Drop


Wednesday, September 16, 2015

Government Discontinues Stamps Of Rajiv And Indira Gandhi ರಾಜೀವ್ , ಇಂದಿರಾ ಸ್ಟ್ಯಾಂಪ್ ಸ್ಥಗಿತ

ಹೊಸದಿಲ್ಲಿ : ಮಾಜಿ ಪ್ರಧಾನಿಗಳಾದ
ಇಂದಿರಾ ಹಾಗೂ ರಾಜೀವ್
ಗಾಂಧಿ ಅವರ ಚಿತ್ರವಿರುವ ಅಂಚೆ
ಚೀಟಿಗಳನ್ನು ಸ್ಥಗಿತಗೊಳಿಸಲು
ಸರಕಾರ ನಿರ್ಧರಿಸಿದೆ.
ರಾಜೀವ್, ಇಂದಿರಾ ಅಂಚೆ ಚೀಟಿ
ಬದಲು ಆಧುನಿಕ ಭಾರತದ
ನಿರ್ಮಾತೃಗಳ ಅಂಚೆ ಚೀಟಿಯನ್ನು
ಹೊರತರಲು ಎನ್ಡಿಎ ಸರಕಾರ
ನಿರ್ಧರಿಸಿದೆ. ಜವಾಹರ ಲಾಲ್ ನೆಹರು,
ಮಹಾತ್ಮಗಾಂಧಿ,
ಎ.ಆರ್.ಅಂಬೇಡ್ಕರ್ ಹಾಗೂ ಮದರ್
ತೆರೇಸಾ ಅವರ ಅಂಚೆ ಚೀಟಿಗಳನ್ನು
ಉಳಿಸಿಕೊಳ್ಳಲು ಸರಕಾರ
ತೀರ್ಮಾನಿಸಿದೆ.
ಹೊಸ ಪರಿಕಲ್ಪನೆಯ ಅಂಚೆ
ಚೀಟಿಗಳು ಶ್ಯಾಂ ಪ್ರಸಾದ್
ಮುಖರ್ಜಿ, ದೀನ್ ದಯಾಳ್
ಉಪಾಧ್ಯಾಯ, ನೇತಾಜಿ
ಸುಭಾಷ್ ಚಂದ್ರ ಬೋಸ್, ಸರ್ದಾರ್
ವಲ್ಲಭಬಾಯ್ ಪಟೇಲ್, ಛತ್ರಪತಿ
ಶಿವಾಜಿ, ಮೌಲಾನಾ ಆಜಾದ್, ಭಗತ್
ಸಿಂಗ್, ಜಯಪ್ರಕಾಶ್ ನಾರಾಯಣ,
ರಾಮ್ ಮನೋಹರ್
ಲೋಹಿಯಾ,ವಿವೇಕಾನಂದ,
ಮಹಾರಾಣಾ ಪ್ರತಾಪ್ ಅವರ
ಚಿತ್ರಗಳನ್ನು ಒಳಗೊಂಡಿರಲಿದೆ.
'ಹೊಸ ಪರಿಕಲ್ಪನೆಗೆ ಅನುಗುಣವಾಗಿ
ಅಂಚೆ ಚೀಟಿಗಳ ಸೇರ್ಪಡೆ ಹಾಗೂ
ಕೆಲ ಅಂಚೆ ಚೀಟಿಗಳ ಬಳಕೆ
ಸ್ಥಗಿತಗೊಳುಸುವುದು
ಮಾಮೂಲಿ ಪ್ರಕ್ರಿಯೆ. ಸೀಮಿತ ಬಳಕೆಗೆ
ನಿಗದಿಯಾಗಿದ್ದ ಇಂಥ
ಖ್ಯಾತನಾಮರ ಸ್ಮರಣಾರ್ಥ ಅಂಚೆ
ಚೀಟಿಗಳು ಇನ್ನು ಮುಂದೆ
