Drop


Saturday, September 26, 2015

ಮೊಟ್ಟ ಮೊದಲ ಆಸ್ಟ್ರೋಸ್ಯಾಟ್ ಉಡಾವಣೆಗೆ ಕ್ಷಣಗಣನೆ ಆರಂಭ::-

ಶ್ರೀಹರಿಕೋಟ (ಆಂಧ್ರ ಪ್ರದೇಶ),
ಸೆ.26- ಖಗೋಳ ವಿಜ್ಞಾನದ
ಅಧ್ಯಯನಕ್ಕಾಗಿ ದೇಶೀಯ
ತಂತ್ರಜ್ಞಾನದಲ್ಲಿ ಸಿದ್ಧಪಡಿಸಲಾದ
ಭಾರತದ ಮೊಟ್ಟಮೊದಲ
ಖಗೋಳ ಉಪಗ್ರಹ
(ಆಸ್ಟ್ರೊಸ್ಯಾಟ್)ವನ್ನು ಅಮೆರಿಕದ
ನೆರವಿನೊಂದಿಗೆ ಉಡಾಯಿಸಲು
ಇಲ್ಲಿನ ಸತೀಶ್ಧವನ್ ಬಾಹ್ಯಾಕಾಶ
ಕೇಂದ್ರದಲ್ಲಿ ಸಕಲ ಸಿದ್ಧತೆ ನಡೆದಿದ್ದು,
50 ತಾಸುಗಳ ಕ್ಷಣಗಣನೆ ಇಂದು ಬೆಳಗ್ಗೆ
8 ಗಂಟೆಗೆ ಆರಂಭವಾಯಿತು ಎಂದು
ಬಾಹ್ಯಾಕಾಶ ಕೇಂದ್ರದ
ಅಧಿಕಾರಿಗಳು ತಿಳಿಸಿದ್ದಾರೆ. ಈ
ಸುಧಾರಿತ ಉಪಗ್ರಹವನ್ನು
ಪೋಲಾರ್ ಸ್ಯಾಟಲೈಟ್ ಲಾಂಚ್
ವೆಹಿಕಲ್ (ಪಿಎಸ್ಎಲ್ವಿ)-ಸಿ30ರ
ಮುಖಾಂತರ ಸೆ.28ರಂದು ಬೆಳಗ್ಗೆ 1 0
ಗಂಟೆಗೆ ಸತೀಶ್ಧವನ್ ಬಾಹ್ಯಾಕಾಶ
ಕೇಂದ್ರದ (ಶ್ರೀಹರಿಕೋಟ)
ಉಡ್ಡಯನ ಕೇಂದ್ರದಿಂದ
ಅಂತರಿಕ್ಷಕ್ಕೆ ಚಿಮ್ಮಿಸಲಾಗುವುದು.
ಈ ಉಪಗ್ರಹದ ತೂಕ 1,513 ಕೆಜಿ. ಇದರಲ್ಲಿ
ಅಳವಡಿಸಲಾಗಿರುವ ಎಕ್-ರೆ
ತರಂಗಾಂತರಗಳ ಮೂಲಕ
ಅನ್ಯಗ್ರಹಗಳ ಸ್ವರೂಪಗಳನ್ನು ಪತ್ತೆ
ಹಚ್ಚಲಾಗುತ್ದೆ. ಇದರೊಂದಿಗೆ
ಇದೇ ಪಿಎಸ್ಎಲ್ವಿ-ಸಿ30ರಲ್ಲಿ ಅಮೆರಿಕದ
ನಾಲ್ಕು ಹಾಗೂ ಕೆನಡ,
ಇಂಡೋನೇಷ್ಯಾದ ತಲಾ
ಒಂದು (ಒಟ್ಟು ಆರು) ಪುಟ್ಟ
ಉಪಗ್ರಹಗಳನ್ನೂ
ಉಡಾಯಿಸಲಾಗುವುದು ಎಂದು
ಅಧಿಕಾರಿಗಳು ಹೇಳಿದ್ದಾರೆ.