ಅಮೆರಿಕ ಓಪನ್:ಪೇಸ್–ಹಿಂಗಿಸ್ಗೆ ಪ್ರಶಸ್ತಿ

ನ್ಯೂಯಾರ್ಕ್ (ಐಎಎನ್ಎಸ್):
ಅಮೋಘ ಪ್ರದರ್ಶನ ತೋರಿದ
ಭಾರತದ ಹಿರಿಯ ಟೆನಿಸ್ ಆಟಗಾರ
ಲಿಯಾಂಡರ್ ಪೇಸ್ ಅವರು ಅಮೆರಿಕ
ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್
ವಿಭಾಗದಲ್ಲಿ ಪ್ರಶಸ್ತಿ ಎತ್ತಿಹಿಡಿದಿದ್ದಾರೆ.
ಪೇಸ್ ಅವರು ಸ್ವಿಟ್ಜರ್ಲೆಂಡ್ನ
ಮಾರ್ಟಿನಾ ಹಿಂಗಿಸ್ ಅವರ ಜತೆಗೂಡಿ ಈ
ಸಾಧನೆ ಮಾಡಿದ್ದಾರೆ.
ಇಂಡೋ –ಸ್ವಿಸ್ ಜೋಡಿ 6–4, 3–6,
10–7ರಲ್ಲಿ ಅಮೆರಿಕದ ಬೆಥನಿ ಮಟ್ಟೆಕ್
ಸ್ಯಾಂಡ್ಸ್ ಹಾಗೂ ಸ್ಯಾಮ್ ಕ್ವೆರ್ರಿ
ಅವರನ್ನು ಮಣಿಸಿತು. ಈ ಮೂಲಕ
ಒಂದೇ ವರ್ಷ ಮೂರು ಪ್ರಮುಖ
ಟೂರ್ನಿಗಳ ಮಿಶ್ರ ಡಬಲ್ಸ್ ಪ್ರಶಸ್ತಿ ಗೆದ್ದ
ಶ್ರೇಯಕ್ಕೆ ಪೇಸ್–ಮಾರ್ಟಿನಾ
ಜೋಡಿ ಪಾತ್ರವಾಗಿದೆ. 1969ರಲ್ಲಿ
ಮಾರ್ಗರೆಟ್ ಕೋರ್ಟ್ ಹಾಗೂ
ಮಾರ್ಟಿ ರಿಯೆಸೆನ್ ಜೋಡಿ ಇದೇ
ಬಗೆಯ ಸಾಧನೆಗೈದಿತ್ತು.
ಪೇಸ್ ಅವರ 9ನೇ ಪ್ರಶಸ್ತಿ: 42 ವರ್ಷದ
ಪೇಸ್ ಅವರಿಗೆ ಮಿಶ್ರ ಡಬಲ್ಸ್ನಲ್ಲಿ
ದೊರೆತ 9ನೇ ಪ್ರಶಸ್ತಿ ಇದಾಗಿದೆ. ಈ
ಮೂಲಕ ಅವರ ಒಟ್ಟು ಗ್ರ್ಯಾಂಡ್
ಸ್ಲಾಮ್ಗಳ ಸಂಖ್ಯೆ 17ಕ್ಕೆ
ಏರಿಕೆಯಾಗಿದೆ.
19ನೇ ಪ್ರಶಸ್ತಿ: ಹಿಂಗಿಸ್ ಅವರಿಗೆ ಮಿಶದ್ರ
ಡಬಲ್ಸ್ನಲ್ಲಿ ಒಲಿದ 4ನೇ ಪ್ರಶಸ್ತಿ
ಇದಾಗಿದೆ. ಈ ಮೂಲಕ ಅವರು 10
ಮಹಿಳಾ ಡಬಲ್ಸ್, ಐದು ಸಿಂಗಲ್ಸ್
ಪ್ರಶಸ್ತಿಗಳು ಸೇರಿದಂತೆ ಗ್ರ್ಯಾಂಡ್
ಸ್ಲಾಮ್ ಗಳ ಸಂಖ್ಯೆ 19ಕ್ಕೆ ಏರಿದೆ.
20ನೇ ಪ್ರಶಸ್ತಿಗೂ ಅವಕಾಶ: ಮಿಶ್ರ
ಡಬಲ್ಸ್ನಲ್ಲಿ ಪೇಸ್ ಅವರೊಂದಿಗೆ
ಪ್ರಶಸ್ತಿ ಜಯಿಸಿರುವ ಹಿಂಗಿಸ್, ಇದೇ
ಟೂರ್ನಿಯ ಮಹಿಳಾ ಡಬಲ್ಸ್ನಲ್ಲಿ
ಭಾರತದ ಸಾನಿಯಾ ಮಿರ್ಜಾ
ಅವರೊಂದಿಗೆ ಫೈನಲ್
ತಲುಪಿದ್ದಾರೆ. ಅಲ್ಲಿಯೂ ಪ್ರಶಸ್ತಿ
ಜಯಿಸಿದರೆ, ಅದೊಂದು
ಸಾಧನೆಯಾಗಲಿದೆ.
ಲಿಯಾಂಡರ್ ಪೇಸ್ ಮತ್ತು
ಸ್ವಿಟ್ಜರ್ಲೆಂಡ್ನ ಮಾರ್ಟಿನಾ ಹಿಂಗಿಸ್
ಅವರಿಗೆ ನರೇಂದ್ರ ಮೋದಿ
ಅಭಿನಂದನೆ ತಿಳಿಸಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023