ಸುಲಭವಾಗಿ ಲಭ್ಯವಾಗಲಿವೆ,'ಎಂದು
ಅಧಿಕೃತ ವಕ್ತಾರರು ತಿಳಿಸಿದ್ದಾರೆ.
'ನಮ್ಮ ಸರಕಾರಕ್ಕೆ ದೇಶ ಎಂದರೆ
ಕೇವಲ ಒಂದು ಕುಟುಂಬ ಅಲ್ಲ,
ಸಿದ್ಧಾಂತಗಳು ಬದಲಾದರೂ,
ಎಲ್ಲರನ್ನೂ ಗೌರವಿಸುವ ಸಂಪ್ರದಾಯ
ರೂಢಿಸಿಕೊಂಡಿದ್ದೇವೆ. ದೇಶದ
ಎಲ್ಲ ಅಂಚೆ ಕಚೇರಿಗಳಲ್ಲಿ
ಖ್ಯಾತನಾಮರ ಅಂಚೆ ಚೀಟಿಗಳು
ಸುಲಭವಾಗಿ ಲಭ್ಯವಾಗಬೇಕು
ಎಂದು ಅಂಚೆ ಇಲಾಖೆಗೆ ನಿರ್ದೇಶನ
ನೀಡಲಾಗಿದೆ,' ಎಂದು ಸಂಪರ್ಕ ಸಚಿವ
ರವಿ ಶಂಕರ್ ಪ್ರಸಾದ್ ಈ ತಿಂಗಳ
ಆರಂಭದಲ್ಲಿ ಹೇಳಿದ್ದರು.
ಮುಂದಿನ ತಿಂಗಳಿಂದ ಹೊಸ ಅಂಚೆ
ಚೀಟಿ:
'ಹೊಸ ಪರಿಕಲ್ಪನೆಯ ಅಂಚೆ ಚೀಟಿಗಳ
ಮುದ್ರಣ ಕಾರ್ಯ ನಡೆಯುತ್ತಿದ್ದು,
ತಿಂಗಳೊಳಗೆ ದೇಶದ ಎಲ್ಲ ಅಂಚೆ
ಕಚೇರಿಗಳಲ್ಲಿ ಲಭ್ಯವಾಗಲಿವೆ. ಹಳೆ
ಪರಿಕಲ್ಪನೆಯ ಅಂಚೆ ಚೀಟಿಗಳು ಖಾಲಿ
ಆಗುವವರೆಗೂ ಗ್ರಾಹಕರಿಗೆ
ಲಭ್ಯವಾಗಲಿದೆ,' ಎಂದು
ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಯೋಜನೆಯಡಿ ಹೋಮಿ ಜೆ
ಬಾಬಾ, ಜೆಆರ್ಡಿ ಟಾಟಾ, ಸಿವಿ
ರಾಮನ್, ಸತ್ಯಜಿತ್ ರೇ ಅವರ ಅಂಚೆ
ಚೀಟಿಗಳನ್ನು ಕೈ ಬಿಡಲಾಗುತ್ತಿದೆ.
ಇವು ಲಭ್ಯ : ಬಾಲ ಗಂಗಾಧರ ತಿಲಕ್,
ರಾಜೇಂದ್ರ ಪ್ರಸಾದ್, ಶ್ರೀನಿವಾಸ್
ರಾಮಾನುಜನ್, ರವೀಂದ್ರನಾಥ್
ಟ್ಯಾಗೋರ್,ಸುಬ್ರಮಣ್ಯ
ಭಾರತಿ, ಭೀಮಸೇನ್ ಜೋಶಿ,
ಎಂ.ಎಸ್ ಸುಬ್ಬಲಕ್ಷ್ಮಿ, ಬಿಸ್ಮಿಲ್ಲಾ
ಖಾನ್ ಅವರ ಅಂಚೆ ಚೀಟಿಗಳು
ಲಭ್ಯವಾಗಲಿವೆ.