ಕಲ್ಕುಳಿ ವಿಠಲ್ ಹೆಗ್ಗಡೆಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕಾರ

ಬೆಂಗಳೂರು, ಸೆ.25- ಕರ್ನಾಟಕದ ಜನಪರ
ಚಳವಳಿಗಳಲ್ಲಿ
ತೊಡಗಿಸಿಕೊಂಡು
ರೈತರ ಹೋರಾಟ ಹಾಗೂ ಮಲೆನಾಡಿನ ಸಮಸ್ಯೆಗಳ ಬಗ್ಗೆ
ಬೆಳಕು ಚೆಲ್ಲುತ್ತಿರುವ ಕಲ್ಕುಳಿ ವಿಠಲ್ ಹೆಗ್ಗಡೆ ಅವರಿಗೆ
ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಕಲ್ಕುಳಿ ವಿಠಲ್ ಹೆಗ್ಗಡೆ ಅವರು ಮಲೆನಾಡಿನ ಪರಿಸರ,
ಇಲ್ಲಿನ ಜನಜೀವನ, ಸಾಮಾಜಿಕ
ವ್ಯವಸ್ಥೆ ಸೇರಿದಂತೆ ಹಲವಾರು ಪ್ರಚಲಿತ
ವಿದ್ಯಮಾನಗಳ ಬಗ್ಗೆ ರಚಿಸಿದ್ದ ಮಂಗನ
ಬೇಟೆ ಪರಿಸರ ಕಥನಕ್ಕೆ ಈ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿಯು 5 ಸಾವಿರ ರೂ. ನಗದು, ಪ್ರಶಸ್ತಿ ಪತ್ರ
ಒಳಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ
ಉಮಾಶ್ರೀ ಅವರು ನ.7ರಂದು
ಧಾರವಾಡದಲ್ಲಿ ವಿತರಣೆ ಮಾಡಲಿದ್ದಾರೆ. ಮಲೆನಾಡಿನ
ಭಾಗದಲ್ಲಿ ಜನಪ್ರಿಯ
ಹೋರಾಟಗಾರರೆನಿಸಿಕೊಂಡಿರುವ
ವಿಠಲ್ ಹೆಗ್ಗಡೆ ಅವರಿಗೆ ಕನ್ನಡದ ಅನೇಕ
ಧೀಮಂತ ಸಾಹಿತಿಗಳು, ಪ್ರಗತಿಪರ
ಚಿಂತಕರು ಸೇರಿದಂತೆ ಅನೇಕರ
ಒಡನಾಡಿಯಾಗಿದ್ದಾರೆ. ರಾಷ್ಟ್ರಕವಿ ಕುವೆಂಪು
ಅವರ ವಿಶ್ವಮಾನವ ಸಂದೇಶ ಹಾಗೂ ಅವರ ಕೆಲವು
ಪುಸ್ತಕಗಳಿಂದ ಪ್ರೇರೇಪಿತರಾಗಿದ್ದ ಹೆಗ್ಗಡೆ
ಅವರು ನಂತರ ಸಾಹಿತ್ಯ ಲೋಕದ
ದಿಗ್ಗಜರೆನಿಸಿದ್ದ ಜ್ಞಾನಪೀಠ ಪ್ರಶಸ್ತಿ
ಪುರಸ್ಕೃತ ು.ಆರ್.ಅನಂತಮೂರ್ತಿಯವರ
ಆತ್ಮೀಯರೂ ಹೌದು ಕುವೆಂಪು ಅವರ
ಪುತ್ರ ಪೂರ್ಣಚಂದ್ರ ತೇಜಸ್ವಿ ಅವರ ಜತೆ ಅನೇಕ
ರೈತಪರ ಹೋರಾಟ, ಸಾಮಾಜಿಕ ಅನಿಷ್ಟ ಪದ್ಧತಿಗಳ
ವಿರುದ್ಧ ಮಲೆನಾಡು ಭಾಗದಲ್ಲಿ ಹೋರಾಟ ನಡೆಸಿ
ಜನಜಾಗೃತಿ ಮೂಡಿಸಿದ್ದರು. ವಿಶೇಷವಾಗಿ ಕುದುರೆಮುಖ,
ಗಣಿಗಾರಿಕೆ, ಮಲೆನಾಡು ಭಾಗದಲ್ಲಿ ರೈತರನ್ನು
ಒಕ್ಕಲೆಬ್ಬಿಸುತ್ತಿದ್ದ ಸರ್ಕಾರದ ವಿರುದ್ಧ
ದೊಡ್ಡ ಜನಾಂದೋಲನವನ್ನೇ
ಸೃಷ್ಟಿಸಿದ್ದರು. ಅಲ್ಲದೆ, ಈ ಭಾಗದಲ್ಲಿ ಅಡಿಕೆ
ಬೆಳೆಗಾರರ ಹೋರಾಟಕ್ಕೆ ಕೈ ಜೋಡಿಸಿದ್ದರು. ಅವರಿಗೆ
ಪ್ರಶಸ್ತಿ ಬಂದಿರುವುದು ಅಭಿಮಾನಿಗಳಲ್ಲಿ
ಸಂತಸ ಉಂಟುಮಾಡಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023