ರಿಯೆ ಆರಂಭಗೊಂಡಿತ್ತು. ಏತನ್ಮಧ್ಯೆ ರಾಜ್ಯಸಭಾ ಪಕ್ಷೇತರ ಸದಸ್ಯ, ಉದ್ಯಮಿ ವಿಜಯ್ ಮಲ್ಯ ಬಿಬಿಎಂಪಿ ಮೇಯರ್ ಚುನಾವಣೆ ಮತದಾನಕ್ಕೆ ಗೈರಾಗಿದ್ದರು.

ಬಿಬಿಎಂಪಿ ಒಟ್ಟು ಬಲಾಬಲ 260.

ಅಧಿಕಾರಕ್ಕೆ ಬೇಕಾಗಿರುವ ಮ್ಯಾಜಿಕ್ ಸಂಖ್ಯೆ 131 ಆಗಿದೆ.

12ಘಂಟೆಯಿಂದ 1 ಘಂಟೆಯವರೆಗೆ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸದ್ಯದ ಬಲಾಬಲಾ ಕಾಂಗ್ರೆಸ್ 103, ಜೆಡಿಎಸ್ 21, ಪಕ್ಷೇತರ 7 ಒಟ್ಟು 131.

ಕಾಂ ಕಾರ್ಪೋರೇಟರ್ಸ್ ಎಂಎಲ್ಎ ಎಂಎಲ್ಸಿ ಲೋಕಸಭೆ ರಾಜ್ಯಸಭೆ ಒಟ್ಟು

76 13 08 02 04 103

ಕೈ ಮುಗಿಯುತ್ತಾ ಬಂದ ಮುನಿರತ್ನ ವಿರುದ್ಧ ಅಶೋಕ್ ಗರಂ:

ಬಿಬಿಎಂಪಿ ಮೇಯರ್, ಉಪಮೇಯರ್ ಹಿನ್ನೆಲೆಯಲ್ಲಿ ಬಿಬಿಎಂಪಿ ಕಚೇರಿಗೆ ಶಾಸಕ  ಮುನಿರತ್ನ ನಗುತ್ತಾ ಕೈಮುಗಿಯುತ್ತಾ ಆಗಮಿಸಿದ್ದ ವೇಳೆ, ಬಿಜೆಪಿ ಕಾರ್ಪೋರೇಟರ್ಸ್ ಗಳ ಜೊತೆ ಕುಳಿತಿದ್ದ ಅಶೋಕ್ ಕೈ ಸನ್ನೆ ಮಾಡುತ್ತ ಹೋಗು, ಹೋಗು ಎಂದು ಹೇಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.

ಜೆಡಿಎಸ್ ಕಾರ್ಪೋರೇಟರ್ಸ್ ಎಂಎಲ್ ಎ ಎಂಎಲ್ ಸಿ

ಲೋಕಸಭಾ ರಾಜ್ಯಸಭಾ ಒಟ್ಟು

14 03 03 00 01 21

ರವಿಂದ್ರ ರೆಡ್ಡಿ ಸೇರಿ 30 ಜನರು ಪೊಲೀಸರ ವಶಕ್ಕೆ:

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಗೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ಯುವಮೋರ್ಚಾ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾದ ರವೀಂದ್ರ ರೆಡ್ಡಿ ಸೇರಿ 30 ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಿಜೆಪಿ ಕಾರ್ಪೋರೇಟರ್ಸ್ ಎಂಎಲ್ಎ ಎಂಎಲ್ಸಿ ಲೋಕಸಭೆ ರಾಜ್ಯಸಭೆ ಒಟ್ಟು

101 12 10 03 02 128

ಪ್ರಮಾಣವಚನ ಸ್ವೀಕರಿಸಿದ 198 ಕಾರ್ಪೋರೇಟರ್ಸ್ಸ್ ಗಳು:
ಬಿಬಿಎಂಪಿಗೆ ನೂತನವಾಗಿ ಆಯ್ಕೆಯಾದ 198 ಕಾರ್ಪೋರೇಟರ್ಸ್ಸ್ ಗಳು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಎಲ್ಲಾ ಸದಸ್ಯರಿಗೂ ಪ್ರಾದೇಶಿಕ ಆಯುಕ್ತೆ ಎಂವಿ ಜಯಂತಿ ಪ್ರತಿಜ್ಞಾವಿಧಿ ಬೋಧಿಸಿದರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023