ಪ್ರಶಸ್ತಿಯೊಂದಿಗೆ ಬಾಕ್ಸಿಂಗ್ಗೆ ಮೇವೆದರ್ ವಿದಾಯ



ಲಾಸ್ ವೆಗಾಸ್, ನೆವಾಡ (ಪಿಟಿಐ/ ಐಎಎನ್ಎಸ್):
ಬಾಕ್ಸಿಂಗ್ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿ
ಸಿದ್ದ ವಿಶ್ವ ಬಾಕ್ಸಿಂಗ್ ಚಾಂಪಿಯನ್
ಷಿಪ್ನಲ್ಲಿ ನಿರೀಕ್ಷೆ ಯಂತೆಯೇ
ಅಮೆರಿಕದ ಫ್ಲಾಯ್ಡ್ ಮೇವೆದರ್ ಜೂನಿಯರ್
ಚಾಂಪಿಯನ್ ಆಗಿದ್ದಾರೆ.
ಎಂಜಿಎಂ ಗ್ರ್ಯಾಂಡ್ ಗಾರ್ಡನ್
ಅರೆನಾದಲ್ಲಿ ಭಾನುವಾರ ಬೆಳಗಿನ ಜಾವ ನಡೆದ ವೆಲ್ಟರ್
ವೇಟ್ ವಿಭಾಗದ ಸೆಣಸಾಟದಲ್ಲಿ ಮೇವೆದರ್ ಜೂನಿಯರ್
ಮತ್ತು ಆ್ಯಂಡ್ರೆ ಬರ್ಟೊ
ಅವರನ್ನು ಮಣಿಸಿದರು. ಇವರ ನಡುವಿನ ಹೋರಾಟ ಭಾರಿ
ಸುದ್ದಿ ಮಾಡಿತ್ತು.
ಈ ಪಂದ್ಯದ ಬಳಿಕ ವೃತ್ತಿಪರ
ಬಾಕ್ಸಿಂಗ್ಗೆ ವಿದಾಯ ಹೇಳುವುದಾಗಿ ಮೇವೆದರ್
ಮೊದಲೇ ಪ್ರಕಟಿಸಿದ್ದರು ಎನ್ನುವ
ಸುದ್ದಿ ಹರಿದಾಡಿತ್ತು.
ಆದ್ದರಿಂದ ವಿಶ್ವ ಚಾಂಪಿಯನ್ನ
ಕೊನೆಯ 'ಪಂಚ್ಗಳು' ಹೇಗಿರ
ಬಹುದು ಎನ್ನುವ ಕುತೂಹಲವೂ ಜಗತ್ತಿನಾದ್ಯಂತ
ಮನೆ ಮಾಡಿದ್ದವು.
ಈ ಹಣಾಹಣಿಯಲ್ಲಿ ಮೇವೆದರ್ ತಮ್ಮ
ಎದುರಾಳಿಯ ವಿರುದ್ಧ ಮೇಲುಗೈ ಸಾಧಿಸಿ ಅಜೇಯ
ಗೆಲುವಿನ ಓಟ ಮುಂದುವರಿಸಿದರು.
'ವರ್ಷದ ದೊಡ್ಡ
ಪಂದ್ಯಕ್ಕಾಗಿ' ಮೂವರು
ತೀರ್ಪುಗಾರರನ್ನು ನಿಯೋಜಿ ಸಲಾಗಿತ್ತು. ಇವರು
ನೀಡಿದ ಅಂಕಗಳ ಆಧಾರದಲ್ಲಿ
ವಿಜೇತರನ್ನು ನಿರ್ಧರಿಸಲಾಯಿತು.
ತೀರ್ಪುಗಾರರು ಮೇವೆದರ್ ಜೂನಿಯರ್ಗೆ
ಕ್ರಮವಾಗಿ 118, 117 ಮತ್ತು 120
ಪಾಯಿಂಟ್ಸ್ ನೀಡಿದರು.
ಬರ್ಟೊಗೆ ಲಭಿಸಿದ್ದು ಕ್ರಮವಾಗಿ
110, 111 ಮತ್ತು 108 ಪಾಯಿಂಟ್ಸ್.
