B,lore based Micro Labs introduced a new drug CARIPILL TAB for Dengue fever.

ಬೆಂಗಳೂರು: ಬೆಂಗಳೂರು ಮೂಲದ
ಮೈಕ್ರೊ ಲ್ಯಾಬ್ಸ್ ಲಿಮಿಟೆಡ್ ಔಷಧ
ಕಂಪನಿ ಇತ್ತೀಚೆಗೆ ಡೆಂಗ್ಯು
ಜ್ವರದಿಂದ ನರಳುವ ರೋಗಿಗಳಿಗೆ 'ಬ್ಲಡ್
ಪ್ಲೇಟ್ಲೆಟ್ ಕೌಂಟ್(ರಕ್ತ ಕಣಗಳ
ಸಂಖ್ಯೆ)' ಹೆಚ್ಚಿಸುವ 'ಕಾರಿಪಿಲ್' ಗುಳಿಗೆಯನ್ನು
ಮಾರುಕಟ್ಟೆಗೆ ಪರಿಚಯಿಸಿದೆ.
ಮೈಕ್ರೊ ಲ್ಯಾಬ್ಸ್ನ ಈ ಗುಳಿಗೆಗೆ
ವೈಜ್ಞಾನಿಕ ಮತ್ತು ನಿಯಂತ್ರಣ ಪ್ರಾಧಿಕಾರ
ಅನುಮೋದನೆ ನೀಡಿದೆ.
ಪಪ್ಪಾಯಿ ಎಲೆಯ ರಸದಿಂದ 'ಕಾರಿಪಿಲ್' ಗುಳಿಗೆ
ತಯಾರಿಸಲಾಗಿದ್ದು, ಇದರ ಸೇವನೆಯಿಂದ ರೋಗಿಗೆ
ಯಾವುದೇ ಅಡ್ಡ ಪರಿಣಾಮ ಉಂಟಾಗದು
ಎಂದು ಕಂಪನಿ ತಿಳಿಸಿದೆ. ಗುಳಿಗೆ
ತಯಾರಿಕೆಯಲ್ಲಿ ಸಾಕಷ್ಟು ಸಂಶಓಧನೆ
ನಡೆಸಲಾಗಿದ್ದು, ದೇಶಾದ್ಯಂತ ಸುಮಾರು 1 ಲಕ್ಷ
ಡೆಂಗ್ಯು ರೋಗಿಗಳು ಈ ಮಾತ್ರೆ ಬಳಸಿದ್ದು,
ಗುಳಿಗೆಯ ಸುರಕ್ಷತೆ ಮತ್ತು ಫಲದಾಯಕತೆ
ದೃಢಪಟ್ಟಿದೆ ಎಂದು ಮೈಕ್ರೊ
ಲ್ಯಾಬ್ಸ್ ತಿಳಿಸಿದೆ.
ಕಾರಿಪಿಲ್ ಗುಳಿಗೆ ಕುರಿತು ವಿವರ ನೀಡಿರುವ
ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ವೈದ್ಯ ಡಾ.
ಎ.ಸಿ. ಗೌಡ, ಡೆಂಗ್ಯು ರೋಗಿಗಳಿಗೆ ಈ ಗುಳಿಗೆಯ
ಸೇವನೆಯಿಂದ ಪ್ರೋತ್ಸಾಹದಾಯಕ ಫಲಿತಾಂಶ
ಬಂದಿದೆ. ಕಾರಿಪಿಲ್ಗ್ ಇರುವ ನೈಜ ಸಾಮರ್ಥ್ಯ
ಇದರಿಂದ ವ್ಯಕ್ತವಾಗಿದೆ. ಲ್ಯುಕೇಮಿಯಾ
ಸೇರಿದಂತೆ ವಿವಿಧ ಮಾರಣಾಂತಿಕ ರೋಗಗಳ
ಚಿಕಿತ್ಸೆಗೂ ಕಾರಿಪಿಲ್ ಬಳಸಬಹುದು. ಎರಡು ವರ್ಷಗಳ
ನಿರಂತರ ಸಂಶೋಧನೆ ಮತ್ತು 250 ರೋಗಿಗಳ
ಮೇಲೆ ಕ್ಲಿನಿಕಲ್ ಪ್ರಯೋಗದ ತರುವಾಯ
ಕಾರಿಪಿಲ್ನಿಂದ ಸಕಾರಾತ್ಮಕ ಫಲಿತಾಂಶ
ಬಂದಿರುವುದು ದೃಢಪಟ್ಟಿದೆ ಎಂದಿದ್ದಾರೆ.
