V R Ramesh- First kannadiga appointed as Additional Secretary of Lok Sabha ...

ಮೊದಲ ಬಾರಿಗೆ ಲೋಕಸಭೆ ಎಎಸ್
ಹುದ್ದೆಗೆ ಕನ್ನಡಿಗ ವಿ.ಆರ್. ರಮೇಶ್
ಉದಯವಾಣಿ, Sep 02, 2015, 3:00 AM IST
ಉದಯವಾಣಿ ದೆಹಲಿ ಪ್ರತಿನಿಧಿ: ಸಂಸತ್ತಿನ
ಇತಿಹಾಸದಲ್ಲೇ ಮೊದಲ ಬಾರಿಗೆ
ಕನ್ನಡಿಗರೊಬ್ಬರು ಲೋಕಸಭೆಯ
ಹೆಚ್ಚುವರಿ ಕಾರ್ಯದರ್ಶಿ (ಎಎಸ್) ಹುದ್ದೆಗೆ
ನೇಮಕಗೊಂಡಿದ್ದಾರೆ. ಬೆಂಗಳೂರಿನ ವಿ.ಆರ್.
ರಮೇಶ್ ಅವರನ್ನು ಹೆಚ್ಚುವರಿ ಹುದ್ದೆಗೆ ನೇಮಕ ಮಾಡಿ
ಲೋಕಸಭೆಯ ಜಂಟಿ ಕಾರ್ಯದರ್ಶಿ ಪಿ.ಸಿ. ಕೌಲ್
ಆದೇಶ ಹೊರಡಿಸಿದ್ದಾರೆ. 35
ವರ್ಷಗಳಿಂದ ಸಂಸತ್ ಮತ್ತು ಸರ್ಕಾರದ
ವಿವಿಧ ಹುದ್ದೆಗಳನ್ನು ರಮೇಶ್
ಅಲಂಕರಿಸಿದ್ದಾರೆ.
16 ವರ್ಷಗಳ ಕಾಲ ರಾಜ್ಯ ಶಾಸ ಕಾಂಗ
ಸಚಿವಾಲಯದ ಹೊಣೆ
ಹೊತ್ತಿಕೊಂಡಿದ್ದ ರಮೇಶ್,
2012ರಲ್ಲಿ ನಡೆದ ಉಪರಾಷ್ಟ್ರಪತಿ ಚುನಾ
ವಣೆಯಲ್ಲಿ ಸಹಾಯಕ ರಿಟರ್ನಿಂಗ್
ಆಫೀಸರ್ ಆಗಿ ಕರ್ತವ್ಯ
ನಿರ್ವಹಿಸಿದ್ದರು.ಸಂಸದರು ಮತ್ತು ಐಎಎಸ್
ಅಧಿಕಾರಿಗಳಿಗೆ ಸಂಸದೀಯ ಕಾನೂನು
ಹಾಗೂ ವ್ಯವ ಹಾರಗಳ ಬಗ್ಗೆ ಉಪನ್ಯಾಸ
ನೀಡಿದ್ದು ಸೇರಿದಂತೆ, ಲೋಕ ಸಭೆಯ
ವಿವಿಧ ಪ್ರಕಟಣೆಗಳ ಸಹಾಯಕ ಸಂಪಾದಕ ರಾಗಿ
ಕಾರ್ಯ ನಿರ್ವಹಿಸಿದ್ದಾರೆ. ವಿವಿಧ ದೇಶಗಳ
ಸಂಸತ್ತುಗಳಿಗೆ ಭೇಟಿ, ಕಾಮನ್ವೆಲ್ತ್ ದೇಶಗಳ
ಹಿರಿಯ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ
ಮುಂತಾದ ಚಟುವಟಿಕೆಗಳನ್ನು ನಿರಂತರವಾಗಿ
ನಡೆಸಿಕೊಂಡು ಬಂದಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023