ವಿಶ್ವ ಬಾಕ್ಸಿಂಗ್ ಮಂಡಳಿ
(ಡಬ್ಲ್ಯುಬಿಸಿ) ಮತ್ತು ವಿಶ್ವ ಬಾಕ್ಸಿಂಗ್
ಸಂಸ್ಥೆ (ಡಬ್ಲ್ಯುಬಿಎ) ನಡೆಸಿದ ಹಲವಾರು
ಟೂರ್ನಿಯ ವೆಲ್ಟರ್ವೇಟ್ ವಿಭಾಗದಲ್ಲಿ ಮೇವೆದರ್
ಚಾಂಪಿಯನ್ ಆಗಿದ್ದರು.
ಇಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಹೆಚ್ಚು ಬಾರಿ ವಿಶ್ವ
ಪ್ರಶಸ್ತಿ ಜಯಿಸಿದ್ದ ದಾಖಲೆ
ಹೊಂದಿರುವ ಹೆವಿವೇಟ್
ಚಾಂಪಿ ಯನ್ ರಾಕಿ
ಮರ್ಸಿಯಾನೊ ದಾಖಲೆ ಯನ್ನು
ಸರಿಗಟ್ಟಿದರು. ಮರ್ಸಿಯಾನೊ 49
ಬಾರಿ ಪ್ರಶಸ್ತಿ ಗೆದ್ದಿದ್ದಾರೆ.
ಹಾಲಿ ಚಾಂಪಿಯನ್ ಮೇವೆದರ್ ಮತ್ತು
ಬರ್ಟೊ ನಡುವಣ ಹೋರಾಟ ನೋಡಲು
ಗ್ರ್ಯಾಂಡ್ ಗಾರ್ಡನ್ ಅರೆನಾ ದಲ್ಲಿ 13, 395
ಮಂದಿ ಸೇರಿದ್ದರು. 12 ಸುತ್ತುಗಳ ಈ
ಹೋರಾಟದಲ್ಲಿ ಮೇವೆದರ್ ಪಾರಮ್ಯ ಮೆರೆದರು.
ಮೇವೆದರ್ ನಿವೃತ್ತಿ ಈಗ ಅಧಿಕೃತ
ಈ ಪಂದ್ಯ ಗೆದ್ದ ಬಳಿಕ ಮೇವೆದರ್ ವೃತ್ತಿಪರ
ಬಾಕ್ಸಿಂಗ್ಗೆ ವಿದಾಯ ಹೇಳಿದರು.
'ಇಂದಿಗೆ ವೃತ್ತಿ ಜೀವನ ಮುಗಿಯಿತು.
ಇದು ಅಧಿಕೃತ. 19 ವರ್ಷಗಳ ಕಾಲ ನನ್ನನ್ನು
ಬೆಂಬಲಿಸಿದ ಅಭಿಮಾನಿಗಳಿಗೆ
ಋಣಿಯಾಗಿದ್ದೇನೆ. ಅಭಿಮಾನಿಗಳ ಪ್ರೋತ್ಸಾಹ
ಇಲ್ಲದಿದ್ದರೆ ಈ ಮಟ್ಟಕ್ಕೆ ಬೆಳೆಯಲು
ಸಾಧ್ಯವಾಗುತ್ತಿರಲಿಲ್ಲ' ಎಂದು
ಪಂದ್ಯದ ಬಳಿಕ ಭಾವುಕರಾಗಿ ಅವರು ನುಡಿದರು.
***
ನನಗೀಗ 38 ವರ್ಷ. ಆದರೂ ನನ್ನಲ್ಲಿನ
ಉತ್ಸಾಹ ಎಳ್ಳಷ್ಟೂ ಕುಂದಿಲ್ಲ. ಈಗಲೂ
ಮೊದಲಿನಷ್ಟೇ
ಬಲಶಾಲಿಯಾಗಿದ್ದೇನೆ. ಈ ಪಂದ್ಯದಲ್ಲಿ
ಗೆದ್ದು ಇದನ್ನು ಸಾಬೀತು ಮಾಡಿದ್ದೇನೆ
-ಫ್ಲಾಯ್ಡ್ ಮೇವೆದರ್ ಜೂನಿಯರ್

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023