ಮೈಕ್ರೊ ಲ್ಯಾಬ್ಸ್ ಕಾರ್ಯಕಾರಿ
ನಿರ್ದೇಶಕ ಅಶೋಕ್ ಜೈನ್, ಮಾರಣಾಂತಿಕ ರೋಗವಾಗಿ
ಪರಿಣಮಿಸಿರುವ ಡೆಂಗ್ಯುಗೆ ಚಿಕಿತ್ಸೆ
ನೀಡಲು ನಮ್ಮ ತಂಡವು ಕಾರಿಪಿಲ್
ಕಂಡು ಹಿಡಿದು ಗಮನಾರ್ಹ ಸಾಧನೆ ಮಾಡಿದೆ.
ಕಾರಿಪಿಲ್ ಕೈಗೆಟಕುವ ಬೆಲೆಗೆ ಸಿಗಲಿದೆ. ಮಕ್ಕಳಿಗಾಗಿ
'ಕಾರಿಪಿಲ್ ಸಿರಪ್' ಶೀಘ್ರವೇ ಮಾರುಕಟ್ಟೆಗೆ
ಬರಲಿದೆ ಎಂದರು.
ವಿಶ್ವ ಆರೋಗ್ಯ ಸಂಘಟನೆ 'ಡಬ್ಲ್ಯುಎಚ್ಒ
' ಪ್ರಕಾರ, ಡೆಂಗ್ಯು ಜಾಗತಿಕ ಸಾರ್ವಜನಿಕ
ಆರೋಗ್ಯ ಸಮಸ್ಯೆಯಾಗಿ ಕಾಡುತ್ತಿದ್ದು,
ವಿಶ್ವಾದ್ಯಂತ 250 ಕೋಟಿ ಜನರು
ಇದರಿಂದ ಗಂಡಾಂತರ
ಎದುರಿಸುತ್ತಿದ್ದಾರೆ. ವಾರ್ಷಿಕವಾಗಿ 5 ಕೋಟಿ ಜನರಿಗೆ
ಡೆಂಗ್ಯು ಸೋಂಕು ತಗುಲುತ್ತಿದೆ.
ಕಳೆದ ಒಂದು ತಿಂಗಳಿಂದ
ಕರ್ನಾಟದಲ್ಲಿ ಡೆಂಗ್ಯು ಜ್ವರ ತ್ವರಿತವಾಗಿ
ಏರಿಕೆ ಕಾಣುತ್ತಿದೆ. ರಾಜ್ಯಾದ್ಯಂತ ಸುಮಾರು
1,100 ಜನರಿಗೆ ಈ ಸೋಂಕು ವ್ಯಾಪಿಸಿದೆ.
ಇದರೊಂದಿಗೆ ರಾಜ್ಯದಲ್ಲಿ
ಈ ವರ್ಷ ಡೆಂಗ್ಯು ಪ್ರಕರಣಗಳ
ಸಂಖ್ಯೆ 3,026ಕ್ಕೆ ಏರಿಕೆ ಆದಂತಾಗಿದೆ.
ರಾಜ್ಯದ ವಿವಿಧೆಡೆ ರಕ್ತನಿಧಿಗಳಲ್ಲಿ ಸಾಕಷ್ಟು
ಪ್ಲೇಟ್ಲೆಟ್ ಸಂಗ್ರಹ ಸಾಧ್ಯವಾಗದ ಕಾರಣ,
ಡೆಂಗ್ಯು ಮಾರಣಾಂತಿಕ ರೋಗವಾಗಿ
ಪರಿಣಮಿಸಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023